
ಆಗ್ರಾ: ಇಲ್ಲಿನ ಬ್ರಹ್ಮಕುಮಾರಿ ಆಶ್ರಮದಲ್ಲಿ ವಾಸವಿದ್ದ ಸೋದರಿಯರಿಬ್ಬರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಡೆತ್‌ನೋಟ್‌ನಲ್ಲಿ ಸೋದರಿಯರು ಆಶ್ರಮದ ನಾಲ್ವರು ಉದ್ಯೋಗಿಗಳನ್ನು ದೂರಿ ಬರೆದಿದ್ದು, ಬಳಿಕ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
37 ವರ್ಷ ಪ್ರಾಯದ ಏಕ್ತಾ ಹಾಗೂ 34 ವರ್ಷ ಪ್ರಾಯದ ಸಿಕ್ತಾ ಸಾವಿಗೆ ಶರಣಾದ ಸೋದರಿಯರು. ಇವರಿಬ್ಬರು ಆಗ್ರಾದ ಜಗನೇರ್ ಪ್ರದೇಶದಲ್ಲಿರುವ ಆಶ್ರಮದಲ್ಲಿ ಕಳೆದೊಂದು ವರ್ಷದಿಂದ ವಾಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಇವರಿಬ್ಬರೂ ತಮ್ಮ ಡೆತ್‌ನೋಟನ್ನು ಬ್ರಹ್ಮಕುಮಾರಿಯರ ಗ್ರೂಪ್ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ವಾಟ್ಸಾಪ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಹೆಂಡತಿ ಇಬ್ಬರು ಹೆಣ್ಣು ಮಕ್ಕಳಿಗೆ ಗುಂಡಿಕ್ಕಿ ಪೊಲೀಸ್ ಪೇದೆ ಸಾವಿಗೆ ಶರಣು
ಇವರಿಬ್ಬರ ಸೋದರ ಈ ಆಶ್ರಮದಿಂದ 13 ಕಿಲೋ ಮೀಟರ್ ದೂರದಲ್ಲಿ ವಾಸ ಮಾಡುತ್ತಿದ್ದ. ಈತ ಸೋದರಿಯರ ವಾಟ್ಸಾಪ್ ಸಂದೇಶ ನೋಡಿ ಕೂಡಲೇ ಅಲ್ಲಿಗೆ ಹೊರಟು ಬಂದಿದ್ದು, ಅಷ್ಟರಲ್ಲಿ ಸೋದರಿಯರು ಸಾವನ್ನಪ್ಪಿದ್ದಾರೆ. ಈ ಸೋದರಿಯರ ಬಳಿ ಇದ್ದ ಫೋನ್ ಹಾಗೂ ಡೆತ್‌ನೋಟನ್ನು ನಮ್ಮ ಸುಪರ್ದಿಗೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಆಶ್ರಮದ ನಾಲ್ವರು ಉದ್ಯೋಗಿಗಳು ನಮ್ಮ 25 ಲಕ್ಷದಷ್ಟು ಹಣವನ್ನು ಕಸಿದುಕೊಂಡಿದ್ದಾರೆ ಎಂದು ಸೋದರಿಯರು ಆರೋಪಿಸಿದ್ದಾರೆ.
ಮಹಾರಾಷ್ಟ್ರ: 7 ತಿಂಗಳಲ್ಲಿ 1555 ರೈತರು ಸಾವಿಗೆ ಶರಣು
ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಅಲ್ಲದೇ ಸೋದರಿಯರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ ಆಶ್ರಮದ ಸಿಬ್ಬಂದಿ ವಿರುದ್ಧವೂ ಜಗನೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಎಂದು ತನಿಖೆ ಮಾಡಲು ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಎಸಿಪಿ ಕುಮಾರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ