ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಸಮರ ಸಾರಿದ್ದಾರೆ. ಭ್ರಷ್ಟಾಚಾರವನ್ನು ಗೆದ್ದಲಿಗೆ ಹೋಲಿಸಿ, ಅದನ್ನು ನಿರ್ನಾಮ ಮಾಡಲು ಕರೆ ನೀಡಿದ್ದಾರೆ. ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಲಕ್ನೋ (ಮಾ.22): ತಮ್ಮ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಉಗ್ರ ದಾಳಿ ಮಾಡುವತ್ತ ಕೆಲಸ ಮಾಡಿತ್ತಿದೆ. ಸರ್ಕಾರದ ವ್ಯವಸ್ಥೆಯನ್ನು ಟೊಳ್ಳು ಮಾಡುವ ಗೆದ್ದಲು ಎಂದು ಭ್ರಷ್ಟಾಚಾರವನ್ನು ಕರೆದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಇಂಥ ಗೆದ್ದಲುಗಳನ್ನು ನಿರ್ನಾ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಒಂದು ಕಾಲದಲ್ಲಿ ದೇಶದ ಕೆಲ ಭಾಗದ ನಾಗರೀಕರಿಂದ ಬೀಮಾರು ರಾಜ್ಯ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರ ಪ್ರದೇಶ ಇಂದು ದೇಶದ 2ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಜ್ಯವಾಗಿದೆ ಎಂದರು. ಗೊಂಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯುವ ಉದ್ಯಮಿ ವಿಕಾಸ ಅಭಿಯಾನ (ಎಂ-ಯುವಿಎ) ಅಡಿಯಲ್ಲಿ ದೇವಿಪಟ್ಟಣ ವಿಭಾಗದ 1,423 ಯುವ ಉದ್ಯಮಿಗಳಿಗೆ ₹55 ಕೋಟಿ ಸಾಲ ವಿತರಿಸಿದ ನಂತರ ಈ ಮಾತು ಹೇಳಿದ್ದಾರೆ.
ಇದೇ ವೇಳೆ ಭ್ರಷ್ಟಾಚಾರ ಮಾಡುವ ಹಾಗೂ ಲಂಚ ತೆಗೆದುಕೊಳ್ಳುವ ಅಧಿಕಾರಿಗಳಿಗೂ ವೇದಿಕೆಯಿಂದಲೇ ಅವರು ಎಚ್ಚರಿಕೆ ನೀಡಿದ್ದಾರೆ. 'ನಿಮ್ಮಿಂದ ಯಾರಾದರೂ ಲಂಚವನ್ನು ಕೇಳಿದರೆ, ಅದು ಆತನ ಕುಟುಂಬದ ಪಾಲಿನ ಕೊನೆಯ ಸರ್ಕಾರಿ ನೌಕರಿ ಆಗಿರುತ್ತದೆ. ಆತನ ಕುಟುಂಬದ ಮುಂದಿನ ಯಾವ ಜನರೇಷನ್ ಕೂಡ ಸರ್ಕಾರಿ ನೌಕರಿ ಪಡೆಯಬಾರದು ಅಂಥಾ ಕೆಲಸ ಮಾಡಲಿದ್ದೇವೆ. ನಾವು ಅಂಥಾ ಕಠಿಣ ಕ್ರಮ ಕೈಗೊಳ್ಳಲಿದ್ದು, ಭವಿಷ್ಯದ ಜನರಿಗೆ ಉದಾಹರಣೆಯಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಯುವಕರನ್ನುದ್ದೇಶಿಸಿ ಮಾತನಾಡಿದ ಅವರು, "ಡಬಲ್ ಎಂಜಿನ್ ಸರ್ಕಾರವು ಯುವ ಉದ್ಯಮಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬೆಂಬಲ ನೀಡುತ್ತಿದೆ. ಒಂದು ರಾಷ್ಟ್ರದ ಶಕ್ತಿರನ್ನು ಅದರ ಯುವ ಪ್ರತಿಭೆ, ಶಕ್ತಿ ಮತ್ತು ಶಿಸ್ತಿನಿಂದ ಅಳೆಯಲಾಗುತ್ತದೆ. ಯುವಕರಿಗೆ ಅವಕಾಶಗಳು ಸಿಕ್ಕಾಗ, ಯಾವುದೇ ಶಕ್ತಿಯು ಆ ದೇಶಕ್ಕೆ ಹಾನಿ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದರು. ಉತ್ತರ ಪ್ರದೇಶವನ್ನು ದೇಶದ ಬೆಳವಣಿಗೆಯ ಎಂಜಿನ್ ಆಗಿ ಪರಿವರ್ತಿಸಲು ಉದ್ಯಮಶೀಲತೆಯ ಕಡೆಗೆ ತಾಳ್ಮೆ ಮತ್ತು ದೃಢನಿಶ್ಚಯದಿಂದ ಮುನ್ನಡೆಯುವಂತೆ ಅವರು ಯುವಕರಿಗೆ ಕರೆ ನೀಡಿದರು.
"ಒಡಿಒಪಿ (ಒಂದು ಜಿಲ್ಲೆ, ಒಂದು ಉತ್ಪನ್ನ) ಅಥವಾ ವಿಶ್ವಕರ್ಮ ಶ್ರಮ ಸಮ್ಮಾನ್ ಯೋಜನೆಯಂತಹ ಯೋಜನೆಗಳ ಮೂಲಕ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ನಾನು ಯುವಕರಿಗೆ ಕರೆ ನೀಡುತ್ತೇನೆ. ತಾಳ್ಮೆಯಿಂದ ಅದರ ಕಡೆಗೆ ಕೆಲಸ ಮಾಡಿ. ಸರ್ಕಾರದ ಏಕಗವಾಕ್ಷಿ ಮತ್ತು ನಿವೇಶ್ ಸಾರಥಿ ಅವರಿಗೆ ಸಹಾಯ ಮಾಡುತ್ತದೆ.ಸಾಲ ಮಂಜೂರು ಮಾಡುವ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ, ದೂರು ದಾಖಲಿಸಿ. ಸಾಲ ಪಡೆಯುವ ಹೆಸರಿನಲ್ಲಿ ಯಾವುದೇ ವಂಚನೆಯನ್ನು ಸಹಿಸಲಾಗುವುದಿಲ್ಲ'ಎಂದು ಅವರು ಹೇಳಿದರು.
ಸಿಎಂ ಯೋಗಿ ಆಕ್ಷನ್: ನಿರ್ಲಕ್ಷ್ಯಕ್ಕೆ ಕಠಿಣ ಕ್ರಮ, ಉತ್ತಮ ಕೆಲಸಕ್ಕೆ ಪ್ರೋತ್ಸಾಹ!
"ಅಂಥವರ ಮೇಲೆ ನಾವು ಒಂದು ಉದಾಹರಣೆಯಾಗುವ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಅವರಿಗೆ ಸರ್ಕಾರಿ ಸೇವೆಯಲ್ಲಿ ಎಂದಿಗೂ ಸ್ಥಾನ ಸಿಗದಂತೆ ಮಾಡುತ್ತೇವೆ" ಎಂದು ಸಿಎಂ ಹೇಳಿದರು. "ಭ್ರಷ್ಟಾಚಾರವು ವ್ಯವಸ್ಥೆಯನ್ನು ಗೆದ್ದಲಿನಂತೆ ದುರ್ಬಲಗೊಳಿಸುತ್ತದೆ ಮತ್ತು ಅದನ್ನು ತೊಡೆದುಹಾಕಲು ಭವಿಷ್ಯದ ಪೀಳಿಗೆಯ ಒಳಿತಿಗಾಗಿ ಸಮಾಜ ಮತ್ತು ಸರ್ಕಾರ ಎರಡರಿಂದಲೂ ಸಾಮೂಹಿಕ ಪ್ರಯತ್ನಗಳು ಬೇಕಾಗುತ್ತವೆ" ಎಂದು ಯೋಗಿ ಹೇಳಿದರು.
ತೆರಿಗೆ ವಸೂಲಿ ಹೆಚ್ಚಿಸಲು ಸಿಎಂ ಯೋಗಿ ಹೊಸ ಪ್ಲಾನ್!
ಮುಖ್ಯಮಂತ್ರಿ ಯುವ ಉದ್ಯಮಿ ಅಭಿಯಾನದಡಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಯುವಕರು ನೋಂದಾಯಿಸಿಕೊಂಡಿದ್ದಾರೆ ಮತ್ತು 32,700 ಕ್ಕೂ ಹೆಚ್ಚು ಜನರು ಈಗಾಗಲೇ ಸಾಲ ಅನುಮೋದನೆಗಳನ್ನು ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಅವರ ಪ್ರಕಾರ, ಮಾರ್ಚ್ 25 ರಿಂದ ಪ್ರತಿ ಜಿಲ್ಲೆಯಲ್ಲಿ ನಡೆಯಲಿರುವ ಮೂರು ದಿನಗಳ ಮೇಳದಲ್ಲಿ, ಹೆಚ್ಚಿನ ಯುವಕರು ಈ ಯೋಜನೆಗೆ ಸಂಪರ್ಕ ಸಾಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
भ्रष्टाचार और भ्रष्टाचारियों के प्रति सरकार जीरो टॉलरेंस की नीति के तहत काम कर रही है....
इतनी बड़ी कार्रवाई कर देंगे कि वह एक नजीर बन जाएगी... pic.twitter.com/efYlzFgPAM