ಕಾಶ್ಮೀರ, ಮೋದಿ ಕ್ಷೇತ್ರ ವಾರಾಣಸಿಯಲ್ಲೂ ತಿಮ್ಮಪ್ಪನ ದೇಗುಲ!

By Suvarna NewsFirst Published Dec 29, 2019, 2:21 PM IST
Highlights

ಕಾಶ್ಮೀರ, ಮೋದಿ ಕ್ಷೇತ್ರ ವಾರಾಣಸಿಯಲ್ಲೂ ತಿಮ್ಮಪ್ಪನ ದೇಗುಲ| ಟಿಟಿಡಿ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ

ತಿರುಪತಿ[ಡಿ.29]:  ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯನ್ನು ಪ್ರತಿನಿಧಿಸುವ ಉತ್ತರಪ್ರದೇಶದ ವಾರಾಣಸಿಯಲ್ಲಿ ತಿರುಪತಿ ತಿಮ್ಮಪ್ಪನ ದೇಗುಲ ತೆರೆಯಲು, ಟಿಟಿಡಿ ನಿರ್ಧರಿಸಿದೆ.

ಶನಿವಾರ ನಡೆದ ಟಿಟಿಡಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಎರಡೂ ರಾಜ್ಯಗಳಿಂದ ದೇಗುಲ ನಿರ್ಮಾಣ ಮಾಡುವಂತೆ ಮತ್ತು ಇದಕ್ಕೆ ಅಗತ್ಯ ಜಮೀನು ನೀಡುವ ಪ್ರಸ್ತಾಪ ಬಂದಿತ್ತು. ಅದನ್ನು ಮಾನ್ಯ ಮಾಡಿ ದೇಗುಲ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಇದೇ ವೇಳೆ ಟಿಟಿಡಿ ಕುರಿತ ಸುಳ್ಳು ಸುದ್ದಿಯೊಂದನ್ನು ಪ್ರಕಟಿಸಿದ ಸ್ಥಳೀಯ ಪತ್ರಿಕೆಯೊಂದರ ವಿರುದ್ಧ 100 ಕೋಟಿ ರು. ಮಾನನಷ್ಟಮೊಕದ್ದಮೆ ಹೂಡಲೂ ಟಿಟಿಡಿ ನಿರ್ಧರಿಸಿದೆ.

click me!