
ವಾಶಿಂಗ್ಟನ್ (ಜು.29) ಏರ್ ಇಂಡಿಯಾ ವಿಮಾನ ದುರಂತ ಘಟನೆ ನೋವು ಆರಿಲ್ಲ. ಪ್ರಯಾಣಿಕರು ಮಾತ್ರವಲ್ಲ, ವಿದ್ಯಾರ್ಥಿಗಳು, ವೈದ್ಯರು ಸೇರಿದಂತೆ ಹಲವರು ಈ ಘಟನೆಯಲ್ಲಿ ಮಡಿದಿದ್ದಾರೆ. ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಎರಡೂ ಎಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡಿದೆ. ಇದೇ ರೀತಿಯ ಯುನೈಟೆಡ್ ಏರ್‌ಲೈನ್ಸ್ ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡ್‌ನಲ್ಲಿ ಒಂದು ಎಂಜಿನ್ ಆಫ್ ಆದ ಘಟನೆ ನಡೆದಿದೆ. ಹೀಗಾಗಿ ಪೈಲೆಟ್ ತುರ್ತು ಪರಿಸ್ಥಿಯ ಕೊನೆಯ ಘಳಿಗೆಯಲ್ಲಿ ನೀಡುವ ಮೇಡೇ ಕಾಲ್ ನೀಡಿದ್ದಾರೆ. ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ವಿಮಾನ ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇಂಧನ ತುಂಬಿದ್ದ ಕಾರಣ ಬರೋಬ್ಬರಿ 2 ಗಂಟೆ ಕೆಲವೇ ಕೆಲವು ಅಡಿ ಎತ್ತರದಲ್ಲಿ ಅಪಾಯಾಕಾರಿ ರೀತಿಯಲ್ಲಿ ಹಾರಾಡಿದ ಘಟನೆ ಅಮೆರಿಕದ ವಾಶಿಂಗ್ಟನ್‌ನಲ್ಲಿ ನಡೆದಿದೆ.
ಬೋಯಿಂಗ್ ಡ್ರೀಮ್‌ಲೈನರ್ ವಿಮಾನ
ವಾಶಿಂಗ್ಟನ್‌ನಿಂದ ಮ್ಯೂನಿಚ್‌ಗೆ ಹೊರಟ್ಟಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಮಹಾ ದುರಂತದಿಂದ ಕೂದಲೆಳೆ ಅತಂರದಲ್ಲಿ ಪಾರಾಗಿದೆ. ಏರ್ ಇಂಡಿಯಾ ಪತನಗೊಂಡ ವಿಮಾನ ಕೂಡ ಬೋಯಿಂಗ್ ಡ್ರೀಮ್‌ಲೈನರ್ ವಿಮಾವಾಗಿತ್ತು. ಇದೀಗ ಆತಂಕ ಎದುರಿಸಿದ ಯುನೈಟೆಡ್ ಏರ್‌ಲೈನ್ಸ್ ವಿಮಾನ ಕೂಡ ಬೋಯಿಂಗ್ ಡ್ರೀಮ್‌ಲೈನರ್ ವಿಮಾನ ಆಗಿದೆ.
ಯುಎ108 ವಿಮಾನದಲ್ಲಿ ಆತಂಕ
ವಾಶಿಂಗ್ಟನ್‌ನಿಂದ ಮ್ಯೂನಿಚ್‌ಗೆ ಹೊರಡಲು ಪ್ರಯಾಣಿಕರು ಬೋರ್ಡಿಂಗ್ ಆಗಿದ್ದಾರೆ. ತಕ್ಕ ಸಮಯಕ್ಕೆ ಯುನೈಟೆಡ್ ಏರ್‌ಲೈನ್ಸ್ 108 ವಿಮಾನ ರನ್‌ವೇಯಲ್ಲಿ ವೇಗವಾಗಿ ಸಾಗಿದೆ. ಟೇಕ್ ಆಫ್ ಆದ ಬೆನ್ನಲ್ಲೇ ವಿಮಾನದಲ್ಲಿ ತಾಂತ್ರಿಕ ದೂಷವಿರುವುದು ಪತ್ತೆಯಾಗಿದೆ. ಎಡಭಾಗದ ಎಂಜಿನ್ ಸಂಪೂರ್ಣ ಸ್ಥಗಿತಗೊಂಡಿದೆ. ತಕ್ಷಣವೇ ಪೈಲೆಟ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಕೇವಲ 5,000 ಅಡಿ ಹಾರಿದಾಗ ಎಂಜಿನ್ ಸ್ಥಗಿತಗೊಂಡಿದೆ. ಹೀಗಾಗಿ ಪೈಲೆಟ್ ಮೇಡೇ ಸಂದೇಶ ನೀಡಿದ್ದಾರೆ.
ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ವ್ಯವಸ್ಥೆ ಮಾಡಿದ ಕಂಟ್ರೋಲ್ ರೂಂ
ಟೇಕ್ ಆಫ್ ಆದ ಬೆನ್ನಲ್ಲೇ ಮೇಡೇ ಕಾಲ್ ಕರೆ ಬಂದ ಕಾರಣ ಕಂಟ್ರೋಲ್ ರೂಂ ತುರ್ತು ಪರಿಸ್ಥಿತಿ ಘೋಷಿಸಿದೆ. ತುರ್ತು ಲ್ಯಾಂಡಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ವಿಮಾನದಲ್ಲಿ ಇಂಧನ ಭರ್ತಿ ಇದ್ದ ಕಾರಣ ತಕ್ಷಣ ಲ್ಯಾಂಡಿಂಗ್ ಮಾಡುವುದು ಮತ್ತಷ್ಟು ಅಪಾಯಕಾರಿಯಾಗಿತ್ತು. ಹೀಗಾಗಿ ಪೈಲೆಟ್ ಬರೋಬ್ಬರಿ 2 ಗಂಟೆ ವಾಶಿಂಗ್ಟನ್ ಆಗಸದಲ್ಲಿ ಸುತ್ತಾಡಿದ್ದಾರೆ. ಒಂದು ಎಂಜಿನ್‌ನಲ್ಲಿ ವಿಮಾನ ಹಾರಾಟ ನಡೆಸಿ ಇಂಧನ ಖಾಲಿ ಮಾಡಿ ಬಳಿಕ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ಡೆನ್ವರ್ ವಿಮಾನದಲ್ಲಿ ಹೊತ್ತಿಕೊಂಡಿದ್ದ ಬೆಂಕಿ
ಇತ್ತೀಚೆಗಷ್ಟೆ ಅಮೆರಿಕದ ಡೆನ್ವರ್ ವಿಮಾನ ನಿಲ್ದಾಣಧಲ್ಲಿ ರನ್‌ವೇಯಲ್ಲಿ ಸಾಗುತ್ತಿದ್ದಂತೆ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿತ್ತು. ಲ್ಯಾಂಡಿಂಗ್ ಗೇರ್ ಸಮಸ್ಯೆಯಿಂದ ವಿಮಾನ ರನ್‌ವೇನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅಲರ್ಟ್ ಸಂದೇಶದಿಂದ ಪೈಲೆಟ್ ವಿಮಾನ ನಿಲ್ಲಿಸಿದ್ದಾದರೆ. ಅಷ್ಟರಲ್ಲೇ ಬೆಂಕಿ ಕೆನ್ನಾಲಗೆ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರನ್ನು ತುರ್ತಾಗಿ ಹೊರಕ್ಕೆ ಕಳುಹಿಸಲಾಗಿತ್ತು. ದಟ್ಟ ಹೊಗೆ, ಬೆಂಕಿಯ ನಡುವೆ ಪ್ರಯಾಣಿಕರು ಸ್ಲೈಡಿಂಗ್ ಮೂಲಕ ವಿಮಾನದಿಂದ ಹೊರಬಂದಿದ್ದರು. ಈ ವೇಳೆ ಓರ್ವ ಪ್ರಯಾಣಿಕರಿಗೆ ಗಾಯವಾಗಿತ್ತು.
ಅಹಮ್ಮದಾಬಾದ್ ವಿಮಾನ ದುರಂತ
ಅಹಮ್ಮದಾಬಾದ್‌ನಿಂದ ಲಂಡನ್‌ಗೆ ಟೇಕ್ಆಪ್ ಏರ್ ಇಂಡಿಯಾ ವಿಮಾನ ಕೆಲವೇ ಸೆಕೆಂಡ್‌ಗಳಲ್ಲಿ ಪತನಗೊಂಡಿತ್ತು. ಟೇಕ್ಆಫ್ ಆದ ಕೆಲವೇ ಸೆಕೆಂಡ್‌ನಲ್ಲಿ ವಿಮಾನದ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತ್ತು. ವಿಮಾನದಲ್ಲಿ ಓರ್ವ ಪ್ರಯಾಣಿಕ ಬದುಕುಳಿದಿದ್ದ. ಇನ್ನು ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಇತರ ಪ್ರಯಾಣಿಕರು ದುರಂತದಲ್ಲಿ ಮೃತಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ