ಗ್ರೆಟಾ ಥನ್‌ಬರ್ಗ್ ಅವರು ಭಾರತದಲ್ಲಿನ ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದಲ್ಲದೆ, ಜಾಗತಿಕ ಹೋರಾಟಕ್ಕೆ ಕರೆ ನೀಡಿದ ದಾಖಲೆಯೊಂದನ್ನು ಟ್ವೀಟ್‌ನಲ್ಲಿ ಲಗತ್ತಿಸಿದ್ದರು. ಈ ದಾಖಲೆಯ ಸೃಷ್ಟಿಕರ್ತನ ಪತ್ತೆಯಾಗಿದೆ. ಯಾರಾತ..?
ನವದೆಹಲಿ (ಫೆ.06): ಸ್ವೀಡನ್ ಪರಿಸರವಾದಿ ಗ್ರೆಟಾ ಥನ್‌ಬರ್ಗ್ ಅವರು ಭಾರತದಲ್ಲಿನ ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದಲ್ಲದೆ, ಜಾಗತಿಕ ಹೋರಾಟಕ್ಕೆ ಕರೆ ನೀಡಿದ ದಾಖಲೆಯೊಂದನ್ನು ಟ್ವೀಟ್‌ನಲ್ಲಿ ಲಗತ್ತಿಸಿದ್ದರು. ಈ ದಾಖಲೆಯ ಸೃಷ್ಟಿಕರ್ತರು ಯಾರು ಎಂಬುದು ಈಗ ಗೊತ್ತಾಗಿದೆ.
ಕೆನಡಾದಲ್ಲಿರುವ ಪೊಯಟಿಕ್ ಫಾರ್ ಜಸ್ಟಿಸ್ ಎಂಬ ಸಂಘಟನೆಯ ಸಂಸ್ಥಾಪಕ ಎಂ.ಒ. ಧಾಲಿವಾಲ್ ಇದರ ರೂವಾರಿ. ಜತೆಗೆ, ಕೆನಡಾ ಸಾರ್ವಜನಿಕ ಸಂಪರ್ಕ ಸಂಸ್ಥೆ ಸ್ಕೈರಾಕೆಟ್, ಕೆನಡಾದ ವಿಶ್ವ ಸಿಖ್ ಸಂಘಟನೆ ನಿರ್ದೇಶಕಿ ಅನಿತಾ ಲಾಲ್, ಕೆನಡಾ ಸಂಸದ ಹಾಗೂ ಪೀಸ್ ಫಾರ್ ಜಸ್ಟಿಸ್ ಸಹ ಸಂಸ್ಥಾಪಕ ಜಗ್ಮೀತ್ ಸಿಂಗ್ ಅವರೂ ಇದರ ಸೃಷ್ಟಿಕರ್ತರು ಎಂದು ಮಾಧ್ಯಮ ವರದಿ ಹೇಳಿದೆ.
ರೈತ ಪ್ರತಿಭಟನೆ ಹೆಸರಿನಲ್ಲಿ ಭಾರತ ವಿರೋಧಿ ಪಿತೂರಿಗೆ ಟೂಲ್ ಕಿಟ್ ನೀಡಿದ ಗ್ರೇಟಾ ಧನ್ಬರ್ಗ್! ...
‘ಇವರು ಖಲಿಸ್ತಾನ ಹೋರಾಟದ ಪರ ಅನುಕಂಪ ಹೊಂದಿದ್ದು, ಭಾರತದ ಭದ್ರತಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ. ಇವರೇ ಜಾಗತಿಕ ಹೋರಾಟ ನಡೆಯಬೇಕು ಎಂಬ ದಾಖಲೆ ಸೃಷ್ಟಿಸಿದ್ದು, ವಿಶ್ವದಾದ್ಯಂತ ಹಂಚಿಕೊಂಡಿದ್ದರು’ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ಹೇಳಿದೆ.
Our leader shaheer sialvi ⬆️ pic.twitter.com/2rNL2rTx5A
ಜ.26ರಂದು ಕೆನಡಾದ ಭಾರತೀಯ ದೂತಾವಾಸದ ಹೊರಗೆ ನಡೆದ ಪ್ರತಿಭಟನೆಯಲ್ಲಿ ಧಾಲಿವಾಲ್ ಇದ್ದರು ಎಂದೂ ಗೊತ್ತಾಗಿದೆ.