ದೇಶದಲ್ಲಿ ನಿರುದ್ಯೋಗ ದರದಲ್ಲಿ ಇಳಿಕೆ: ದಾಖಲೆಯ ಜಿಎಸ್‌ಟಿ ಸಂಗ್ರಹ

Published : Sep 02, 2022, 10:15 AM ISTUpdated : Sep 02, 2022, 10:18 AM IST
ದೇಶದಲ್ಲಿ ನಿರುದ್ಯೋಗ ದರದಲ್ಲಿ ಇಳಿಕೆ: ದಾಖಲೆಯ ಜಿಎಸ್‌ಟಿ ಸಂಗ್ರಹ

ಸಾರಾಂಶ

ಜಿಎಸ್‌ಟಿ ಸಂಗ್ರಹ ಏರಿಕೆ, ಆರ್ಥಿಕತೆ ಚೇತರಿಕೆಯ ಶುಭ ಸುದ್ದಿಯ ನಡುವೆಯೇ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಗಣನೀಯ ಇಳಿಕೆ ದಾಖಲಾಗಿದೆ ಎಂದು ವರದಿಯೊಂದು ಹೇಳಿದೆ.

ನವದೆಹಲಿ: ಜಿಎಸ್‌ಟಿ ಸಂಗ್ರಹ ಏರಿಕೆ, ಆರ್ಥಿಕತೆ ಚೇತರಿಕೆಯ ಶುಭ ಸುದ್ದಿಯ ನಡುವೆಯೇ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಗಣನೀಯ ಇಳಿಕೆ ದಾಖಲಾಗಿದೆ ಎಂದು ವರದಿಯೊಂದು ಹೇಳಿದೆ. ಪಿರಿಯಾಡಿಕ್‌ ಲೇಬರ್‌ ಫೋರ್ಸ್‌ ಸರ್ವೇ ಬಿಡುಗಡೆ ಮಾಡಿರುವ ವರದಿ ಅನ್ವಯ ಏಪ್ರಿಲ್‌- ಜೂನ್‌ ತ್ರೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ.7.6ಕ್ಕೆ ಕುಸಿತವಾಗಿದೆ. ಕಳೆದ ಜನವರಿ-ಮಾರ್ಚ್‌ನಲ್ಲಿದ್ದ ಶೇ.8.2ರಷ್ಟು ನಿರುದ್ಯೋಗ ಪ್ರಮಾಣಕ್ಕೆ ಹೋಲಿಸಿದರೆ ಸಾಕಷ್ಟು ಪ್ರಗತಿ ದಾಖಲಾಗಿದೆ ಎಂದು ವರದಿ ಆಗಿದೆ. ಜೊತೆಗೆ ಈ ಪ್ರಮಾಣವೂ 2018ರ ಜೂನ್‌ನಲ್ಲಿ ಮುಕ್ತಾಯಗೊಂಡ ತ್ರೈಮಾಸಿಕ ಅವಧಿಗಿಂತಲೂ ಕಡಿಮೆ ಎಂದು ವರದಿ ಹೇಳಿದೆ.

ಈ ವರ್ಷದ ಮಾರ್ಚ್‌ಗ ಕೊನೆಗೊಳ್ಳುವ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಜೂನ್‌ಗೆ ಕೊನೆಯಾಗುವ 2ನೇ ತ್ರೈಮಾಸಿಕದಲ್ಲಿ ನಗರ ಪ್ರದೇಶದ ನಿರುದ್ಯೋಗ ಪ್ರಮಾಣದಲ್ಲಿ (Unemployment Rate) ಸುಧಾರಣೆ ಕಂಡಿದೆ. ಹಾಗಾಗಿ ನಿರುದ್ಯೋಗ ಸಮಸ್ಯೆಯಿಂದ ಭಾರತ ಹೊರ ಬರುವಲ್ಲಿ ಸುಧಾರಣೆಯಾಗುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ರೈಲ್ವೆ ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಮಾಡಿದ್ರೂ ಬೀಳುತ್ತೆ ಜಿಎಸ್ ಟಿ

2019-20ರ ಏಪ್ರಿಲ್‌- ಜೂನ್‌ ತ್ರೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ.8.9ರಷ್ಟಿತ್ತು. ಕೋವಿಡ್‌ ಮೊದಲಾದ ಕಾರಣಗಳಿಂದಾಗಿ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ ಈ ವರ್ಷ ಹೊಸ ಉದ್ಯೋಗಗಳ ಸೃಷ್ಟಿ, ಆರ್ಥಿಕತೆ ಚೇತರಿಕೆಯಾಗಿರುವುದು ಮೊದಲಾದ ಕಾರಣಗಳಿಂದ ಎಲ್ಲಾ ವಲಯಗಳಲ್ಲೂ ನಿರುದ್ಯೋಗಿಗಳಿಗೆ ಸಾಕಷ್ಟು ಉದ್ಯೋಗ ಲಭ್ಯವಾಗಿದೆ. ಪರಿಣಾಮ ಎಲ್ಲಾ ವಯೋಮಾನ, ಪುರುಷ, ಮಹಿಳೆಯರಲ್ಲಿ 15 ರಿಂದ 29 ವರ್ಷದ ವಯೋಮಾನ ಮತ್ತು 15 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನಗಳಲ್ಲಿನ ನಿರುದ್ಯೋಗ ಪ್ರಮಾಣದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ ಎಂದು ಸಮೀಕ್ಷೆ ತಿಳಿಸಿದೆ.

ಆಗಸ್ಟ್‌ನಲ್ಲಿ 1.43 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಆಗಸ್ಟ್‌ ತಿಂಗಳಲ್ಲಿ ದೇಶದಲ್ಲಿ 1.43 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ.28 ರಷ್ಟುಉತ್ತಮ ಏರಿಕೆ ಕಂಡು ಬಂದಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಬೇಡಿಕೆಯಲ್ಲಿ ಹೆಚ್ಚಳ, ತೆರಿಗೆ ದರ ಹೆಚ್ಚಳ ಮತ್ತು ತೆರಿಗೆ ಪಾವತಿದಾರರ ಹೆಚ್ಚಳವು ಒಟ್ಟಾರೆ ತೆರಿಗೆ ಸಂಗ್ರಹ ಏರಿಕೆಗೆ ಕಾರಣವಾಗಿದೆ.

ಅಡಿಕೆ ಜಿಎಸ್‌ಟಿ ರದ್ದತಿಗೆ ಕೇಂದ್ರಕ್ಕೆ ಒತ್ತಡ ಹೇರಿ: ಸಿದ್ದರಾಮಯ್ಯ

ಆಗಸ್ಟ್‌ನಲ್ಲಿ ಸಂಗ್ರಹವಾದ 1,43,612 ಕೋಟಿ ರೂ. ಜಿಎಸ್‌ಟಿಯಲ್ಲಿ ಕೇಂದ್ರ ಜಿಎಸ್‌ಟಿ 24710 ಕೋಟಿ ರೂ, ರಾಜ್ಯ ಜಿಎಸ್‌ಟಿ 30,951 ಕೋಟಿ ರೂ.ಮತ್ತು ಏಕೀಕೃತ 77782 ಕೋಟಿ ಮತ್ತು 10,168 ಕೋಟಿ ರು. ಸೆಸ್‌. ಇದರೊಂದಿಗೆ ಸತತ 6 ತಿಂಗಳು ಕೂಡಾ ಜಿಎಸ್‌ಟಿ ಸಂಗ್ರಹ ಪ್ರಮಾಣವು 1.40 ಲಕ್ಷ ಕೋಟಿ ರೂ.ಗಿಂತ ಹೆಚ್ಚಿಗೆ ದಾಖಲಾದಂತೆ ಆಗಿದೆ. ಸೆಪ್ಟೆಂಬರ್‌ನಲ್ಲೂ ಹಬ್ಬದ ದಿನ ಇರುವ ಕಾರಣ, ಈ ತಿಂಗಳಲ್ಲೂ ತೆರಿಗೆ ಸಂಗ್ರಹ ಪ್ರಮಾಣ ಉತ್ತಮವಾಗಿಯೇ ಇರಲಿದೆ ಎಂದು ವಿಶ್ವಾಸ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್