ಸಿಎಎ ಅಲ್ಪಸಂಖ್ಯಾತ ವಿರೋಧಿ ಅಲ್ಲ: ವಿಕೆ ಸಿಂಗ್!

Suvarna News   | Asianet News
Published : Jan 05, 2020, 06:16 PM IST
ಸಿಎಎ ಅಲ್ಪಸಂಖ್ಯಾತ ವಿರೋಧಿ ಅಲ್ಲ: ವಿಕೆ ಸಿಂಗ್!

ಸಾರಾಂಶ

'ಪೌರತ್ವ ತಿದ್ದುಪಡಿ ಕಾಯ್ದೆ ಯಾರ ಹಕ್ಕನ್ನೂ ಕಸಿಯುವುದಿಲ್ಲ'| 'ಅಲ್ಪಸಂಖ್ಯಾತರಿಗೆ ಸಿಎಎ ಕಾಯ್ದೆಯಿಂದ ಅನುಕೂಲವಾಗಲಿದೆ'| ಕೇಂದ್ರ ಸಚಿವ ಜನರಲ್ ವಿಕೆ ಸಿಂಗ್ ಅಭಿಮತ| ' ವೋಟ್ ಬ್ಯಾಂಕ್‌ ರಾಜಕಾರಣದಿಂದಾಗಿ ಕಾಯ್ದೆ ಕುರಿತು ಜನರಿಗೆ ತಪ್ಪು ಮಾಹಿತಿ'|'ಜನರು ಸಹಬಾಳ್ವೆಯ ಜೀವನ ನಡೆಸುವ ಉದ್ದೇಶವನ್ನು ಕಾಯ್ದೆ ಹೊಂದಿದೆ'| ಪಾಕ್ ಗುರುದ್ವಾರ ದಾಳಿಯನ್ನು ಖಂಡಿಸಿದ ವಿಕೆ ಸಿಂಗ್| 

ನವದೆಹಲಿ(ಜ.05): ಪೌರತ್ವ ತಿದ್ದುಪಡಿ ಕಾಯ್ದೆ ಯಾರ ಹಕ್ಕನ್ನೂ ಕಸಿಯುವುದಿಲ್ಲ. ಅಲ್ಪಸಂಖ್ಯಾತರಿಗೆ ಕಾಯ್ದೆಯಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಹಾಗೂ ನಿವೃತ್ತ ಸೇನಾ ಜನರಲ್ ವಿಕೆ.ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟ್ ಬ್ಯಾಂಕ್‌ ರಾಜಕಾರಣ ಮಾಡುವ ಕೆಲವು ಪಕ್ಷಗಳು ಕಾಯ್ದೆ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ ಎಂದು ಹರಿಹಾಯ್ದರು.

ಚಿಕಾಗೋದಲ್ಲಿ ಮೊಳಗಿದ ಸಿಎಎ ಪರ ಧ್ವನಿ: ಅನಿವಾಸಿ ಭಾರತೀಯರಿಂದ ಮೆರವಣಿಗೆ!

ಕಾಯ್ದೆಯು ಯಾರ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ. ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಸಲುವಾಗಿಯೇ ಇದನ್ನು ಜಾರಿಗೆ ತರಲಾಗಿದೆ. ಜನರು ಸಹಬಾಳ್ವೆಯ ಜೀವನ ನಡೆಸುವ ಉದ್ದೇಶವನ್ನು ಕಾಯ್ದೆ ಹೊಂದಿದೆ ಎಂದು ವಿಕೆ ಸಿಂಗ್ ಹೇಳಿದ್ದಾರೆ. 

ಜನರಿಗೆ ಸಹಾಯ ಮಾಡಲು ಬಿಜೆಪಿ ಕಾಯ್ದೆ ಜಾರಿಗೆ ತಂದಿದ್ದು, ವಿರೋಧ ಪಕ್ಷಗಳು ಸುಖಾಸುಮ್ಮನೆ ಗೊಂದಲ ಸೃಷ್ಟಿಸುತ್ತಿದೆ ಎಂದು ವಿಕೆ ಸಿಂಗ್ ಹರಿಹಾಯ್ದರು.

ವಿಭಜನೆಯ ಗಾಯಕ್ಕೆ ಸಿಎಎ ಮುಲಾಮು: ಓವರ್ ಟು ರಾಜೀವ್ ಚಂದ್ರಶೇಖರ್!

ಇದೇ ವೇಳೆ ಪಾಕ್‌ನ ಗುರುದ್ವಾರ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ವಿಕೆ ಸಿಂಗ್, ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಸುರಕ್ಷಿತಾವಗಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ