
ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ದುರಂತದಲ್ಲಿ 11 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟ್ರಕ್ ಟ್ರೈಲರ್‌ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ನಂತರ ಬೊಲೆರೋ ವಾಹನ ಬೆಂಕಿಗಾಹುತಿಯಾಗಿದ್ದು, ಮೃತರಲ್ಲಿ 9 ಜನ ಸಜೀವ ದಹನಗೊಂಡಿದ್ದಾರೆ. ಕಳೆದ ರಾತ್ರಿ ಈ ದುರಂತ ಸಂಭವಿಸಿದೆ. ಜಲ್ಲಿಕಲ್ಲು ಸಾಗಿಸುತ್ತಿದ್ದ ಟ್ರಕ್ ಟ್ರೈಲರ್‌ನ ಬ್ರೇಕ್ ಫೈಲ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡ ನಂತರ ಈ ದುರಂತ ಸಂಭವಿಸಿದೆ. ಈ ಟ್ರಕ್ ಮಧ್ಯಪ್ರದೇಶದಿಂದ ಜಲ್ಲಿಕಲ್ಲು ಸಾಗಿಸುತ್ತಿತ್ತು.
ಬೊಲೆರೋದಲ್ಲಿದ್ದ 9 ಜನ ಸಜೀವ ದಹನ
ಈ ಟ್ರಕ್ ಟ್ರೈಲರ್ ಮೊದಲಿಗೆ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ.ಈ ವೇಳೆ ಕಾರು ಟ್ರೈಲರ್ ಹಾಗೂ ಟ್ರಕ್ ಮಧ್ಯೆ ಸಿಲುಕಿದೆ.ಇದೆ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಬೊಲೆರೋ ವಾಹನ ಟ್ರೈಲರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೋ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಜೋರಾಗಿ ಸ್ಫೋಟದ ಸದ್ದು ಕೇಳಿದೆ. ಈ ದುರಂತದಲ್ಲಿ 9 ಬೊಲೆರೋದಲ್ಲಿದ್ದ 9 ಜನ ಸಜೀವ ದಹನವಾಗಿದ್ದಾರೆ. ದುರಂತದಲ್ಲಿ ಮೃತಪಟ್ಟವರೆಲ್ಲರೂ ಪರಸ್ಪರ ಸಂಬಂಧಿಕರಾಗಿದ್ದಾರೆ. ಇದರ ಜೊತೆಗೆ ಟ್ರಕ್‌ನ ಕ್ಲೀನರ್ ಹಾಗೂ ಸ್ವಿಫ್ಟ್ ಕಾರಿನ ಚಾಲಕನೂ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಧರ್ಮಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆಯಾಜ್‌ನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿದ ಮಹಾ ಪೊಲೀಸರು
ಮಿರ್ಜಾಪುರ ಜಿಲ್ಲಾ ವಿಭಾಗೀಯ ಅಧಿಕಾರಿ ಪ್ರಕಾರ, ಮೃತರನ್ನು 7 ವರ್ಷದ ಶಿವ, ಆತನ ತಾಯಿ 38 ವರ್ಷದ ವಂದನಾ ಸಿಂಗ್ ಹಾಗೂ ಅದೇ ಕುಟುಂಬದ 47 ವರ್ಷದ ವೀಣಾ ಸಿಂಗ್ 15 ವರ್ಷದ ಪಿಯುಷ್ ಸಿಂಗ್ ಹಾಗೂ ಅವರ ಪುತ್ರಿ ಸೋನಮ್, 42 ವರ್ಷದ ಪ್ರಿಯಾಂಕಾ, 18 ವರ್ಷದ ಕಾರ್ತಿಕೇಯ 40 ವರ್ಷದ ಪಂಕಜ್ ಸಿಂಗ್, 9 ವರ್ಷದ ಸೋನಮ್ ಬೊಲೆರೋ ಚಾಲಕ ರಾಮಪುರ ನಿವಾಸಿ ವಿಷ್ಣು ಎಂದು ಗುರುತಿಸಲಾಗಿದೆ. ಮೃತರು ಜಿಗ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನರೈನಾ ಗ್ರಾಮದ ನಿವಾಸಿಗಳಾಗಿದ್ದಾರೆ. ಇಲ್ಲಿನ ಅರುಣ್ ಸಿಂಗ್ ಎಂಬುವವರು ತಮ್ಮ 7 ವರ್ಷದ ಪುತ್ರ ಕೇಶ ಮುಂಡನಕ್ಕಾಗಿ ಮೈಹಾರ್ ಎಂಬಲ್ಲಿಗೆ ಹೋಗುತ್ತಿದ್ದರು. ಮೃತರಲ್ಲಿ ಪ್ರಿಯಾಂಕಾ ಸಿಂಗ್ ಹಾಗೂ ಕಾರ್ತಿಕೇಯ ಸಿಂಗ್ ಅವರು ಮಧ್ಯಪ್ರದೇಶದವರಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಈ ದುರಂತದಲ್ಲಿ ಸ್ವಿಫ್ಟ್ ಕಾರಿನ ಚಾಲಕ ಸೋನಭದ್ರಾ ಮೂಲದ 27 ವರ್ಷದ ಜೈ ಪ್ರಕಾಶ್ ಕೂಡ ಸಾವನ್ನಪ್ಪಿದ್ದಾರೆ. ಹಾಗೆಯೇ ಟ್ರಕ್‌ನ ಕ್ಲೀನರ್ ಮಧ್ಯಪ್ರದೇಶ ಮೂಲದ ವಿಕಾಸ್ ಎಂಬುವವರು ತೀವ್ರವಾಗಿ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ