
ತಮಿಳುನಾಡು(ಆ.27): ಈ ವರ್ಷ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇನ್ನಿಲ್ಲದ ಕಷ್ಟಪಟ್ಟಿದ್ದಾರೆ. ಕಾರಣ ಕೊರೋನಾ ವೈರಸ್. ಆದರೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ಆರಂಭಿಸಿದ ದಿನದಿಂದ ಹರಸಾಹಸ ಪಡುತ್ತಿದ್ದಾರೆ. ಈ ರೀತಿ ಯಾವುದೇ ಮೂಲ ಸೌಕರ್ಯವಿಲ್ಲದೆ ಸಾಧನೆಗೈದ ವಿದ್ಯಾರ್ಥಿಗಳ ಪೈಕಿ ಸಿ ಶ್ರೀದೇವಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ.
ಅಧಿಕಾರಿಗಳು, ಶಾಸಕರು ಫೇಲ್; ಒಡವೆ ಮಾರಿ ಗ್ರಾಮಸ್ಥರೇ ನಿರ್ಮಿಸಿದ್ರು ರಸ್ತೆ!.
ತಮಿಳುನಾಡಿನ ತ್ರಿಪ್ರೂರು ಜಿಲ್ಲೆಯಲ್ಲಿರುವ ಅಣ್ಣಾಮೈಲೇ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಬುಡಕಟ್ಟು ಜನಾಂಗದ ಸಿ ಶ್ರೀದೇವಿ SSLC ಪರೀಕ್ಷೆಗಾಗಿ 150 ಕಿ.ಮೀ ಪ್ರಯಾಣ ಮಾಡಿದ್ದಾಳೆ. ಇದಕ್ಕಾಗಿ 2 ರಾಜ್ಯಗಳ್ನು ದಾಟಿ ಪರೀಕ್ಷೆ ಬರೆದಿದ್ದಾಳೆ. ಇಷ್ಟೇ ಅಲ್ಲ ಶೇಕಡಾ 95 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಅರಣ್ಯ ವಲಯದಿಂದ ಶ್ರೀದೇವಿ ಪರೀಕ್ಷೆಗಾಗಿ ಕೇರಳದ ಚಾಲಕುಡಿಗೆ ತೆರಳಿದ್ದಾಳೆ. ಈ ರೀತಿ ಸಾಹಸ ಮಾಡಿ ಪರೀಕ್ಷೆ ಬರೆದು ರಾಜ್ಯಕ್ಕೆ ಕೀರ್ತಿ ತಂದ ಶ್ರೀದೇವಿ ಇದೀಗ ಉನ್ನತ ಶಿಕ್ಷಣ ಮಾಡುವು ಗುರಿ ಇಟ್ಟುಕೊಂಡಿದ್ದಾಳೆ. ಈ ಬಾಲಕಿ ತಂದೆ ಕೂಡ ಮಗಳ ವಿದ್ಯಾಭ್ಯಾಸಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಈ ಅರಣ್ಯವಲಯದಲ್ಲಿನ ಬುಡುಕಟ್ಟು ಜನಾಂಗ ಬಹುತೇಕ ಮಕ್ಕಳು ಸನಿಹದಲ್ಲಿ ಶಾಲೆ, ಉತ್ತಮ ರಸ್ತೆ, ಮೂಲ ಸೌಕರ್ಯವಿಲ್ಲದ ಕಾರಣ ಹೆಚ್ಚಿನವರು ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಆದರೆ ಶ್ರೀದೇವಿ ತಾನು ಈ ಅರಣ್ಯವಲಯದ ಬುಡುಕಟ್ಟು ಜನಾಂಗದ ಇತರ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು ಎಂದು ಈ ರೀತಿ ಕಷ್ಟ ಪಟ್ಟು ವಿದ್ಯಾಭ್ಯಾಸ ಮುಂದುವರಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ