ಕಿರಿಯ ಠಾಕ್ರೆಯಿಂದ ಹಿರಿಯಣ್ಣ ಮೋದಿಗೆ ಸ್ವಾಗತ!

By Web Desk  |  First Published Dec 6, 2019, 9:04 AM IST

 ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ರಾಷ್ಟ್ರೀಯ ಸಮ್ಮೇಳನ| ಇಂದು ಕಿರಿಯ ಠಾಕ್ರೆಯಿಂದ ಹಿರಿಯಣ್ಣ ಮೋದಿಗೆ ಸ್ವಾಗತ| 


ಪುಣೆ[ಡಿ.06]: ಡಿಸೆಂಬರ್‌ 6ರಿಂದ 8ರವರೆಗೂ 3 ದಿನಗಳ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಹಾರಾಷ್ಟ್ರದ ಪುಣೆಗೆ ಆಗಮಿಸಲಿದ್ದಾರೆ.

ಈ ವೇಳೆ ‘ಹಿರಿಯಣ್ಣ’ ಮೋದಿ ಅವರನ್ನು ಕಿರಿಯ ಸೋದರ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಅವರು ಸ್ವಾಗತಿಸಲಿದ್ದಾರೆ. ವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಸರ್ಕಾರ ರಚನೆಯಾದ ಬಳಿಕ ಮೋದಿ ಅವರ ಮೊದಲ ಪ್ರವಾಸ ಇದಾಗಿದೆ.

Tap to resize

Latest Videos

ತಾವು ಸಿಎಂ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಮೋದಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಉದ್ಧವ್‌ ಠಾಕ್ರೆ ಅವರು, ನೂತನ ಮಹಾರಾಷ್ಟ್ರದ ನಿರ್ಮಾಣಕ್ಕಾಗಿ ಬಲಿಷ್ಠ ಕ್ಯಾಬಿನೆಟ್‌ ಹೊಂದಿರುವ ಕೇಂದ್ರದಲ್ಲಿರುವ ನನ್ನ ಹಿರಿಯಣ್ಣನಾದ ಮೋದಿ ಅವರ ಸಹಕಾರ ನಿರೀಕ್ಷಿಸುವುದಾಗಿ ಹೇಳಿದ್ದರು.

click me!