ಟಾಪ್ ಉಗ್ರ ಡೆಹ್ರಾಡೂನ್‌ ಐಎಂಎ ವಿದ್ಯಾರ್ಥಿ!

By Suvarna NewsFirst Published Aug 21, 2021, 8:24 AM IST
Highlights

* 1992ರಲ್ಲಿ ಡೆಹ್ರಾಡೂನ್‌ನಲ್ಲಿ ಇಂಡಿಯನ್‌ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ

* ಟಾಪ್‌ ಉಗ್ರ ಸ್ಟಾನಿಕ್‌ಝೈ ಐಎಂಎ ವಿದ್ಯಾರ್ಥಿ

ಡೆಹ್ರಾಡೂನ್‌(ಆ.21): ತಾಲಿಬಾನ್‌ನ ಟಾಪ್‌ ಉಗ್ರ ಸ್ಟಾನಿಕ್‌ಝೈ ಭಾರತದ ಡೆಹ್ರಾಡೂನ್‌ನಲ್ಲಿರುವ ಇಂಡಿಯನ್‌ ಮಿಲಿಟರಿ ಅಕಾಡೆಮಿ (ಐಎಂಎ)ಯ 1982ನೇ ಸಾಲಿನ ವಿದ್ಯಾರ್ಥಿ ಎಂಬ ಅಚ್ಚರಿಯ ಮಾಹಿತಿ ಬಹಿರಂಗಗೊಂಡಿದೆ. ಮಹಮ್ಮದ್‌ ಅಬ್ಬಾಸ್‌ ಸ್ಟಾನಿಕ್‌ಝೈ(60) ಸದ್ಯ ತಾಲಿಬಾನ್‌ ಸಂಘಟನೆಯ 7 ಪ್ರಮುಖ ವ್ಯಕ್ತಿಗಳ ಪೈಕಿ ಒಬ್ಬ. ಈತ 20 ವರ್ಷದವನಿದ್ದಾಗ ಐಎಂಎಯ ಭಗತ್‌ ಬಟಾಲಿಯನ್‌ನ ಕೆರೆನ್‌ ಕಂಪನಿಯ 45 ಮಂದಿ ಕೆಡೆಟ್ಸ್‌ (ಯುವ ಸೈನಿಕ) ಪೈಕಿ ಓರ್ವನಾಗಿದ್ದ ಎಂದು ತಿಳಿದುಬಂದಿದೆ.

‘ ಇತರೆ ಸೈನಿಕರಿಗಿಂತ ಸ್ಟಾನಿಕ್‌ಝೈæ ಹೆಚ್ಚು ವಯಸ್ಸಾಗಿತ್ತು. ಆ ಸಮಯದಲ್ಲಿ ಆತ ಯಾವುದೇ ಮೂಲಭೂತವಾಗಿ ಸಿದ್ಧಾಂತಗಳನ್ನು ಹೊಂದಿರಲಿಲ್ಲ. ಇಲ್ಲಿ ಇದ್ದಷ್ಟೂಸಮಯ ಸಂತೋಷದಿಂದ ಇದ್ದ’ ಎಂದು ಸ್ಟಾನಿಕ್‌ಝೈ ಬ್ಯಾಚ್‌ಮೇಟ್‌ ಮತ್ತು ನಿವೃತ್ತ ಮೇಜರ್‌ ಜನರಲ್‌ ಡಿ.ಎ.ಚತುರ್ವೇದಿ ಹೇಳಿದ್ದಾರೆ.

ಹಾಗೆಯೇ ಇನ್ನೊಬ್ಬ ಬ್ಯಾಚ್‌ಮೇಟ್‌ ನಿವೃತ್ತ ಕೊಲೋನೆಲ್‌ ಕೇಸರ್‌ ಸಿಂಗ್‌ ಶೇಖಾವತ್‌, ‘ಸ್ಟಾನಿಕ್‌ಝೈ ತುಂಬಾ ಸ್ನೇಹಪರ ವ್ಯಕ್ತಿಯಾಗಿದ್ದ. ಆತನ ಜೊತೆಗೆ ಋುಷಿಕೇಶಕ್ಕೆ ತೆರಳಿ ಗಂಗಾ ನದಿಯಲ್ಲಿ ಮಿಂದಿದ್ದ ನೆನಪೂ ಇದೆ. ಆತನೊಂದಿಗೆ ಐಎಂಎ ಈಜುಕೊಳದಲ್ಲಿದ್ದ ಫೋಟೋ ಸಹ ಲಭ್ಯವಿದೆ. ಆತ ಆಫ್ಘನ್‌ ಸೇನೆ ಸೇರುವ ಮೊದಲು ಐಎಂಎನಲ್ಲಿ ಒಂದೂವರೆ ವರ್ಷ ತರಬೇತಿ ಪಡೆದಿದ್ದ’ ಎಂದು ತಿಳಿಸಿದ್ದಾರೆ.

1996ರಲ್ಲಿ ಸೇನೆ ತೊರೆದು ತಾಲಿಬಾನ್‌ ಸೇರಿ ತಾಲಿಬಾನ್‌ ಆಳ್ವಿಕೆ ವೇಳೆ ವಿದೇಶಾಂಗ ಸಚಿವ ಸಹ ಆಗಿದ್ದ. ಭಾರತದಲ್ಲಿ ಕಾಲೇಜಿನಲ್ಲಿ ಇರುವಾಗಲೇ ಇಂಗ್ಲಿಷ್‌ ಭಾಷೆ ಮೇಲೆ ಹಿಡಿತ ಸಾಧಿಸಿದ್ದ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

ಐಎಂಎ 1947ರಿಂದಲೂ ವಿದೇಶಿ ಕೆಡೆಟ್ಸ್‌ಗಳನ್ನು ನೇಮಿಸಿಕೊಳ್ಳುತ್ತಿತ್ತು. ಭಾರತ-ಪಾಕಿಸ್ತಾನ ಯುದ್ಧದ ಬಳಿಕ 1971ರಿಂದ ಆಫ್ಘನ್‌ ಕೆಡೆಟ್ಸ್‌ಗಳನ್ನು ನೇಮಿಸಿಕೊಳ್ಳಲು ಆರಂಭಿಸಿತು. ಸ್ಟಾನಿಕ್‌ಝೈನನ್ನು ಅಫ್ಘಾನಿಸ್ತಾನ ನ್ಯಾಷನಲ್‌ ಡಿಫೆನ್ಸ್‌ನಿಂದ ನೇರವಾಗಿ ನೇಮಿಸಿಕೊಳ್ಳಲಾಗಿತ್ತು.

click me!