
ಚೆನ್ನೈ (ನ.24) ನಗರ, ಗ್ರಾಮ, ಪಟ್ಟಣಗಳಲ್ಲಿ ಹಲವೆಡೆ ಖಾಸಗಿ ಬಸ್‌ಗಳೇ ಸೇವ ಒದಗಿಸುತ್ತದೆ. ಹಲವು ಗ್ರಾಮಗಳ ಪ್ರಾಣಿಕರು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗೆ ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಭೀಕರ ಅಪಾಘಾತ ಸಂಭವಿಸಿದೆ. ಎರಡು ಖಾಸಗಿ ಬಸ್ ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ. ಭಾರಿ ವೇಗದಲ್ಲಿದ್ದ ಕಾರಣ ಅಪಘಾತದ ತೀವ್ರತೆ ಹೆ್ಚ್ಚಾಗಿದೆ. ಡಿಕ್ಕಿಯಾದ ರಭಸದ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು 35ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘನೆ ತಮಿಳುನಾಡು ಎಳತ್ತೂರ್ ಸಮೀಪದ ದುರೈಸಮೀಪುರಂ ಬಳಿ ನಡೆದಿದೆ.
ಕೈಸರ್ ಟ್ರಾವೆಲ್ಸ್ ಹಾಗೂ ಎಂಎ ಗೋಪಾಲನ್ ಟ್ರಾವಲ್ಸ್‌ಗೆ ಸೇರಿದ ಎರಡು ಬಸ್ ಮುಖಾಮುಖಿ ಡಿಕ್ಕಿಯಾಗಿದೆ.ಕೈಸರ್ ಟ್ರಾವೆಲ್ಸ್ ಬಸ್ ಮಧುರೈನಿಂದ ತೆಂಕಾಶಿಗೆ ತೆರಳುತ್ತಿದ್ದರೆ, ಇತ್ತ ಗೋಪಾಲನ್ ಟ್ರಾವೆಲ್ಸ್‌ನ ಬಸ್ ತೆಂಕಾಶಿಯಿಂದ ಕಡಯನ್ನಲ್ಲೂರ್‌ಗೆ ತೆರಳುತ್ತಿತ್ತು. ಬೆಳಗ್ಗೆ 10.30ರ ವೇಳೆ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರವರಿಗೆ ಐವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾನೆ.
ಎರಡು ಬಸ್‌ನಲ್ಲಿ ಪ್ರಯಾಣಿಕರಿದ್ದರು. ಹೀಗಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಅಪಘಾತದ ತೀವ್ರಗತೆ ಬಸ್ ನಜ್ಜು ಗುಜ್ಜಾಗಿದೆ. ಜೆಸಿಬಿ ಸಹಾಯದಿಂದ ರಸ್ತೆಯಲ್ಲಿ ಅಡ್ಡವಾಗಿ ಬಿದ್ದಿದ್ದ ಬಸ್‌ಗಳನ್ನು ತೆರವುಗೊಳಿಸಲಾಗಿದೆ. ಎಳತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನು ಕರ್ನಾಟಕದ ಕೋಲರ ಜಿಲ್ಲೆಯ ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಬ್ರಿಡ್ಜ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಚೆನ್ನೈ ಕಾರಿಡಾರ್ ರಸ್ತೆಯಲ್ಲಿ ನಡೆದಿರುವ ಅ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟಿದ್ದಾರೆ. ತಡರಾತ್ರಿ 2 ಗಂಟೆ ವೇಳೆ ನಿದ್ದೆ ಮಂಪರುನಲ್ಲಿ ಕಾರು ಚಾಲನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬ್ರಿಡ್ಜ್ ಮೇಲಿಂದ ಬಿದ್ದ ಹ್ಯುಂಡೈ ವರ್ನಾ ಕಾರು ಕೆಳಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳಕ್ಕೆ ಮೃತಪಟ್ಟಿದ್ದಾರೆ. ಚೆನ್ನೈ ಮೂಲದ ಗೋಪಿ(38),ಗೌತಮ್ ರಮೇಶ್ (28),ಹರಿಹರನ್(27),ಜಯಶಂಕರ್(30) ಮೃತ ದುರ್ದೈವಿಗಳು. ಚೆನ್ನೈ ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ವೇಳೆ ಆ ಅಪಘಾತ ಸಂಭವಸಿದೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ