ಪ್ರಧಾನಿ ಅವರ ನಿವಾಸದಿಂದ ಸಂಸತ್‌ಗೆ ತೆರಳು ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಉಪ ರಾಷ್ಟ್ರಪತಿ ನಿವಾಸಕ್ಕೂ ಸಂಪರ್ಕಿಸಲಾಗುತ್ತದೆ. ಇದರಿಂದ ಜನದಟ್ಟಣೆ ಸಮಸ್ಯೆ ತಪ್ಪಲಿದೆ. ಹೊಸ ಸಂಸತ್ ಭವನಕ್ಕೆ ಈ ಸೌಲಭ್ಯ ಕಲ್ಪಿಸಲಾಗುತ್ತದೆ.
ನವದೆಹಲಿ (ಮಾ.05): ಸೆಂಟ್ರಲ್ ವಿಸ್ತಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ತಿನ ಕಟ್ಟಡವು 3 ಸುರಂಗ ಮಾರ್ಗಗಳನ್ನು ಹೊಂದಿರಲಿದೆ. ಒಂದು ಸುರಂಗ ಮಾರ್ಗವು ಪ್ರಧಾನಿ ಮನೆಗೆ, ಮತ್ತೊಂದು ಉಪರಾಷ್ಟ್ರಪತಿ ನಿವಾಸಕ್ಕೆ, ಮತ್ತೊಂದು ಮಾರ್ಗವು ಸಂಸತ್ ಕಚೇರಿಗೆ ಸಂಪರ್ಕ ಕಲ್ಪಿಸಲಿದೆ.
ಅಧಿವೇಶನದ ವೇಳೆ ಮತ್ತು ಇತರೆ ಸಮಯಗಳಲ್ಲಿ ಅತಿಗಣ್ಯರ ಸಂಚಾರದ ವೇಳೆ ವಾಹನ ಸಂಚಾರದ ಮೇಲೆ ಕೆಲ ಕಾಲ ನಿರ್ಬಂಧ ಹೇರಲಾಗುತ್ತದೆ. ಇನ್ನು ಕೆಲವು ಸಮಯದಲ್ಲಿ ಸಂಚಾರ ದಟ್ಟಣೆಯಿಂದಾಗಿ ಜನಪ್ರತಿನಿಧಿಗಳು ಕೂಡಾ ಸಂಕಷ್ಟಎದುರಿಸಬೇಕಾಗಿ ಬರುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ಮೂರು ಪ್ರತ್ಯೇಕ ಸುರಂಗ ಮಾರ್ಗ ನಿರ್ಮಿಸಲಾಗುವುದು. ಈ ಸುರಂಗ ಮಾರ್ಗಗಳಲ್ಲಿ ವಿವಿಐಪಿಗಳ ಭದ್ರತೆಗೆ ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಯೋಜನೆ ಪೂರ್ತಿಯಾದ ಬಳಿಕ ಪ್ರಧಾನಿ, ಉಪ ರಾಷ್ಟ್ರಪತಿ ಸೇರಿದಂತೆ ಇನ್ನಿತರ ವಿವಿಐಪಿಗಳ ಸಂಸತ್ತಿನ ಆವರಣ ಪ್ರವೇಶ ಮತ್ತು ನಿರ್ಗಮನಕ್ಕೆ ಈಗಿರುವ ಸುರಕ್ಷತಾ ಸಂಕೀರ್ಣತೆಗಳ ನಿಯಮಾವಳಿಗಳು ಸರಳವಾಗಲಿವೆ ಎಂದು ನಿರೀಕ್ಷಿಸಲಾಗಿದೆ.
undefined
2020ರಲ್ಲಿ ದೇಶದ ಟೀವಿಗಳಲ್ಲಿ ಪ್ರಧಾನಿ ಮೋದಿ ದರ್ಬಾರ್! .
ಸೆಂಟ್ರಲ್ ವಿಸ್ತಾ ಯೋಜನೆಯಡಿ ದಕ್ಷಿಣ ಭಾಗದಲ್ಲಿ ಪ್ರಧಾನಿ ಕಚೇರಿ ಹಾಗೂ ಪ್ರಧಾನಿ ನಿವಾಸ, ಉತ್ತರ ಭಾಗದಲ್ಲಿ ಉಪ ರಾಷ್ಟ್ರಪತಿಗಳ ನಿವಾಸ ಹಾಗೂ ಪ್ರಸ್ತುತ ಸಂಚಾರ ಮತ್ತು ಶಕ್ತಿ ಭವನ ಇರುವ ಕಡೆ ಸಂಸದರ ಕಚೇರಿಗಳನ್ನು ನಿರ್ಮಿಸಲಾಗುತ್ತದೆ.
ಭಾರೀ ಭದ್ರತಾ ಕ್ರಮಗಳನ್ನು ಒಳಗೊಂಡಿರುವ ಸುರಂಗ ಮಾರ್ಗದಲ್ಲಿ ವಿವಿಐಪಿಗಳ ಪ್ರವೇಶಕ್ಕೆ ಮಾತ್ರವೇ ಅವಕಾಶವಿರಲಿದ್ದು, ಸಂಸತ್ತಿನ ಪ್ರವೇಶಕ್ಕೆ ಪ್ರವಾಸಿಗರು ಮತ್ತು ಜನ ಸಾಮಾನ್ಯರಿಗೆ ಪ್ರತ್ಯೇಕ ದ್ವಾರಗಳಿರಲಿವೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಸೆಂಟ್ರಲ್ ವಿಸ್ತಾ ಯೋಜನೆಯನ್ನು 2021ರ ನವೆಂಬರ್ನಲ್ಲಿ, ಸಂಸತ್ತಿನ ಕಟ್ಟಡವನ್ನು 2022ರ ಮಾರ್ಚ್ ಮತ್ತು 2024ರ ಮಾರ್ಚ್ ವೇಳೆಗೆ ಸಾಮಾನ್ಯ ಕೇಂದ್ರ ಸಚಿವಾಲಯಗಳ ಕಚೇರಿಗಳನ್ನು ಒಂದೆಡೇ ಇರುವ ಕಟ್ಟಡವನ್ನು ಪೂರ್ಣಗೊಳಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ.