ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭ| ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿ ವೈರಲ್| ಲಸಿಕೆ ಅಭಿಯಾನ ಜೊತೆ ವಿಶೇಷ ಸಂದೇಶ
ಪುಣೆ(ಜ.16): ಪುರಿ ಸಮುದ್ರ ತೀರದಲ್ಲಿ ಕೊರೋನಾ ಲಸಿಕೆಗೆ ವಿಶೇಷ ಸ್ವಾಗತ| ಲಸಿಕೆ ಅಭಿಯಾನಕ್ಕೆ ಶುಭ ಕೋರಿದ ಮರಳು ಶಿಲ್ಪಿ| ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಕಲಾಕೃತಿ ವೈರಲ್
ಶನಿವಾರ ಬೆಳಗ್ಗೆ ಇಡೀ ದೇಶವೇ ಜಗತ್ತಿನ ಅತಿದೊಡ್ಡ ಕೊರೋನಾ ಲಸಿಕೆ ವಿತರಣೆ ಆಂದೋಲನಕ್ಕೆ ಸಜ್ಜಾಗುತ್ತಿದ್ದ ಸಂದರ್ಭದಲ್ಲಿ ಇತ್ತ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಟ್ವಿಟರ್‌ನಲ್ಲಿ ಮಹತ್ವದ ಸಂದೇಶವೊಂದನ್ನು ನೀಡುತ್ತಾ ತಮ್ಮ ಕಲಾಕೃತಿಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದು ಭಾರೀ ವೈರಲ್ ಆಗಿದೆ.
ಪಟ್ನಾಯಕ್ ತಯಾರಿಸಿರುವ ಈ ಮರಳು ಶಿಲ್ಪದಲ್ಲಿ ಒಂದು ಬದಿಯಲ್ಲಿ ಕೊರೋನಾ ಅಟ್ಟಹಾಸವಿರುವ ಭಾರತದ ನಕ್ಷೆ ಇದ್ದರೆ, ಅದರ ಪಕ್ಕದಲ್ಲಿ ಕೊರೋನಾ ವ್ಯಾಕ್ಸಿನ್ ಎಂದು ಬರೆದ ಬೃಹತ್ ಸಿರಿಂಜ್ ನಿರ್ಮಿಸಿದ್ದಾರೆ. ಇದರೊಂದಿಗೆ 'ಕೊರೋನಾ ಲಸಿಕೆಗೆ ಸ್ವಾಗತ. ಒಗ್ಗಟ್ಟಿನಿಂದ ನಾವು ಗೆಲ್ಲಬಹುದು' ಎಂಬ ಸಂದೇಶವನ್ನೂ ನೀಡಿದ್ದಾರೆ.
New hope & new beginning. World's largest drive will start from tomorrow in India . My welcome SandArt at Puri beach with message “Together we can win “. pic.twitter.com/fxusPiDP0I
— Sudarsan Pattnaik (@sudarsansand)ಪುರಿ ಸಮುದ್ರ ತೀರದಲ್ಲಿ ತಾನು ನಿರ್ಮಿಸಿದ ಈ ಕಲಾಕೃತಿಯ ಫೋಟೋ ಟ್ವೀಟ್ ಮಾಡಿರುವ ಸುದರ್ಶನ್ ಪಟ್ನಾಯಯಕ್ ಹೊಸ ಭರವಸೆಯೊಂದಿಗೆ ವಿಶ್ವದ ಅತಿದೊಡ್ಡ ಕೊರೋನಾ ಲಸಿಕೆ ಅಭಿಯಾನ ಭಾರತದಲ್ಲಿ ನಾಳೆ ಆರಂಭವಾಗಲಿದೆ. ಹೀಗಿರುವಾಗ ಕೊರೋನಾ ಲಸಿಕೆ ಸ್ವಾಗತಿಸಿ ನಾನು ನಿರ್ಮಿಸಿದ ಮರಳು ಶಿಲ್ಪ ಎಂದು ಬರೆದಿದ್ದಾರೆ.