ಹೈದ್ರಾಬಾದ್‌ ಹುಡುಗನ ಮದ್ವೆಯಾದ ಉಕ್ರೇನ್‌ ವಧು : ವಿವಾಹದಲ್ಲಿ ಯುದ್ಧ ಕೊನೆಗೊಳ್ಳಲು ಪ್ರಾರ್ಥನೆ

By Suvarna News  |  First Published Feb 28, 2022, 4:42 PM IST
  • ಹೈದರಾಬಾದ್‌ ಹುಡುಗನ ಕೈ ಹಿಡಿದ ಉಕ್ರೇನ್‌ ಹುಡುಗಿ
  • ಮುತ್ತಿನ ನಗರಿಯಲ್ಲಿ ನಡೆದ ಅದ್ಧೂರಿ ವಿವಾಹ
  • ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿ ಅರ್ಚಕರು

ಯುದ್ಧ ಪೀಡಿತ ದೇಶ ಉಕ್ರೇನ್‌ನ ಯುವತಿಯೊಬ್ಬಳು ಮುತ್ತಿನ ನಗರಿ ಹೈದರಾಬಾದ್‌ನ ಯುವಕನನ್ನು ಕೈ ಹಿಡಿದಿದ್ದು, ತೆಲಂಗಾಣದ ಚಿಲ್ಕೂರು ಬಾಲಾಜಿ ದೇಗುಲದಲ್ಲಿ ಈ ವಿಶೇಷ ಮದುವೆ ನೆರವೇರಿತು. ಇವರ ಮದುವೆಯಲ್ಲಿ ಮದುವೆಯ ವಿಧಿವಿಧಾನಗಳನ್ನು ನಡೆಸಿಕೊಟ್ಟ ಅರ್ಚಕರು ಬೇಗನೆ ಉಕ್ರೇನ್‌  ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಶಮನಗೊಂಡು ಯುದ್ಧ ನಿಲ್ಲಲಿ ಎಂದು ಪ್ರಾರ್ಥಿಸಿದರು. ದೀರ್ಘಾವಧಿ ಜೊತೆಯಾಗಿ ಬಾಳುವ, ಸಮೃದ್ಧಿ, ಆರೋಗ್ಯ ಮತ್ತು ಸಂತತಿಗಾಗಿ ವಧುವರರಿಗೆ ಪ್ರಾರ್ಥಿಸಿದ ಅರ್ಚಕರು ಕೊನೆಯಲ್ಲಿ ಯುದ್ಧವೂ ಬೇಗನೆ ನಿಲ್ಲಲಿ ಎಂದು ಪ್ರಾರ್ಥಿಸಿದರು. 

ವಿವಾಹವನ್ನು ತೆಲಂಗಾಣದ ಖ್ಯಾತ ದೇಗುಲವಾದ ಚಿಲ್ಕೂರು ಬಾಲಾಜಿ ದೇವಸ್ಥಾನದ ಅರ್ಚಕರಾದ ಸಿ.ಎಸ್. ರಂಗರಾಜನ್‌ (CS Rangarajan) ನಡೆಸಿಕೊಟ್ಟರು. 16ನೇ ಶತಮಾನದ ಖ್ಯಾತ ದೇಗುಲವಾದ ಚಿಲ್ಕೂರು ಬಾಲಾಜಿ ದೇಗುಲದಲ್ಲಿ (Chilkur Venkateshwara shrine) ನಡೆದ ಈ ವಿವಾಹ ಸಮಾರಂಭ ಹಾಗೂ ರಷ್ಯಾ(Russia) ಹಾಗೂ ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವಂತೆ ಮಾಡಿದ ಪ್ರಾರ್ಥನೆಯಲ್ಲಿ ಬಾಲಾಜಿ ಭಕ್ತರು ಉಪಸ್ಥಿತರಿದ್ದರು. ಈ ಯುದ್ಧವೂ ಎರಡು ದೇಶಗಳ ನಡುವೆ ರಕ್ತಪಾತ ನಡೆಸಿರುವುದಲ್ಲದೆ ಜಗತ್ತಿನೆಲ್ಲೆಡೆ ಕೋವಿಡ್‌ ನಂತರ ಮತ್ತೊಂದು ಆತಂಕ ಸೃಷ್ಟಿಸಿದೆ. 

Tap to resize

Latest Videos

"

Love with Indians: ದೇಸಿ ಹುಡುಗರ ಪ್ರೀತಿಯಲ್ಲಿ ಬೀಳೋ ವಿದೇಶಿ ಬೆಡಗಿಯರು!

ಸಂಜೆ ನಡೆದ ಅರತಕ್ಷತೆ ಕಾರ್ಯಕ್ರಮದಲ್ಲಿ ಅರ್ಚಕರು ಈ ಯುವ ಜೋಡಿಗೆ ಆಶೀರ್ವಾದ ಮಾಡಿದರು. ವಧು ಉಕ್ರೇನ್‌ (Ukrain) ಮೂಲದವರಾಗಿದ್ದು, ವರ ಮಲ್ಲಿಕಾರ್ಜುನ್‌ ರಾವ್‌ (Mallikarjuna Rao) ಎಂಬುವವರ ಪುತ್ರನಾಗಿದ್ದು, ಒಸ್ಮಾನಿಯಾ ವಿವಿಯ (Osmania University) ಬಯೋ ಮೆಡಿಕಲ್‌ ಇಂಜಿನಿಯರಿಂಗ್‌ ವಿಭಾಗದ ಹಳೆ ವಿದ್ಯಾರ್ಥಿಯಾಗಿದ್ದಾನೆ. ವರನ ತಂದೆ ಮಲ್ಲಿಕಾರ್ಜುನ್‌ ರಾವ್‌ ಹಾಗೂ ತಾಯಿ ಪದ್ಮಜಾ(Padmaja) ದಂಪತಿ ವಧುವರರಿಬ್ಬರಿಗೆ ಆಶೀರ್ವದಿಸಿದಾಗ ತುಂಬಾ ಸಂತಸಗೊಂಡರು. 

ವಧು ವರರಾದ ಪ್ರತೀಕ್‌ (Prateek) ಹಾಗೂ ಲಿಬೊ (Lyubov), ಉಕ್ರೇನ್‌ನಲ್ಲಿ ಫೆಬ್ರವರಿ 23 ರಂದು ಒಮ್ಮೆ ಈಗಾಗಲೇ ಮದುವೆಯಾಗಿದ್ದು ನಂತರ ಭಾರತಕ್ಕೆ ಬಂದು ಇಲ್ಲಿ ಅರತಕ್ಷತೆ ಹಾಗೂ ಇಲ್ಲಿನ ಸಂಪ್ರದಾಯದಂತೆ ಮದುವೆ ಆಯೋಜಿಸಿದ್ದರು. ಇವರು ಹೈದರಾಬಾದ್‌ (Hyderabad) ತಲುಪಿದ ಮರುದಿನವೇ ಅಲ್ಲಿ ಯುದ್ಧ ಆರಂಭವಾಗಿತ್ತು.

ಇತ್ತ ಯುದ್ಧ ಭೂಮಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಯುದ್ಧಭೂಮಿಯಿಂದ ಈವರೆಗೆ 1158 ಜನ ವಾಪಸ್ಸಾಗಿದ್ದಾರೆ. ಇನ್ನೂ ಸಾವಿರಾರು ಜನರನ್ನು  ಏರ್‌ ಇಂಡಿಯಾ ಕರೆತರಲಿದೆ. ಕೇಂದ್ರದ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನು 406 ಮಂದಿ ಭಾರತಕ್ಕೆ ವಾಪಸ್ಸಾಗಲು ನೋಂದಣಿ ಮಾಡಿಸಿದ್ದಾರೆ.

ಮದುವೆಯಾದ ಮರು ದಿನವೇ ಯುದ್ಧಕ್ಕೆ ಹೊರಟ ಉಕ್ರೇನ್‌ ದಂಪತಿ
 

ಜಾಗತಿಕ ತಲ್ಲಣಕ್ಕೆ ಕಾರಣವಾಗಿರುವ ರಷ್ಯಾ ಉಕ್ರೇನ್ ಯುದ್ಧದಲ್ಲಿ 3500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.  ಇನ್ನು ರಷ್ಯಾ-ಉಕ್ರೇನ್‌ ನಡುವಿನ ಸಂಘರ್ಷ ಮಹತ್ವದ ತಿರುವು ಪಡೆದುಕೊಂಡಿದೆ. ಸಂಧಾನಕ್ಕಾಗಿ ಬೆಲಾರಸ್‌ಗೆ ಬಂದಿರುವ ರಷ್ಯಾ ನಿಯೋಗದ ಜತೆ ಉಕ್ರೇನ್‌ ನಿಯೋಗ ಶಾಂತಿ ಮಾತುಕತೆ ನಡೆಸಲಿದೆ ಎಂದು ಉಕ್ರೇನ್‌ ಅಧ್ಯಕ್ಷರ ಕಾರ್ಯಾಲಯ ಘೋಷಿಸಿದೆ.

ಇನ್ನೂ ನಿಶ್ಚಯವಾಗದ ಬೆಲಾರಸ್‌ ಗಡಿಯ ಪ್ರದೇಶವೊಂದರಲ್ಲಿ ರಷ್ಯಾ ಮತ್ತು ಉಕ್ರೇನ್‌ ನಿಯೋಗಗಳು ಭೇಟಿಯಾಗಲಿವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರ ಕಚೇರಿ ತಿಳಿಸಿದೆ. ಆದರೆ ಈ ಸಂಧಾನ ಸಭೆ ಯಾವಾಗ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ನಡುವೆ, ಉಕ್ರೇನ್‌ ನಿಯೋಗದ ಭೇಟಿ ವೇಳೆ ಈ ಭಾಗದಲ್ಲಿ ಯಾವುದೇ ಯುದ್ಧವಿಮಾನಗಳ ಹಾರಾಟ ನಡೆಯುವುದಿಲ್ಲ ಹಾಗೂ ಯುದ್ಧ ಸಲಕರಣೆಗಳ ಬಳಕೆ ನಡೆಯುವುದಿಲ್ಲ ಎಂದು ಉಕ್ರೇನ್‌ಗೆ ಬೆಲಾರಸ್‌ ಭರವಸೆ ನೀಡಿದೆ

click me!