ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ಮೇಳ ಉದ್ಘಾಟಿಸಿದ ಧರ್ಮೇಂದ್ರ ಪ್ರಧಾನ್

Published : Apr 23, 2022, 10:38 PM IST
ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ಮೇಳ ಉದ್ಘಾಟಿಸಿದ ಧರ್ಮೇಂದ್ರ ಪ್ರಧಾನ್

ಸಾರಾಂಶ

ಕೋವಿಡ್ ನಂತರ ನಮ್ಮ ಗಮನವು ನಮ್ಮ ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಆ ಮೂಲಕ ಉದ್ಯೋಗವನ್ನು ಹೆಚ್ಚಿಸುವುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ, ಕೌಶಲ್ಯ, ಮರು-ಕೌಶಲ್ಯ ಮತ್ತು ಉನ್ನತ-ಕೌಶಲ್ಯವನ್ನು ಅವಕಾಶದ ನಿರಂತರ ಏಣಿಯಾಗಿ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಬೆಂಗಳೂರು (ಏ.23): ಪ್ರಧಾನ ಮಂತ್ರಿಗಳ ಕುಶಲ ಭಾರತ ಯೋಜನೆಗೆ (Prime Minister’s Skill India Mission) ಒತ್ತು ನೀಡುತ್ತಾ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆಯ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ (Dharmendra Pradhan), ಶನಿವಾರ 700 ಕ್ಕೂ ಅಧಿಕ ಪ್ರದೇಶಗಳಾದ್ಯಂತ ಆಯೋಜಿಸಲಾದ ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ಮೇಳವನ್ನು (National Apprenticeship Mela) ಉದ್ಘಾಟಿಸಿದರು. ವಿದ್ಯುತ್, ರೀಟೇಲ್, ದೂರಸಂವಹನ ಐಟಿ/ಐಟಿಇಎಸ್, ಎಲೆಕ್ಟ್ರಾನಿಕ್ಸ್, ಆಟೋಮೋಟಿವ್, ಮತ್ತು ಇತರ ಕ್ಷೇತ್ರಗಳು ಒಳಗೊಂಡಂತೆ, 30ಕ್ಕಿಂತ ಹೆಚ್ಚಿನ ಉದ್ದಿಮೆಗಳಿಂದ 4000ಕ್ಕಿಂತ ಹೆಚ್ಚಿನ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. 

5ರಿಂದ 12 ನೇ ತರಗತಿಯ ಉತ್ತೀರ್ಣ ಪ್ರಮಾಣಪತ್ರ, ಕೌಶಲ್ಯ ತರಬೇತಿ ಪ್ರಮಾಣಪತ್ರ, ಐಟಿಐ ಡಿಪ್ಲೋಮಾ, ಅಥವಾ ಪದವಿ ಪಡೆದ ವ್ಯಕ್ತಿಗಳು ಪ್ರಧಾನ ಮಂತ್ರಿ ಅಪ್ರೆಂಟಿಸ್‍ಶಿಪ್ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿದ್ದರು. ಸರಿಸುಮಾರು ಒಂದು ಲಕ್ಷ ಅಪ್ರೆಂಟಿಸ್‍ಗಳನ್ನು ಉದ್ಯೋಗಕ್ಕಿರಿಸಿಕೊಂಡು ತರಬೇತಿ ಮತ್ತು ವಾಸ್ತವ ಕೌಶಲ್ಯಸಾಮರ್ಥ್ಯಗಳ ಮೂಲಕ ಉದ್ಯೋಗದಾತರು ಅವರುಗಳ ಸಾಮರ್ಥ್ಯವನ್ನು ಗುರುತಿಸಿ ಅಭಿವೃದ್ಧಿಪಡಿಸುವುದಕ್ಕೆ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. 

ಇದರ ಜೊತೆಗೆ, ಯುವ ಹಾಗೂ ಮಹಾತ್ವಾಕಾಂಕ್ಷೆಯುಳ್ಳ ಕಾರ್ಯಪಡೆಗೆ, ಬ್ಯೂಟೀಶಿಯನ್, ಮೆಕ್ಯಾನಿಕ್ ಮತ್ತು ಇತರ ಕೌಶಲ್ಯಗಳೂ ಒಳಗೊಂಡಂತೆ, 500ಕ್ಕೂ ಕ್ಷೇತ್ರಗಳಲ್ಲಿ ಅವರಿಗೆ ಆಯ್ಕೆ ಒದಗಿಸಲಾಗಿತ್ತು. ಸರ್ಕಾರಿ ಮಾನದಂಡಗಳ ಪ್ರಕಾರ, ಅವರಿಗೆ ಸ್ಥಳದಲ್ಲೇ ಮಾಸಿಕ ಸ್ಟೈಪಂಡ್‍ನೊಂದಿಗೆ ಅಪ್ರೆಂಟಿಸ್‍ಶಿಪ್ ಒದಗಿಸಲಾಗಿತ್ತು. 

ಇದರ ನಂತರ, ಹೊಸ ಕೌಶಲ್ಯಗಳನ್ನು ಅಭಿವೃದ್ದಿಪಡಿಸಿಕೊಳ್ಳುವುದಕ್ಕಾಗಿ, ಕಲಿಯುವಾಗಲೇ ಅವರು ಆದಾಯಕ್ಕೂ ಅವಕಾಶ ಒದಗಿಸುವ ಸಲುವಾಗಿ ಅವರಿಗೆ ಸರ್ಕಾರಿ ಮಾನದಂಡಗಳ ಪ್ರಕಾರ, ಮಾಸಿಕ ಸ್ಟೈಪಂಡ್ ಕೂಡ ಸಿಗಲಿದೆ. ಅಭ್ಯರ್ಥಿಗಳು, ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಪರಿಷತ್ತಿನ(NCVET) ಅಂಗೀಕಾರ ಪಡೆದ ಪ್ರಮಾಣಪತ್ರಗಳನ್ನೂ ಪಡೆದುಕೊಳ್ಳಲಿದ್ದು, ಇದು ತರಬೇತಿಯ ನಂತರ ಅವರ ಉದ್ಯೋಗಾವಕಾಶಗಳ ಸಾಧ್ಯತೆಯನ್ನೂ ಇನ್ನೂ ಹೆಚ್ಚಿಸಲಿದೆ. 

ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ಮೇಳದ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, 'ನಮ್ಮ ಯುವಜನತೆಗೆ ಲಾಭದಾಯಕ ಉದ್ಯೋಗಾವಕಾಶಗಳನ್ನು ಒದಗಿಸಲು ಈ ಮೇಳದಲ್ಲಿ ದೇಶಾದ್ಯಂತ 700ಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ 4000ಕ್ಕಿಂತಹೆಚ್ಚಿನ ಸಂಸ್ಥೆಗಳು ಭಾಗವಹಿಸುತ್ತಿರುವುದು ನನಗೆ ಸಂತೋಷದ ವಿಷಯವಾಗಿದೆ. ಉತ್ಪಾದನಾ ಕ್ಷೇತ್ರ, ಎಲೆಕ್ಟ್ರಾನಿಕ್ಸ್, ಸೇವೆಗಳು, ವಿದ್ಯುತ್, ಐಟಿ/ಐಟಿಇಎಸ್, ರೈಲ್ವೇಸ್, ರೀಟೇಲ್, ಹಾಗೂ ಇತರ ಹಲವಾರು ವಿಕಸನಗೊಳ್ಳುತ್ತಿರುವ ಕ್ಷೇತ್ರಗಳಿಂದ ಉದ್ಯೋಗದಾತರು ಅಪ್ರೆಂಟಿಸ್‍ಶಿಪ್ ಮೇಳದಲ್ಲಿ ಇರುವುದು ಸಮಾಧಾನಕರ ವಿಷಯವಾಗಿದೆ' ಎಂದರು.

Boris Johnson Visit ಯುಕೆ ಪ್ರಧಾನಿ ಜಾನ್ಸನ್ ಬರಮಾಡಿಕೊಂಡ ರಾಜೀವ್ ಚಂದ್ರಶೇಖರ್!

ಈ ಸಂದರ್ಭದಲ್ಲಿ ಮಾತನಾಡಿದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ (Rajeev Chandrasekhar), ಕೋವಿಡ್ ನಂತರ ನಮ್ಮ ಗಮನವು ನಮ್ಮ ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಆ ಮೂಲಕ ಉದ್ಯೋಗವನ್ನು ಹೆಚ್ಚಿಸುವುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ, ಕೌಶಲ್ಯ, ಮರು-ಕೌಶಲ್ಯ ಮತ್ತು ಉನ್ನತ-ಕೌಶಲ್ಯವನ್ನು ಅವಕಾಶದ ನಿರಂತರ ಏಣಿಯಾಗಿ ತೆಗೆದುಕೊಳ್ಳಬೇಕು ಎಂದರು.

ಕೋವಿಡ್ ಅಪ್ಪಳಿಸಿದ ಬಳಿಕವೂ ಪ್ರಗತಿಯತ್ತ ಸಾಗಿದ ಮಾಹಿತಿ ತಂತ್ರಜ್ಞಾನ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಅಪ್ರೆಂಟಿಸ್‍ಶಿಪ್ ಅತಿದೀರ್ಘಕಾಲ ನಿಲ್ಲುವಂತಹ ಮಾದರಿಗಳ ಪೈಕಿ ಒಂದಾಗಿದ್ದು, ಸರ್ಕಾರ, ಕೌಶಲ್ಯ ಉದ್ಯೋಗ ಪರಿಸರವ್ಯವಸ್ಥೆಯ ನಡುವೆ ಸಹಭಾಗಿತ್ವಗಳ ರಚನೆ ಈ ಪರಿಕಲ್ಪನೆಯ ಮೂಲದಲ್ಲಿದೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯವು ಅಪ್ರೆಂಟೀಸ್‍ಶಿಪ್ ಕಾಯಿದೆ ಮತ್ತು 2014 ಹಾಗೂ 2015ರಲ್ಲಿ ಅಪ್ರೆಂಟಿಸಸ್ ನಿಯಮಗಳಿಗೆ ಸಮಗ್ರ ಪರಿವರ್ತನೆಗಳನ್ನು ತಂದಿದ್ದು ಕೌಶಲ್ಯ ಪಡೆದುಕೊಳ್ಳಬೇಕೆನ್ನುವವರು ಹಾಗೂ ಕುಶಲ ಪ್ರತಿಭೆಗಳ ನಿರೀಕ್ಷೆಯಲ್ಲಿರುವವರು ಇಬ್ಬರಿಗೂ ಕೌಶಲ್ಯದ ಪರಿಸರವ್ಯವಸ್ಥೆಯನ್ನು ಸಂಪರ್ಕಗೊಳಿಸಲು ಕ್ರಿಯಾಶೀಲವಾದ ವೇದಿಕೆಯನ್ನಾಗಿ ಇದನ್ನು ಪರಿಗಣಿಸಬೇಕಾಗಿದೆ. ಪರಿಸರವ್ಯವಸ್ಥೆಯನ್ನು ಬೇಡಿಕೆ ಚಾಲಿತ ಹಾಗೂ ಪ್ರಭಾವೀಶಾಲಿಯನ್ನಾಗಿ ಮಾಡಲು ಅಪ್ರೆಂಟಿಸ್‍ಶಿಪ್ ಮಾಡಲ್‍ಅನ್ನು ಉದ್ಯಮದಿಂದ ಬರುವ ಮುಖ್ಯ ಮಾಹಿತಿ ಅಭಿಪ್ರಾಯ ತಂತ್ರವನ್ನಾಗಿ ಕೂಡ ಪರಿಗಣಿಸಬೇಕಾಗಿರುವುದೂ ಕೂಡ ಅಷ್ಟೇ ಮುಖ್ಯ. ಯುವಜನತೆಯನ್ನು ಉದ್ಯಮದೊಡನೆ ಸಂಪರ್ಕಗೊಳಿಸಲು ಪ್ರ.ಮ. ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ಮೇಳಗಳು ಒಂದು ಪ್ರಬಲ ವೇದಿಕೆಯಾಗಲಿವೆ ಎಂದು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು