
Touching Minors Private Parts Not Rape says SC: ಅಪ್ರಾಪ್ತೆಯ ಖಾಸಗಿ ಅಂಗವನ್ನು ಮುಟ್ಟುವುದು ಅತ್ಯಾ೧ಚಾರ ಎಂದು ಹೇಳಲಾಗದು ಮತ್ತು ಅದಕ್ಕೆ ಸಂಬಂಧಿಸಿದ ಕಾಯ್ದೆಗಳಡಿ ಪ್ರಕರಣ ದಾಖಲಿಸಲು ಆಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದೋಷಿಯೊಬ್ಬನಿಗೆ ನೀಡಿದ್ದ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 50,000 ರು.ದ ಛತ್ತೀಸ್‌ಗಢ ಹೈಕೋರ್ಟ್ ಆದೇಶವನ್ನು ಸಹ ರದ್ದುಗೊಳಿಸಿ, ಶಿಕ್ಷೆ ಪ್ರಮಾಣ 7 ವರ್ಷಕ್ಕೆ ಇಳಿಸಿದೆ.
ಏನಿದು ಪ್ರಕರಣ?:
12 ವರ್ಷದ ಅಪ್ರಾಪ್ತೆಯ ಖಾಸಗಿ ಅಂಗ ಮುಟ್ಟಿದ ಆರೋಪದ ಮೇಲೆ ಲಕ್ಷ್ಮಣ್ ಜಂಗ್ಡೆ ಎಂಬುವರ ಮೇಲೆ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಛತ್ತೀಸ್‌ಗಢದ ಸ್ಥಳೀಯ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50,000 ರು. ದಂಡ ವಿಧಿಸಿತ್ತು. 2024ರಲ್ಲಿ ಇದನ್ನು ಛತ್ತೀಸ್‌ಗಢ ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು. ಈ ತೀರ್ಪಿನ ವಿರುದ್ಧ ಜಂಗ್ಡೆ ಸುಪ್ರೀಂ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಪ್ರೀತಿ ಮಾಡುವಾಗ 'ಲೈಂಗಿಕ ಕ್ರಿಯೆ' ನಡೆಸುವುದು ರೇಪ್ ಅಲ್ಲ: ಕೋರ್ಟ್‌ನಿಂದ ಮಹತ್ವದ ತೀರ್ಪು
ಇದನ್ನು ಆಲಿಸಿದ ನ್ಯಾ। ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ನ್ಯಾ। ಜೋಯ್ಮಲ್ಯ ಬಾಗ್ಚಿ ಅವರ ಪೀಠ, ‘ಅಪ್ರಾಪ್ತೆಯ ಖಾಸಗಿ ಅಂಗವನ್ನು ಸ್ಪರ್ಶಿಸಿದ ಮಾತ್ರಕ್ಕೆ ಅದು ಅತ್ಯಾ೧ಚಾರ, ಲೈಂಗಿಕ ಕಿರುಕುಳವಾಗಲ್ಲ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ಮತ್ತು ಅವರ ತಾಯಿಯ ಹೇಳಿಕೆ ಸಹ ಕಿರುಕುಳ ಸೂಚಿಸಲ್ಲ ಎಂದು ಹೇಳಿ ಛತ್ತೀಸ್‌ಗಢದ ಹೈಕೋರ್ಟ್ ನೀಡಿದ್ದ ತೀರ್ಪು ರದ್ದುಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ