ತಿರುಪತಿ ತುಪ್ಪ ಕಲಬೆರಕೆ ಗೊತ್ತಿದ್ದೂ ಟಿಟಿಡಿ ಖರೀದಿ ಮುಂದುವರಿಕೆ : ಸಿಬಿಐ

Kannadaprabha News   | Kannada Prabha
Published : Feb 09, 2026, 05:14 AM IST
TTD

ಸಾರಾಂಶ

ತಿರುಪತಿ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಿದ ಪ್ರಕರಣಕ್ಕೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ರಾಸಾಯನಿಕಯುಕ್ತ ತುಪ್ಪ ಬಳಸುತ್ತಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದರ ಅರಿವಿದ್ದೂ ಟಿಟಿಡಿ ಖರೀದಿ ಮುಂದುವರಿಸಿತ್ತು ಎಂದು ಸಿಬಿಐ ಬಹಿರಂಗಪಡಿಸಿದೆ.

ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. 2019ರಿಂದ 2024ರ ಅವಧಿಯಲ್ಲಿ ರಾಸಾಯನಿಕಯುಕ್ತ ತುಪ್ಪ ಬಳಸುತ್ತಿರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದರ ಅರಿವಿದ್ದೂ ಟಿಟಿಡಿ ತುಪ್ಪ ಖರೀದಿ ಮುಂದುವರಿಸಿತ್ತು ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಬಹಿರಂಗಪಡಿಸಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ತನಿಖಾ ತಂಡ (ಎಸ್‌ಐಟಿ) ಆಂಧ್ರಪ್ರದೇಶ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ, ‘ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಡೆಸಿದ್ದ ಪರೀಕ್ಷೆಯಲ್ಲಿ, ತುಪ್ಪದಲ್ಲಿ ಬೀಟಾ-ಸೆಟೊಸ್ಟೆರಾಲ್ ಎಂಬ ರಾಸಾಯನಿಕ ಇರುವಿಕೆ ಪತ್ತೆ ಹಚ್ಚಿತ್ತು.

ಗಂಭೀರ ಗುಣಮಟ್ಟ ಸಮಸ್ಯೆ ಬಗ್ಗೆ ತಿಳಿದಿದ್ದರೂ ಕ್ರಮ ಕೈಗೊಳ್ಳಲು ವಿಫಲ

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗಂಭೀರ ಗುಣಮಟ್ಟ ಸಮಸ್ಯೆ ಬಗ್ಗೆ ತಿಳಿದಿದ್ದರೂ ಕ್ರಮ ಕೈಗೊಳ್ಳಲು ವಿಫಲವಾಯಿತು. 2020ರಲ್ಲಿ ಟಿಟಿಡಿ ಅಧಿಕಾರಿಗಳು ಮೊದಲು ತುಪ್ಪದ ಟೆಂಡರ್‌ ನಿಯಮಗಳನ್ನು ಬಿಗಿಗೊಳಿಸಿದರು. ಆದರೆ ಯಾವುದೇ ಸ್ಪಷ್ಟನೆ ಕೊಡದೆ ಕೇವಲ ಐದೇ ತಿಂಗಳಲ್ಲಿ ನಿಯಮಗಳನ್ನು ಸಡಿಲಗೊಳಿಸಿದರು’ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬುರ್ಖಾ ಧರಿಸಿ ಲೇಡೀಸ್ ಕೋಚ್‌ನಲ್ಲಿ ಯುವಕನ ಪಯಣ: ಮಹಿಳೆಯರು ವಿರೋಧಿಸುತ್ತಿದ್ದಂತೆ ಚಲಿಸುವ ರೈಲಿನಿಂದಲೇ ಕೆಳಗೆ ಹಾರಿದ
ಕರ್ನಾಟಕದಲ್ಲಿ ಬೇಟೆ, ಕೇರಳದಲ್ಲಿ ಹುಲಿ ಚರ್ಮ, ಹಲ್ಲು, ಉಗುರು ಮಾರಾಟಕ್ಕೆ ಯತ್ನಿಸಿದ ಖದೀಮರ ಬಂಧನ