ಉಮರ್ ಖಾಲಿದ್‌ಗೆ ಬಿಗ್ ಶಾಕ್, ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಅರ್ಜಿ ತಿರಸ್ಕೃತ!

By Suvarna NewsFirst Published Mar 24, 2022, 1:06 PM IST
Highlights

* ದೆಹಲಿ ಕೋರ್ಟ್ ನಿಂದ ಉಮರ್ ಖಾಲಿದ್ ಗೆ ಮತ್ತೊಂದು ಹಿನ್ನಡೆ

* ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿಯನ್ನು ಮತ್ತೆ ತಿರಸ್ಕಾರ

* ಉಮರ್ ಖಾಲಿದ್ ವಿರುದ್ಧ ಗಲಭೆಗೆ ಸಂಚು ರೂಪಿಸಿದ ಮತ್ತು ಯುಎಪಿಎ ಅಡಿಯಲ್ಲಿ ಪ್ರಕರಣ 

ನವದೆಹಲಿ(ಮಾ.24): ದೆಹಲಿ ಕೋರ್ಟ್ ನಿಂದ ಉಮರ್ ಖಾಲಿದ್ ಗೆ ಮತ್ತೊಂದು ಹಿನ್ನಡೆಯಾಗಿದೆ. ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿಯನ್ನು ಮತ್ತೆ ತಿರಸ್ಕರಿಸಲಾಗಿದೆ. ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ದೆಹಲಿಯ ಕರ್ಕರ್ಡೂಮಾ ಕೋರ್ಟ್ ಜಾಮೀನು ನಿರಾಕರಿಸಿದೆ. ಉಮರ್ ಖಾಲಿದ್ ವಿರುದ್ಧ ಗಲಭೆಗೆ ಸಂಚು ರೂಪಿಸಿದ ಮತ್ತು ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಲಾಯಿತು, ನಂತರ ನಿರ್ಧಾರವನ್ನು ಗುರುವಾರಕ್ಕೆ ಮುಂದೂಡಲಾಗಿತ್ತು. ಇದೀಗ ನ್ಯಾಯಾಲಯ ಈ ಕುರಿತು ಆದೇಶ ನೀಡಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಈ ಅರ್ಜಿಯ ವಿಚಾರಣೆ ನಡೆಸುತ್ತಿದ್ದರೆಂಬುವುದು ಉಲ್ಲೇಖನೀಯ.

ಉಮರ್ ಖಾಲಿದ್ ವಿರುದ್ಧದ ಆರೋಪಗಳೇನು?

ಫೆಬ್ರವರಿ 2020 ರ ದೆಹಲಿ ಗಲಭೆಯ 'ಮಾಸ್ಟರ್ ಮೈಂಡ್' ಎಂಬ ಕಾರಣಕ್ಕಾಗಿ ಖಾಲಿದ್ ಮತ್ತು ಇತರ ಹಲವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾಯ್ದೆ-ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಲಭೆ ಮಾಡುವ ಮೂಲಕ ದೇಶದಲ್ಲಿ ಅಶಾಂತಿ ಹರಡುವುದು ಖಾಲಿದ್ ಉದ್ದೇಶವಾಗಿತ್ತು ಎನ್ನಲಾಗಿದೆ.

ಜನರನ್ನು ಗುರಿಯಾಗಿಸಿಕೊಮಡರು: ದೆಹಲಿ ಪೊಲೀಸ್

ವಾದದ ಸಮಯದಲ್ಲಿ, ಆರೋಪಿಯು ತನ್ನ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಬಳಿ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಅದೇ ಸಮಯದಲ್ಲಿ, ಸಿಎಎ ಪ್ರದರ್ಶನದ ಹೆಸರಿನಲ್ಲಿ ಜನರನ್ನು ಬಳಸಲಾಗಿದೆ ಎಂದು ಪ್ರಾಸಿಕ್ಯೂಷನ್ ಪರವಾಗಿ ಹೇಳಲಾಗಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ನ್ಯಾಯಾಧೀಶ ಅಮಿತಾಭ್ ರಾವತ್ ಅವರ ಮುಂದೆ, ''ಬಡವರು ವಾಸಿಸುವ ಮತ್ತು ಜನಸಾಂದ್ರತೆ ಹೆಚ್ಚಿರುವ ಸ್ಥಳದಲ್ಲಿ ಎಲ್ಲಾ ಪ್ರತಿಭಟನಾ ಸ್ಥಳಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಜನರನ್ನು ಬಳಸಲಾಗುತ್ತಿತ್ತು ಎಂದಿದ್ದಾರೆ

ದೆಹಲಿ ಪ್ರೊಟೆಸ್ಟ್ ಸಪೋರ್ಟ್ ಗ್ರೂಪ್ (ಡಿಪಿಎಸ್‌ಜಿ) ಹೆಸರಿನ ವಾಟ್ಸಾಪ್ ಗುಂಪನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಲಾಗಿದೆ. ಉಮರ್ ಖಾಲಿದ್ ಡಿಸೆಂಬರ್ 5 ರಿಂದ ಇದರಲ್ಲಿ ಭಾಗಿಯಾಗಿದ್ದು, ಉಳಿದ ಆರೋಪಿಗಳೊಂದಿಗೆ ಗಲಭೆ ನಡೆಸಲು ಯೋಜಿಸುತ್ತಿದ್ದರು ಎಂದು ಹೇಳಲಾಗಿದೆ. ತಾಹಿರ್ ಹುಸೇನ್ (ಎಎಪಿ ಕೌನ್ಸಿಲರ್) ಅವರೊಂದಿಗಿನ ಭೇಟಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಯಿತು. ದೆಹಲಿ ಪೊಲೀಸರು 2016 ರ ಜೆಎನ್‌ಯು ದೇಶದ್ರೋಹ ಪ್ರಕರಣವನ್ನು ಸಹ ಉಲ್ಲೇಖಿಸಿದ್ದಾರೆ. ಖಾಲಿದ್ ಅವರು 2016 ರಿಂದ ಕಲಿತಿದ್ದಾರೆ ಮತ್ತು ದೆಹಲಿ ಗಲಭೆ ಪ್ರಕರಣದಲ್ಲಿ ಅವರು ಅದನ್ನು ಪುನರಾವರ್ತಿಸುವುದಿಲ್ಲ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ಚರ್ಚೆಯಲ್ಲಿ, ಖಾಲಿದ್ ಡಿಪಿಎಸ್‌ಜಿಯಲ್ಲಿ ಯಾವುದೇ ವಿಶೇಷ ಪಾತ್ರವನ್ನು ಹೊಂದಿಲ್ಲ ಮತ್ತು ಅವರು ಅದರಲ್ಲಿ ಐದು ಸಂದೇಶಗಳನ್ನು ಮಾತ್ರ ಕಳುಹಿಸಿದ್ದಾರೆ ಎಂದು ಖಾಲಿದ್ ಅವರ ವಕೀಲರು ಹೇಳಿದ್ದರು.

ಈ ಗಲಭೆಗಳಲ್ಲಿ 53 ಜನರು ಸಾವನ್ನಪ್ಪಿದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡರು. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. 

click me!