ರೈಲ್ವೆ ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಮಾಡಿದ್ರೂ ಬೀಳುತ್ತೆ ಜಿಎಸ್ ಟಿ
*ರೈಲ್ವೆ ಟಿಕೆಟ್ ರದ್ದತಿ ಶುಲ್ಕದ ಮೇಲೆ ಶೇ.5ರಷ್ಟು ಜಿಎಸ್ ಟಿ
*ರೈಲ್ವೆಯ ಪ್ರಥಮ ದರ್ಜೆ ಹಾಗೂ ಎಸಿ ಕೋಚ್ ಗೆ ಮಾತ್ರ ಅನ್ವಯ
* ವಿಮಾನಯಾನ ಅಥವಾ ಹೋಟೆಲ್ ವಾಸ್ತವ್ಯದ ಬುಕ್ಕಿಂಗ್ ರದ್ದುಗೊಳಿಸಿದ್ರೂ ಬೀಳುತ್ತೆ ಜಿಎಸ್ ಟಿ
ನವದೆಹಲಿ (ಆ.29): ಕಾಯ್ದಿರಿಸಿರುವ ರೈಲ್ವೆ ಟಿಕೆಟ್ ಗಳನ್ನು ರದ್ದುಗೊಳಿಸಿದ್ರೆ ಇನ್ನು ಮುಂದೆ ಜೇಬಿಗೆ ಬರೆ ಬೀಳಲಿದೆ. ಆ.3ರಂದು ಹೊರಡಿಸಿರುವ ಹಣಕಾಸು ಸಚಿವಾಲಯದ ಸುತ್ತೋಲೆ ಪ್ರಕಾರ ಖಚಿತಪಡಿಸಿದ ರೈಲ್ವೆ ಟಿಕೆಟ್ ಗಳ ರದ್ದತಿ ಇನ್ಮುಂದೆ ದುಬಾರಿಯಾಗಲಿದೆ. ಏಕೆಂದ್ರೆ ಇದರ ಮೇಲೆ ಸರಕು ಹಾಗೂ ಸೇವಾ ತೆರಿಗೆ (GST)ವಿಧಿಸಲಾಗುತ್ತದೆ. ಹಣಕಾಸು ಸಚಿವಾಲಯದ ತೆರಿಗೆ ಸಂಶೋಧನೆ ಘಟಕದ ಅಧಿಸೂಚನೆ ಪ್ರಕಾರ ಟಿಕೆಟ್ ಗಳ ಬುಕ್ಕಿಂಗ್ ಒಂದು ಒಪ್ಪಂದವಾಗಿದೆ. ಇದರಡಿಯಲ್ಲಿ ಸೇವಾ ಪೂರೈಕೆದಾರರು (ಐಆರ್ ಸಿಟಿಸಿ/ಭಾರತೀಯ ರೈಲ್ವೆ) ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ಭರವಸೆ ನೀಡಿರುತ್ತಾರೆ. ಸುತ್ತೋಲೆ ಪ್ರಕಾರ ಫಸ್ಟ್ ಕ್ಲಾಸ್ ಅಥವಾ ಎಸಿ ಕೋಚ್ ಟಿಕೆಟ್ ರದ್ದತಿ ಶುಲ್ಕ ಶೇ.5ರಷ್ಟು ಜಿಎಸ್ ಟಿ ಆಕರ್ಷಿಸುತ್ತದೆ. ಅದೇ ಮಾದರಿಯಲ್ಲಿ ವಿಮಾನಯಾನ ಅಥವಾ ಹೋಟೆಲ್ ವಾಸ್ತವ್ಯದ ಬುಕ್ಕಿಂಗ್ ರದ್ದುಗೊಳಿಸಿದ್ರೆ ಕೂಡ ರದ್ದತಿ ಶುಲ್ಕದ ಮೇಲೆ ಕೂಡ ಅಷ್ಟೇ ಮೊತ್ತದ ಜಿಎಸ್ ಟಿ ಅನ್ವಯಿಸುತ್ತದೆ. ಸಚಿವಾಲಯದ ಪ್ರಕಾರ ರದ್ಧತಿ ಶುಲ್ಕ ಒಪ್ಪಂದ ಮುರಿದಿದ್ದಕ್ಕೆ ಪ್ರತಿಯಾಗಿ ಪಾವತಿಸುವ ಶುಲ್ಕ. ಹೀಗಾಗಿ ಅದಕ್ಕೆ ಜಿಎಸ್ ಟಿ ಪಾವತಿಸಬೇಕು.
'ಪ್ರಯಾಣಿಕ ಒಪ್ಪಂದ ಮುರಿದಾಗ ಸೇವಾದಾತರಿಗೆ ಪರಿಹಾರದ ರೂಪದಲ್ಲಿ ಸಣ್ಣ ಮೊತ್ತವನ್ನು ಪಾವತಿಸಲಾಗುತ್ತದೆ. ಇದನ್ನು ರದ್ದತಿ ಶುಲ್ಕದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ರದ್ದತಿ ಶುಲ್ಕ ಪಾವತಿಯಾದ ಕಾರಣ ಇದಕ್ಕೆ ಜಿಎಸ್ ಟಿ (GST) ಅನ್ವಯಿಸುತ್ತದೆ' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ರೈಲ್ವೆಯ (Train) ಪ್ರಥಮ ದರ್ಜೆ ಹಾಗೂ ಎಸಿ ಕೋಚ್ (AC coach) ಟಿಕೆಟ್ ಗೆ ಮಾತ್ರ ಶೇ.5 ಜಿಎಸ್ ಟಿ ವಿಧಿಸಲಾಗುತ್ತದೆ. ಇದು ದ್ವಿತೀಯ ಸ್ಲೀಪರ್ ದರ್ಜೆಗೆ ಅನ್ವಯಿಸೋದಿಲ್ಲ.
ಒಂದು ವೇಳೆ ಯಾರಾದ್ರೂ ಪ್ರಥಮ ದರ್ಜೆ ಅಥವಾ ಎಸಿ ಕೋಚ್ ಟಿಕೆಟ್ ರದ್ದುಗೊಳಿಸಿದ್ರೆ (Cancell) ಅದಕ್ಕೆ 240ರೂ. ಶುಲ್ಕ ಬೀಳಲಿದೆ. ಇದಕ್ಕೆ ಶೇ.5ರಷ್ಟು ಜಿಎಸ್ ಟಿ ವಿಧಿಸಿದಾಗ 252ರೂ. ಪಾವತಿಸಬೇಕಾಗುತ್ತದೆ. ರೈಲಿನ ನಿಗದಿತ ನಿರ್ಗಮನಕ್ಕಿಂತ (departure) 48 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಮೊದಲು ಟಿಕೆಟ್ ರದ್ದುಗೊಳಿಸಿದ್ರೆ ಭಾರತೀಯ ರೈಲ್ವೆ 240ರೂ. ಶುಲ್ಕ ವಿಧಿಸುತ್ತದೆ. ಒಂದು ವೇಳೆ ಟಿಕೆಟ್ ಅನ್ನು ರೈಲಿನ ನಿರ್ಗಮನ ಸಮಯಕ್ಕಿಂತ 12 ಅಥವಾ 48ಗಂಟೆಗಳಿಗಿಂತ ಮುನ್ನ ಕ್ಯಾನ್ಸಲ್ ಮಾಡಿದ್ರೆ ಟಿಕೆಟ್ ಮೊತ್ತದ ಶೇ.25 ರಷ್ಟನ್ನು ರದ್ದತಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.
ಇನ್ಮುಂದೆ ವ್ಯಾಟ್ಸ್ಆ್ಯಪ್ ಮೂಲಕ ಶಾಪಿಂಗ್ ಸಾಧ್ಯ, ಮೆಟಾ ಜೊತೆ ಜಿಯೋ ಒಪ್ಪಂದ!
ಮನೆ ಬಾಡಿಗೆ ಮೇಲೆ ಜಿಎಸ್ ಟಿ
ಜುಲೈ 18ರಿಂದ ಜಾರಿಗೆ ಬಂದಿರುವ ಹೊಸ ಜಿಎಸ್ ಟಿ ನಿಯಮಗಳ ಪ್ರಕಾರ ಜಿಎಸ್ ಟಿ ನೋಂದಾಯಿತ ಬಾಡಿಗೆದಾರ ಒಂದು ನಿವಾಸ (ಮನೆ) ಬಾಡಿಗೆ ಪಡೆದರೆ ಶೇ.18ರಷ್ಟು ಸರಕು ಹಾಗೂ ಸೇವಾ ತೆರಿಗೆ ಪಾವತಿಸಬೇಕು. 47ನೇ ಜಿಎಸ್ ಟಿ ಮಂಡಳಿ ಸಭೆಯ ಶಿಫಾರಸ್ಸುಗಳ ಪ್ರಕಾರ ರಿವರ್ಸ್ ಚಾರ್ಜ್ (ಆರ್ ಸಿಎಂ) ಆಧಾರದಲ್ಲಿ ಬಾಡಿಗೆದಾರ ಶೇ.18 ಜಿಎಸ್ ಟಿ ಪಾವತಿಸಬೇಕು. ಆ ಬಳಿಕ ಆತ ಇನ್ ಪುಟ್ ತೆರಿಗೆ ಕ್ರೆಡಿಟ್ ಅಡಿಯಲ್ಲಿ ಇದನ್ನು ತೆರಿಗೆ ಕಡಿತವೆಂದು ಕ್ಲೇಮ್ ಮಾಡಲು ಅವಕಾಶವಿದೆ. ಆದರೆ, ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಮನೆಯನ್ನು ಬಾಡಿಗೆಗೆ ನೀಡಿದರೆ ಅದಕ್ಕೆ ಯಾವುದೇ ಜಿಎಸ್ ಟಿ ಅನ್ವಯಿಸೋದಿಲ್ಲ. ಹಾಗೆಯೇ ಮಾಲೀಕ ಅಥವಾ ಆ ಸಂಸ್ಥೆಯ ಪಾಲುದಾರ ಮನೆಯನ್ನು ವೈಯಕ್ತಿಕ ಬಳಕೆಗೆ ನೀಡಿದ್ರೆ ಆಗ ಕೂಡ ಯಾವುದೇ ಜಿಎಸ್ ಟಿ ಪಾವತಿಸಬೇಕಾಗಿಲ್ಲ. ಮನೆ ಅಥವಾ ವಾಸ್ತವ್ಯದ ಕಟ್ಟಡವನ್ನು ಉದ್ಯಮ ಸಂಸ್ಥೆಗೆ ಬಾಡಿಗೆ ನೀಡಿದ್ರೆ ಮಾತ್ರ ಜಿಎಸ್ ಟಿ ಅನ್ವಯಿಸುತ್ತದೆ.
ರಿಲಯನ್ಸ್ ರೀಟೇಲ್ ಮುಖ್ಯಸ್ಥೆಯಾಗಿ ಇಶಾ ಅಂಬಾನಿಯನ್ನು ಪರಿಚಯಿಸಿದ ತಂದೆ