
ಮಣಿಪುರ (ಜ.05) ಕುಕಿ ಹಾಗೂ ಮೈತಯಿ ಸಮುದಾಯದ ಹೋರಾಟ, ಪ್ರತಿಭಟನೆ, ಗಲಭೆಗಳಿಂದ ಹೊತ್ತಿ ಉರಿದ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬಳಿಕ ಪರಿಸ್ಥಿತಿ ನಿಧಾನವಾಗಿ ಶಾಂತವಾಗುತ್ತಿದೆ. ಮಣಿಪುರದಲ್ಲಿ ಶಾಂತಿ ನಲೆಸುತ್ತಿದ್ದಂತೆ ಇದೀಗ ಭಯಾಕನ ಘಟನೆ ನಡೆದಿದೆ. ಮಣಿಪುರದಲ್ಲಿಂದು ಸತತ ಮೂರು ಐಇಡಿ ಬಾಂಬ್ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡ ಘಟನೆ ಬಿಷ್ಣುಪುರ್ ಜಿಲ್ಲೆಯಲ್ಲಿ ನಡೆದಿದೆ. ನನುಕೋನ್ ವಲಯದಲ್ಲಿ ಪಾಳು ಬಿದ್ದಿದ್ದ ಮನೆಯಲ್ಲಿ ಮೊದಲ ಎರಡು ಸ್ಫೋಟ ಸಂಭವಿಸಿದೆ.
ಬೆಳಗಿನ ಜಾವ 5.40ಕ್ಕೆ ನುಕೋನ್ ಸ್ಟೇಶನ ವಲಯದಲ್ಲಿ ಪಾಳು ಬಿದ್ದ ಮನೆಯಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ಇದರ ಬೆನ್ನಲ್ಲೇ 5.55ರ ವೇಳೆ ಮತ್ತೊಂದು ಸ್ಫೋಟ ಸಂಭವಿಸಿದೆ. ಇದಾದ ಬಳುಕ ಸುಮಾರೂ ಎರಡೂವರೆ ಗಂಟೆ ಬಳಿಕ ಪಕ್ಕದ ಏರಿಯಾದಲ್ಲಿ ಮತ್ತೊಂದು ಐಇಡಿ ಸ್ಫೋಟ ಸಂಭವಿಸಿದೆ. ಜನರು ಗಾಢ ನಿದ್ದೆಯಲ್ಲಿದ್ದಾಗ ಸ್ಫೋಟ ಸಂಭವಿಸಿದೆ. ಈ ವೇಳೆ ಹಲವರು ಸ್ಫೋಟದ ಶಬ್ದ ಕೇಳಿಬಂದ ಸ್ಥಳಕ್ಕೆ ತೆರಳಿದ್ದಾರೆ. ಹೀಗೆ ತೆರಳಿದ ಬೆನ್ನಲ್ಲೇ ಮತ್ತೆರಡು ಸ್ಫೋಟಗಳು ಸಂಭಿಸಿದೆ. ಪರಿಣಾಮ ಇಬ್ಬರು ಗಾಯಗೊಂಡದ್ದಾರೆ.
ಸ್ಫೋಟದ ಮಾಹಿತಿ ತಿಳಿಯುತ್ತಿದ್ದಂತೆ ಭದ್ರತಾ ಪಡೆಗಳು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಫೊರೆನ್ಸಿಕ್ ತಂಡ ಸೇರಿದಂತೆ ಹಲವು ತನಿಖಾ ಎಜೆನ್ಸಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದೆ. ಈ ವೇಳೆ ಈ ಸ್ಫೋಟ ಐಇಡಿ ಎಂದು ಖಚಿತಪಡಿಸಿದೆ. ಮಣಿಪುರದಲ್ಲಿನ ಈ ಸ್ಫೋಟದ ಕುರಿತು ತನಿಖೆ ತೀವ್ರಗೊಂಡಿದೆ. ಕೇಂದ್ರ ತನಿಖಾ ಸಂಸ್ಥೆಗಳು ಮಣಿಪುರ ಸ್ಫೋಟದ ತನಿಖೆಗೆ ಎಂಟ್ರಿಯಾಗುವ ಸಾಧ್ಯತೆ ಇದೆ. ಸ್ಫೋಟ ನಡೆದ ಪ್ರದೇಶ ಬಿಎಸ್‌ಎಫ್ ವ್ಯಾಪ್ತಿಯಲ್ಲಿದೆ.
ಮಣಿಪುರದಲ್ಲಿ ಉಗ್ರ ಕೃತ್ಯ, ಮತ್ತೊಂದು ಗಲಭೆಗೆ ಪ್ಲಾನ್ ಮಾಡಲಾಗಿತ್ತಾ ಅನ್ನೋ ಅನುಮಾನಗಳು ಬಲವಾಗ ತೊಡಗಿದೆ. ಪಾಳು ಬಿದ್ದ ಮನೆಯಲ್ಲಿ ಐಇಡಿ ಸ್ಫೋಟ ಶೇಖರಣೆ ಅಥವಾ ಬಾಂಬ್ ತಯಾರಿ ಕೆಲಸಗಳು ನಡೆಯುತ್ತಿತಾ ಅನ್ನೋ ಅನುಮಾನ ಕಾಡಕೊಡಗಿದೆ. ಈ ರೀತಿ ಶೇಖರಿಸಿಟ್ಟ ಐಇಡಿ ಸ್ಫೋಟಗೊಂಡಿದೆಯಾ ಎಂದು ತನಿಖಾ ಸಂಸ್ಥೆಗಳು ಶೋಧ ಕಾರ್ಯ ನಡೆಸುತ್ತಿದೆ. ಸ್ಫೋಟ ಸಂಬಂಧ ಕೆಲವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ