ಭೋಪಾಲ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಪತನಗೊಂಡ ಪರಿಣಾಮ ಮಹಿಳಾ ಪೈಲಟ್ ಹಾಗೂ ತರಬೇತುದಾರ ಪೈಲಟ್ ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ನಡೆದಿದೆ. ಸಂಪೂರ್ಣವಾಗಿ ಸುಟ್ಟಸ್ಥಿತಿಯಲ್ಲಿ ಇಬ್ಬರ ದೇಹ ಸಿಕ್ಕಿದೆ. ಮೃತ ಮಹಿಳಾ ಪೈಲಟ್ ಅನ್ನು ವೃಕ್ಷಾಂಕ್ಷಾ ಮಹೇಶ್ವರಿ (20) ಮತ್ತು ತರಬೇತುದಾರನನ್ನು ಮೋಹಿತ್ ಠಾಕೂರ್ (26) ಎಂದು ಗುರುತಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ದುರ್ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ನಕ್ಸಲ್ ಪೀಡಿತ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಬಾಲಾಘಾಟ್‌ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಈ ವಿಮಾನವು ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಗೆ (IGRAU) ಸೇರಿದ್ದಾಗಿದ್ದು, ಪೈಲಟ್‌ಗಳ ತರಬೇತಿಗೆ ಬಳಸಲಾಗುತ್ತಿತ್ತು. ಪ್ರಾಥಮಿಕ ತನಿಖೆಯಲ್ಲಿ ಕೆಟ್ಟ ಹವಾಮಾನದಿಂದಾಗಿ ಈ ಅಪಘಾತ ನಡೆದಿದೆ ಎಂಬುದು ತಿಳಿದು ಬಂದಿದೆ ನೆರೆಯ ಮಹಾರಾಷ್ಟ್ರದ ಗೊಂಡಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯ ಪ್ರದೇಶದ ಮೊರೆನಾ ಬಳಿ 2 ಯುದ್ಧ ವಿಮಾನ ಪತನ; ಓರ್ವ ಪೈಲಟ್ ಸಾವು
ಘಟನಾ ಸ್ಥಳದಿಂದ ಎರಡು ತೀವ್ರವಾಗಿ ಹಾನಿಗೊಳಗಾದ ಶವಗಳನ್ನು ಮಹಜರು ಮಾಡಲಾಗಿದೆ ಎಂದು ಬಾಲಘಾಟ್ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸೌರಭ್ (Sameer Saurabh) ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದ ಸಮೀಪ ಬಾಲಾಘಾಟ್ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಲಾಂಜಿ ಮತ್ತು ಕಿರ್ನಾಪುರ ಪ್ರದೇಶದ ಬೆಟ್ಟಗಳ ಮೇಲೆ ವ್ಯಕ್ತಿಯ ಸುಟ್ಟಿರುವ ಮೃತದೇಹ (ಪೈಲಟ್ ಮೋಹಿತ್ ಠಾಕೂರ್ ಅವರದ್ದು ಎಂದು ನಂಬಲಾಗಿದೆ) ಪತ್ತೆಯಾಗಿದೆ ಎಂದು ಅವರು ಹೇಳಿದ್ದರು.
ನಮಗೆ ಮಧ್ಯಾಹ್ನ 3:45 ರ ಸುಮಾರಿಗೆ ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿತು. ಆದರೆ ಅಪಘಾತ ನಡೆದ ಸ್ಥಳವೂ ನಕ್ಸಲ್ ಪೀಡಿತ ಪ್ರದೇಶವಾಗಿರುವುದರಿಂದ ಭದ್ರತಾ ಪಡೆಗಳನ್ನು ಕರೆಸಲಾಯಿತು. ಭದ್ರತಾ ಸಿಬ್ಬಂದಿ ಪ್ರದೇಶವನ್ನು ಸುತ್ತುವರಿದ ನಂತರ ಇತರ ಸಿಬ್ಬಂದಿ ಸ್ಥಳಕ್ಕೆ ತಲುಪಿದರು. ನಾವು ಶವಗಳನ್ನು ವಶಪಡಿಸಿಕೊಂಡಿದ್ದೇವೆ. ವಿಮಾನದ ತರಬೇತುದಾರ ಮತ್ತು ಮಹಿಳಾ ಪೈಲಟ್ ದೇಹ ಸುಟ್ಟು ಕರಕಲಾಗಿದೆ. ಘಟನೆ ನಡೆದ ಸ್ಥಳವು ಲಾಂಜಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ಸೌರಭ್ ಹೇಳಿದರು.
ಗಾಳಿಯಲ್ಲಿ ಹಾರುತ್ತಿದ್ದ ಲಘು ವಿಮಾನಗಳು ಡಿಕ್ಕಿ, ನಾಲ್ವರು ಸಾವು!
ಮಧ್ಯಾಹ್ನ 3.06 ಕ್ಕೆ ಬಾಲಘಾಟ್ ಗಡಿಯಲ್ಲಿರುವ ಗೊಂಡಿಯಾ ಜಿಲ್ಲೆಯ (Gondia) ಬಿರ್ಸಿ ಏರ್‌ಸ್ಟ್ರಿಪ್‌ನಿಂದ (Birsi airstrip) ಟೇಕಾಫ್ ಆದ ಈ ತರಬೇತು ವಿಮಾನ ಮಧ್ಯಾಹ್ನ 3.11ಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಕೇಂದ್ರದ ಸಂಪರ್ಕ ಕಳೆದುಕೊಂಡಿತು ಎಂದು ಉಪ ಪೊಲೀಸ್ ಮಹಾನಿರೀಕ್ಷಕ ಅನುರಾಗ್ ಶರ್ಮಾ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ