Budget 2025: ಹಿಂದೂ ವಿರೋಧಿ ಬಾಂಗ್ಲಾದ ಯೂನಸ್ ಸರ್ಕಾರಕ್ಕೂ ಬಜೆಟ್‌ನಲ್ಲಿ 120 ಕೋಟಿ!

Published : Feb 02, 2025, 08:01 AM IST
Budget 2025: ಹಿಂದೂ ವಿರೋಧಿ ಬಾಂಗ್ಲಾದ ಯೂನಸ್ ಸರ್ಕಾರಕ್ಕೂ ಬಜೆಟ್‌ನಲ್ಲಿ 120 ಕೋಟಿ!

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ವಿದೇಶಾಂಗ ಇಲಾಖೆಗೆ ₹20,516 ಕೋಟಿ ಅನುದಾನ ಮೀಸಲು. ಭೂತಾನ್‌ಗೆ ₹2,150 ಕೋಟಿ, ಮಾಲ್ಡೀವ್ಸ್‌ಗೆ ₹600 ಕೋಟಿ, ಬಾಂಗ್ಲಾದೇಶಕ್ಕೆ ₹120 ಕೋಟಿ ಒಳಗೊಂಡಂತೆ ಹಲವು ರಾಷ್ಟ್ರಗಳಿಗೆ ಅನುದಾನ ಘೋಷಣೆ.

Union budget 2025: ಕೇಂದ್ರ ಬಜೆಟ್‌ನಲ್ಲಿ ವಿದೇಶಾಂಗ ಇಲಾಖೆಗೆ ಬರೋಬ್ಬರಿ 20,516 ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ. ಇದು ಕಳೆದ ಬಾರಿಗಿಂತ 400 ಕೋಟಿ ರು. ಹೆಚ್ಚುವರಿ ಮೊತ್ತವಾಗಿದೆ. ಈ ಮೊತ್ತವು ವಿದೇಶಗಳಿಗೆ ಸಹಾಯ, ವ್ಯೂಹಾತ್ಮಕ ಹೂಡಿಕೆಗಳಿಗೆ ಬಳಕೆ ಮಾಡಲಾಗುತ್ತದೆ.

ಬಾಂಗ್ಲಾದೇಶದ ಮುಹಮ್ಮದ್‌ ಯೂನಸ್‌ ಸರ್ಕಾರ ಅಧಿಕಾರ ವಹಿಸಿಕೊಂಡು ಹಿಂದೂ ವಿರೋಧಿ ನಡೆಗಳನ್ನು ಅನುಸರಿಸುತ್ತಿರುವ ಮಧ್ಯೆಯೇ ಭಾರತ ಸರ್ಕಾರ ಬಜೆಟ್‌ನಲ್ಲಿ ಬಾಂಗ್ಲಾದೇಶಕ್ಕೆ 120 ಕೋಟಿ ರು. ಅನುದಾನ ಘೋಷಿಸಿದೆ. ಹಸೀನಾ ಸರ್ಕಾರ ಇದ್ದಾಗಲೂ ಸಹ 120 ಕೋಟಿ ರು. ನೀಡಿತ್ತು. ಸದಾ ಕಾಲ ಭಾರತ ವಿರೋಧಿ, ಚೀನಾ ಪರ ಕೆಲಸ ಮಾಡುವ ಮಾಲ್ಡೀವ್ಸ್‌ಗೂ 600 ಕೋಟಿ ರು. ಅನುದಾನ ಘೋಷಿಸಲಾಗಿದೆ. ಈ ಮಧ್ಯೆ ಭಾರತದ ಮಿತ್ರ ರಾಷ್ಟ್ರ ಭೂತಾನ್‌ಗೆ ಅತಿ ಹೆಚ್ಚು ಅನುದಾನ 2150 ಕೋಟಿ ರು. ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಇದನ್ನೂ ಓದಿ: Union Budget 2025: ಮಧ್ಯಮ ವರ್ಗದವರಿಗೆ ಮೋದಿ ಬಂಪರ್ ಕೊಡುಗೆ,ಆದಾಯ ತೆರಿಗೆಯಲ್ಲಿನ ಮಹತ್ವದ ಬದಲಾವಣೆ ಬಗ್ಗೆ ತಿಳಿಯಿರಿ!

ತಾಲಿಬಾನ್ ಆಡಳಿತ ಹೊಂದಿರುವ ಅಫ್ಘಾನಿಸ್ತಾನಕ್ಕೆ ಅನುದಾನವನ್ನು 100 ಕೋಟಿ ರು.ಗೆ ಏರಿಸಲಾಗಿದೆ. ಹಿಂಸಾಪೀಡಿತ ಮ್ಯಾನ್ಮಾರ್‌ಗೆ 350 ಕೋಟಿ ರು. ಶ್ರೀಲಂಕಾಗೆ 700 ಕೋಟಿ ರು., ಆಫ್ರಿಕಾ ರಾಷ್ಟ್ರಗಳಿಗೆ 225 ಕೋಟಿ ರು., ದಕ್ಷಿಣ ಅಮೆರಿಕದ ದೇಶಗಳಿಗೆ 60 ಕೋಟಿ ರು. ಮೀಸಲಿರಿಸಲಾಗಿದೆ. ಮಿಕ್ಕಂತೆ ಇರಾನ್‌ನ ಚಾಬಹಾರ್‌ ಬಂದರಿಗೆ 100 ಕೋಟಿ ರು., ವಿಪತ್ತು ಪರಿಹಾರ ನಿಧಿಗೆ 64 ಕೋಟಿ ರು. ನಿಗದಿಪಡಿಸಲಾಗಿದೆ. ಇನ್ನು ವಿದೇಶಗಳಲ್ಲಿ ಭಾರತದ ಸಂಸ್ಕೃತಿಯನ್ನು ಪಸರಿಸುವ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಗೆ 351 ಕೋಟಿ ರು. ಅನುದಾನ ಘೋಷಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2025: ಸಾಲ, ಪಿಂಚಣಿ, ಕೆವೈಸಿ.. ಇನ್ನಷ್ಟು ಸುಲಭ, ಇಲ್ಲಿವೆ ಮಹತ್ವದ ಬದಲಾವಣೆಯ ವಿವರ!...

ದೇಶ ಅನುದಾನ (ಟ್ಯಾಬ್‌ ಇದೆ)

ಭುತಾನ್ ₹2,150 ಕೋಟಿ

ನೇಪಾಳ ₹700 ಕೋಟಿ

ಮಾಲ್ಡೀವ್ಸ್‌ ₹600 ಕೋಟಿ

ಮ್ಯಾನ್ಮಾರ್‌ ₹350 ಕೋಟಿ

ಶ್ರೀಲಂಕಾ ₹300 ಕೋಟಿ

ಬಾಂಗ್ಲಾದೇಶ ₹120 ಕೋಟಿ

ಅಫ್ಘಾನಿಸ್ತಾನ ₹100 ಕೋಟಿ

ಆಫ್ರಿಕಾ ದೇಶಗಳು ₹225 ಕೋಟಿ

ದಕ್ಷಿಣ ಅಮೆರಿಕ ₹60 ಕೋಟಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ