ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ, ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಸೂಚನೆ

Published : Feb 21, 2026, 11:17 PM IST
Shankaracharya Avimukteshwaranand

ಸಾರಾಂಶ

ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ, ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಸೂಚನೆ ನೀಡಿದೆ. ಇಬ್ಬರು ಸ್ವಾಮಿಜಿಗಳ ವಿರುದ್ದ ಪೋಕ್ಸೋ ಕೇಸ್ ದಾಖಲಿಸುವಂತೆ ಉತ್ತರ ಪ್ರದೇಶ ಕೋರ್ಟ್ ಆದೇಶಿಸಿದೆ. 

ಲಖನೌ (ಫೆ.21) ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅವಿ ಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿಗಳ ವಿರುದ್ದ ಪೋಕ್ಸೋ ಕೇಸ್ ದಾಖಲಿಸುವಂತೆ ಉತ್ತರ ಪ್ರದೇಶದ ಪ್ರಯಾಗರಾಜ್ ಪೋಕ್ಸೋ ಕೋರ್ಟ್ ಆದೇಶ ನೀಡಿದೆ.ಝುನ್ಸಿ ಪೊಲೀಸ್ ಠಾಣೆಗೆ ಈ ಸೂಚನೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಅವಿ ಮುಕ್ತೇಶ್ವರಾನಂದ ಸರಸ್ವತಿ ಸಾಮೀಜಿಗಳ ಜೊತೆಗೆ ಮತ್ತೊರ್ವ ಸ್ವಾಮೀಜಿ ಮುಕುಂದಾನಂದ ಗಿರಿ ವಿರುದ್ದವೂ ಪೋಕ್ಸೋ ಕೇಸ್ ದಾಖಲಿಸುವಂತೆ ಕೋರ್ಟ್ ಆದೇಶದಲ್ಲಿ ಸೂಚಿಸಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ.

ಕಳೆದ ವಾರ ಅವಿ ಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿಜಿಗಳ ಈ ಲೈ0ಗಿಕ ಕಿರುಗಳ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಪೋಕ್ಸ್ ಕೋರ್ಟ್ ಸ್ಪೆಷಲ್ ಜಡ್ಜ್ ವಿನೋದ್ ಕುಮಾರ್ ಚೌರಾಸಿಯಾ ಆದೇಶ ಕಾಯ್ದಿರಿಸಿದ್ದರು. ಮತ್ತಷ್ಟು ದಾಖಲೆ ಹಾಗೂ ಸಾಕ್ಷ್ಯಗಳಿಗಾಗಿ ಆದೇಶ ಕಾಯ್ದಿರಿಸಲಾಗಿತ್ತು. ಇದೀಗ ಆದೇಶ ಹೊರಬಂದಿದ್ದು, ಇಬ್ಬರು ಸ್ವಾಮೀಜಿಗಳಿಗೆ ಸಂಕಷ್ಟ ಹೆಚ್ಚಾಗಿದೆ.

ವಿಡಿಯೋ ದಾಖಲೆ

ಅವಿಮುಕ್ತೇಶ್ವರಾನಂದ ಸರಸ್ವತಿ ಸಾಮೀಜಿಗಳ ವಿದ್ಯಾ ಮಠದ ನಾಲ್ಕನೇ ಮಹಡಿಯಲ್ಲಿ ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅಶುತೋಶ್ ಬ್ರಹ್ಮಾಚಾರಿ ಮಹಾರಾಜ್ ದೂರು ನೀಡಿದ್ದರು. ಇದಕ್ಕೆ ಪೂರಕವಾದ ಕೆಲ ದಾಖಲೆಗಳನ್ನು ನೀಡಿದ್ದರು. ಈ ದಾಖಳೆಗಳನ್ನು ಪರಿಶೀಲಿಸಿ ಸ್ವಾಮೀಜಿಗಳ ವಿರುದ್ದ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದರು. ಇದಕ್ಕೆ ಪೂರಕವಾಗಿ ಕೆಲ ವಿಡಿಯೋ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಬಿಎನ್‌ಎಸ್ ಸೆಕ್ಷನ್ 69, 74, 75, 76, 79, ಹಾಗೂ 109ರ ಅಡಿಯಲ್ಲಿ ದೂರು ದಾಖಲಿಸಲು ಬ್ರಹ್ಮಾಚಾರಿ ಮಹಾರಾಜ್ ಕೋರ್ಟ್‌ಗೆ ಸಲ್ಲಿಸಿದ್ದ ಮನವಿಯಲ್ಲಿ ಆಗ್ರಹಿಸಿದ್ದರು.

ಕೋರ್ಟ್ ಆದೇಶದ ಬೆನ್ನಲ್ಲೇ ಸತ್ಯಕ್ಕೆ ಜಯ ಎಂದ ಅಶುತೋಶ್ ಬ್ರಹ್ಮಾಚಾರಿ ಮಹಾರಾಜ್ ಎಂದಿದ್ದಾರೆ. ವಿದ್ಯಾ ಮಠದಲ್ಲಿ ನಡೆಯತ್ತಿರುವ ಬೆಳವಣಿಗೆ ಆಘಾತಕಾರಿಯಾಗಿದೆ. ಈ ಕುರಿತು ಕೋರ್ಟ್‌ ಮೆಟ್ಟಿಲು ಹತ್ತಲಾಗಿದೆ.ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಪ್ರಾಪ್ತ ವಿದ್ಯಾರ್ಥಿಗಳ ವಿರುದ್ದ ನಡೆಯತ್ತಿರುವ ದೌರ್ಜನ್ಯದ ವಿರುದ್ದ ಈ ಹೋರಾಟ ಎಂದಿದ್ದಾರೆ. ಇದೀಗ ಕೋರ್ಟ್ ದೂರು ದಾಖಲಿಸಲು ಸೂಚನೆ ನೀಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

CBSE Exam: ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ
ಮುಂಬೈ ಬೀದಿಗಳಲ್ಲಿ 'ಟಾಕ್ಸಿಕ್' ನಟ ಯಶ್ ಹೆಂಡ್ತಿ ಹವಾ! ಕುತೂಹಲ ಮೂಡಿಸಿದ ರಾಧಿಕಾ ಪಂಡಿತ್ 'ಮುಂಬೈ ಡೈರೀಸ್' ಪೋಸ್ಟ್!