ಮಲಗಿದ್ದಲ್ಲೇ ಪುತ್ರ ಸಾವು, ಅರಿವೇ ಇಲ್ಲದೆ ಮೃತದೇಹ ಜೊತೆ 4 ದಿನ ಕಳೆದ ಅಂಧ ಪೋಷಕರು!

By Chethan Kumar  |  First Published Oct 29, 2024, 8:51 PM IST

ಅಂಧ ಪೋಷಕರ ನೋಡಿಕೊಳ್ಳುತ್ತಿದ್ದ 30 ವರ್ಷದ ಮಗ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ. ಆದರೆ ಮಗನ ಸಾವಿನ ಅರಿವೇ ಇಲ್ಲದೆ, ಅತ್ತ ಅನ್ನ ನೀರು ಸಿಗದ ಪೋಷಕರು 4 ದಿನ ಮೃತದೇಹದ ಜೊತೆ ಕಳೆದ ದಾರುಣ ಘಟನೆ ನಡೆದಿದೆ.


ಹೈದರಾಬಾದ್(ಅ.29) ಪೋಷಕರು ವಯಸ್ಸು 60 ದಾಟಿದೆ. ಇಬ್ಬರೂ ಅಂಧರು. ಹೀಗಾಗಿ 30 ವರ್ಷದ ಮಗ ಈ ಪೋಷಕರ ನೋಡಿಕೊಳ್ಳುತ್ತಿದ್ದ. ಪೋಷಕರಿಗೆ ಸಮಯಕ್ಕೆ ತಕ್ಕಂತೆ ಅನ್ನ ನೀರು ನೀಡಿ, ಆರೈಕೆ ಮಾಡುತ್ತಿದ್ದ. ಔಷಧಿಗಳನ್ನು ಚಾಚೂ ತಪ್ಪದೆ ನೀಡುತ್ತಿದ್ದ. ಬಡತನವಿದ್ದರೂ ಪೋಷಕರಲ್ಲಿ ನೆಮ್ಮದಿ ಇತ್ತು. ಇತ್ತ ಪೋಷಕರನ್ನು ಐಷಾರಾಮಿ ಅಲ್ಲದಿದ್ದರೂ ಅವರ ಸಂತೋಷಕ್ಕೆ ತಕ್ಕಂತೆ ನೋಡಿಕೊಳ್ಳುತ್ತಿದ್ದೇನೆ ಅನ್ನೋ ತೃಪ್ತಿ ಮಗನಲ್ಲೂ ಇತ್ತು. ಆದರೆ ಈ ಸುಂದರ ಕುಟುಂಬಕ್ಕೆ ಅತೀ ದೊಡ್ಡ ಆಘಾತ ಎದುರಾಗಿದೆ. ಮಲಗಿದ್ದ ಮಗ ಏಳಲೇ ಇಲ್ಲ. ಮಗ ಮೃತಪಟ್ಟಿರುವುದು ಗೊತ್ತಿಲ್ಲದೆ ನಾಲ್ಕು ದಿನ ಮೃತದೇಹ ಜೊತೆ ಕಳೆದಿದ್ದಾರೆ. ಈ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಅಂಧ ಪೋಷಕರು ಅನಾಥರಾಗಿದ್ದಾರೆ. ಎಂದಿನಂತೆ ಪೋಷಕರಿಗೆ ಆಹಾರ ನೀರು ನೀಡಿದ್ದಾನೆ. ಬಳಿಕ ಔಷಧಿಗಳನ್ನು ಕೊಟ್ಟಿದ್ದಾನೆ. ವಯೋಸಹಜ ಅನಾರೋಗ್ಯ ಪೋಷಕರಿಗಿತ್ತು. ಪೋಷಕರ ಮಲಗಿಸಿದ 30 ವರ್ಷದ ಪುತ್ರ ತಾನೂ ಮಲಗಿದ್ದಾನೆ. ಆದರೆ  ರಾತ್ರಿ ಮಲಗಿದ ಪುತ್ರ ಬೆಳಗ್ಗೆ ಏಳಲೇ ಇಲ್ಲ. ಇತ್ತ ಅಂಧ ಪೋಷಕರು ಎದ್ದ ಮಗನ ಕೂಗಿದ್ದಾರೆ. ಆದರೆ ಸುಳಿವಿಲ್ಲ. ಮಗ ಬೇಗನೆ ಎದ್ದು ಕೆಲಸಕ್ಕೆ ಹೋಗಿರಬೇಕು. ಅಥವಾ ಬೇರೆ ಕೆಲಸದ ನಿಮಿತ್ತ ತೆರಳಿರಬೇಕು ಎಂದುಕೊಂಡು ಇಬ್ಬರೂ ಮಗನ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.

Tap to resize

Latest Videos

ಕಣ್ಣಿಲ್ಲದ ದಂಪತಿಯ ಮಗುವನ್ನು 50 ಸಾವಿರಕ್ಕೆ ಮಾರಿದ ವೈದ್ಯ

ಎಷ್ಟು ಹೊತ್ತಾದರು ಮಗ ಬರಲಿಲ್ಲ. ಇತ್ತ ಪೋಷಕರಿಗೆ ಹಸಿವು ಹೆಚ್ಚಾಗಿದೆ. ಮಗನ ಕೂಗಿದ್ದಾರೆ. ಆದರೆ ಸುಳಿವಿಲ್ಲ. ಹಸಿವಿನಿಂದ ಇಬ್ಬರು ಹಾಗೇ ನಿದ್ದೆಗೆ ಜಾರಿದ್ದಾರೆ. ಬಳಿಕ ಎದ್ದು ಮತ್ತೆ ಮಗನಿಗಾಗಿ ಕೂಗಿದ್ದಾರೆ. ಮನೆ ಹುಡುಕಾಡಿದಾಗ ಮಗ ಮಲಗಿರುವ ಸ್ಥಳಕ್ಕೆ ಬಂದಿದ್ದಾರೆ. ಮಗನ ದೇಹ ಮುಟ್ಟಿ ಸಮಾಧಾನ ಪಟ್ಟಿದ್ದಾರೆ. ಆದರೆ ಮಗ ತಮಗೇನು ನೀಡಿಲ್ಲ, ಹಸಿವು ತಾಳಲಾರದೇ ಮಗನ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಗ ಮಾತ್ರ ಏಳಲೇ ಇಲ್ಲ. ಅಷ್ಟು ಹೊತ್ತಿಗೆ ಅಂಧ ಪೋಷಕರ ದೇಹದ ಶಕ್ತಿ ಕುಂದಿದೆ. ಆಯಾಸ, ಬಳಲಿಕೆಗೆ ಹೆಚ್ಚಾಗಿದೆ. ಮಗನ ದೇಹದ ಪಕ್ಕದಲ್ಲೇ ಅಸ್ವಸ್ಥರಾಗಿ ನೆಲದ ಮೇಲೆ ಮಲಗಿದ್ದಾರೆ. 

ಇಷ್ಟೊತ್ತಿಗೆ ನಾಲ್ಕು ದಿನಗಳೇ ಉರುಳಿದೆ. ಅಂಧ ಪೋಷಕರು ಅಸ್ವಸ್ಥಗೊಂಡು ಬಿದ್ದಿದ್ದಾರೆ. ಇತ್ತ ಮನೆಯಿಂದ ಕೆಟ್ಟ ವಾಸನೆ ಬರಲು ಆರಂಭಿಸಿದೆ. ಹೀಗಾಗಿ ಅದೇ ಕಾಲೋನಿಯ ಇತರ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳ್ಕಕೆ ಆಗಮಿಸಿದ ಪೊಲೀಸರಿಗೆ ದುಃಖ ಉಮ್ಮಳಿಸಿ ಬಂದಿದೆ.  ಪೋಷಕರ ಪರಿಸ್ಥಿತಿ, ಮನೆಯ ಸ್ಥಿತಿ ಕಂಡು ಮರುಗಿದ್ದಾರೆ. ತಕ್ಷಣವೇ ಮಗನ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಸಿದ್ದಾರೆ. ಇತ್ತ ಪೋಷಕರಿಗೆ ವೈದ್ಯಕೀಯ ನೆರವು ನೀಡಿದ್ದಾರೆ. 

ಇತ್ತ ಪೊಲೀಸರು ಮತ್ತೊಬ್ಬ ಕಿರಿಯ ಮಗನಿಗೆ ಮಾಹಿತಿ ನೀಡಿದ್ದಾರೆ. ಕಿರಿಯ ಮಗ ಹೈದರಾಬಾದ್‌ನಿಂದ ಕೆಲ ದೂರದಲ್ಲಿ ನೆಲೆಸಿದ್ದ. ಕೂಲಿ ಕೆಲಸದ ಕಾರಣ ಕಿರಿಯ ಮಗ ಕೆಲ ದಿನಗಳಿಂದ ಪೋಷಕರ ನೋಡಲು ಆಗಮಿಸಿರಲಿಲ್ಲ. ಪೊಲೀಸರ ಮಾಹಿತಿಯಿಂದ ಮನೆಗೆ ಆಗಮಿಸಿದ ಕಿರಿಯ ಮಗ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ. 

ದೃಷ್ಠಿಹೀನರಿಗಾಗಿ ಸ್ಮಾರ್ಟ್ ಗ್ಲಾಸ್ ತಯಾರಿಸಿದ ಕೇರಳದ 14 ವರ್ಷದ ಹುಡುಗಿಯರು!

click me!