
ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ಕಲಾವಿದರು, ರಾಜಕೀಯ ನಾಯಕರನ್ನು ನೋಡಿದ್ರೆ ಜನರು ಸೆಲ್ಫಿ ತೆಗೆದುಕೊಳ್ಳುತ್ತಾರೆ. 80-90-200ರ ಕಾಲಘಟ್ಟದಲ್ಲಿ ಸ್ಟಾರ್ ಕಲಾವಿದರನ್ನು ನೋಡಿದ್ರೆ ಅಭಿಮಾನಿಗಳು ಅವರ ಆಟೋಗ್ರಾಫ್ ಪಡೆದುಕೊಂಡು ಅದನ್ನು ಭದ್ರವಾಗಿ ಕಾಪಾಡಿಕೊಳ್ಳುತ್ತಿದ್ದರು. ಇಂದು ಕಾಲ ಬದಲಾಗಿದ್ದು, ಇಂದಿನ Z ಜನರೇಷನ್ ಯುವ ಸಮುದಾಯ ತುಂಬಾ ವಿಶೇಷವಾಗಿ ಎಲ್ಲವನ್ನು ಮ್ಯಾನೇಜ್ ಮಾಡುತ್ತಾರೆ. ಹಾಗಾಗಿಯೇ Z ಜನರೇಷನ್ ತುಂಬಾ ವಿಭಿನ್ನವಾಗಿ ಕಾಣಿಸುತ್ತಾರೆ. ವಂದೇ ಭಾರತ್ ರೈಲಿನಲ್ಲಿ ನಟ ಮತ್ತು ಕೇಂದ್ರ ಸಚಿವರನ್ನು ನೋಡಿದ ಗರ್ಲ್ಸ್ ಗ್ಯಾಂಗ್ ಸಖತ್ ಆಗಿ ರೀಲ್ಸ್ ಮಾಡಿದ್ದಾರೆ. ಆದರೆ ಯುವತಿಯುರು ರೀಲ್ಸ್ ಮಾಡಿರೋದನ್ನು ಕೇಂದ್ರ ಸಚಿವರು ಗಮನಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯುವತಿಯ ರೀಲ್ಸ್ ನೋಡಿದ ಕೇಂದ್ರ ಸಚಿವರು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ 500ಕ್ಕೂ ಅಧಿಕ ರಿಪ್ಲೈಗಳು ಬಂದಿವೆ. ಸದ್ಯ ಈ ಗರ್ಲ್ಸ್ ಗ್ಯಾಂಗ್ ಮಾಡಿರೋ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಿನಿಮಾ ನಟ, ರಾಜಕಾರಣಿ ಮತ್ತು ಈಗ ಕೇಂದ್ರ ಸಚಿವರಾಗಿರುವ ಸುರೇಶ್ ಗೋಪಿ ತಮ್ಮ ಸಿಗ್ನೇಚರ್ ಸ್ಟೆಪ್ ಹಾಕಿದ ಯುವತಿಯರ ರೀಲ್ಸ್‌ಗೆ, ಇದು ಯಾವಾಗ ನಡೆಯಿತು? ಎಂದು ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಸುರೇಶ್ ಗೋಪಿ ತಮ್ಮದೇ ಕುರಿತ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ವಂದೇ ಭಾರತ್ ರೈಲಿನ ಕಿಟಕಿ ಸೀಟಿನಲ್ಲಿ ಸುರೇಶ್ ಗೋಪಿ ಕುಳಿತಿರುವುದನ್ನು ವೈರಲ್ ವಿಡಿಯೋದಲ್ಲಿ ಗಮನಿಸಬಹುದು. ಹೊರಗೆ ನಿಂತಿದ್ದ ಹುಡುಗಿಯರ ಗುಂಪೊಂದು ಈ ವಿಡಿಯೋವನ್ನು ಚಿತ್ರೀಕರಿಸಿದೆ. ಸುರೇಶ್ ಗೋಪಿಯವರ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್ ಅನ್ನು ಎಲ್ಲರೂ ಜೊತೆಯಾಗಿ ಮಾಡಿದ್ದಾರೆ. ಸುರೇಶ್ ಗೋಪಿ ನಟಿಸಿದ್ದ ಡ್ರೀಮ್ಸ್ ಸಿನಿಮಾದ "ಮಣಿಮುವತ್ತಾವಣಿಪಂದಾಲ್" ಹಾಡಿಗೆ ಸಿಗ್ನೇಚರ್ ಸ್ಟೆಪ್ ಮಾಡಲಾಗಿದೆ. ಮತ್ತೊಂದು ಪಾತ್ರ ಭರತ್ ಚಂದ್ರನ್ ಹೇಳುವ ಪ್ರಸಿದ್ಧ ಸಂಭಾಷಣೆಯನ್ನು ರೀಲ್‌ನಲ್ಲಿ ಸೇರಿಸಲಾಗಿದೆ.
ಯುವತಿಯರ ಗುಂಪು ರೀಲ್ ರೆಕಾರ್ಡ್ ಮಾಡುತ್ತಿರೋದನ್ನು ಸುರೇಶ್ ಗೋಪಿ ನೋಡಿರಲಿಲ್ಲ. ರೀಲ್ ವೈರಲ್ ಆದ ನಂತರ ಅದಕ್ಕೆ ಸುರೇಶ್ ಗೋಪಿ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ 4 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಸಾವಿರಾರು ಕಮೆಂಟ್‌ಗಳು ಸಹ ಬಂದಿವೆ. ಸುರೇಶ್ ಗೋಪಿಯವರ ಕಮೆಂಟ್‌ಗೆ ಈಗಾಗಲೇ ನಲವತ್ತು ಸಾವಿರ ಲೈಕ್‌ಗಳು ಬಂದಿವೆ. ಕೇಂದ್ರ ಸಚಿವರಾಗಿ ಅಧಿಕೃತ ಕೆಲಸಗಳ ನಡುವೆ ಸುರೇಶ್ ಗೋಪಿ ಒಂದು ಸಿನಿಮಾವನ್ನು ಪೂರ್ಣಗೊಳಿಸಬೇಕಿದೆ. ಹೊಸಬರಾದ ಮ್ಯಾಥ್ಯೂಸ್ ಥಾಮಸ್ ನಿರ್ದೇಶಿಸುತ್ತಿರುವ "ಒಕ್ಕೊಂಬನ್" ಎಂಬ ಚಿತ್ರ ಇದಾಗಿದೆ. ಕಡುವಕ್ಕುನ್ನೇಲ್ ಕುರುವಚ್ಚನ್ ಎಂಬ ನಿಜ ಜೀವನದ ಪಾತ್ರದಲ್ಲಿ ಸುರೇಶ್ ಗೋಪಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ