ನಿಶ್ಚಿತಾರ್ಥ ಕಾರ್ಯಕ್ರಮದ ವೇಳೆ ಕುದಿಯುವ ಎಣ್ಣೆ ಬಾಣಲೆಗೆ ಬಿದ್ದು 2 ವರ್ಷದ ಕಂದಮ್ಮ ಸಾವು!

Published : Jan 23, 2025, 06:26 PM IST
ನಿಶ್ಚಿತಾರ್ಥ ಕಾರ್ಯಕ್ರಮದ ವೇಳೆ ಕುದಿಯುವ ಎಣ್ಣೆ ಬಾಣಲೆಗೆ ಬಿದ್ದು 2 ವರ್ಷದ ಕಂದಮ್ಮ ಸಾವು!

ಸಾರಾಂಶ

ಭೋಪಾಲ್‌ನಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎರಡು ವರ್ಷದ ಬಾಲಕ ಕುದಿಯುವ ಎಣ್ಣೆ ಬಾಣಲೆಗೆ ಬಿದ್ದು ಸಾವಿಗೀಡಾಗಿದ್ದಾನೆ. ಒಲೆಯ ಮೇಲಿಂದ ಕೆಳಗಿಳಿಸಿದ್ದ ಬಾಣಲೆಗೆ ಆಕಸ್ಮಿಕವಾಗಿ ಬಿದ್ದ ಬಾಲಕ ಸಂಪೂರ್ಣವಾಗಿ ಬೆಂದು ಹೋಗಿದ್ದ.

ಭೋಪಾಲ್‌ (ಜ.23): ದಾರುಣ ಘಟನೆಯೊಂದರಲ್ಲಿ 2 ವರ್ಷದ ಕಂದಮ್ಮ ಕುದಿಯುವ ಎಣ್ಣೆ ಬಾಣಲೆಗೆ ಬಿದ್ದು ಸಾವು ಕಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಭೋಪಾಲ್‌ನ ನಿಶಾತ್‌ಪುರದಲ್ಲಿ ಕಳೆದ ಸೋಮವಾರ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಈ ದುರ್ಘಟನೆ ನಡೆದಿದೆ. ಎರಡು ವರ್ಷದ ಬಾಲಕನೊಬ್ಬ ಆಗಷ್ಟೇ ಒಲೆಯ ಮೇಲಿಂದ ಕೆಳಗೆ ಇಳಿಸಿದ್ದ ಕುದಿಯುವ ಎಣ್ಣೆಯ ಬಾಣಲೆಯಲ್ಲಿ ಬಿದ್ದು ಸಾವು ಕಂಡಿದ್ದಾನೆ. ತಕ್ಷಣವೇ ಹುಡುಗನನ್ನು ಬಾಣಲೆಯಿಂದ ಎತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಸಂಪೂರ್ಣವಾಗಿ ಬೆಂದುಹೋಗಿದ್ದ ಹುಡುಗ ಅಲ್ಲಿಯೇ ಸಾವು ಕಂಡಿದ್ದಾನೆ ಎನ್ನಲಾಗಿದೆ.

ರಾತ್ರಿ 11 ಗಂಟೆಗೆ ಕುಟುಂಬವು ಸ್ಥಳದಲ್ಲಿ ಭೋಜನ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಿಶಾತ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಮೃತ ಅಕ್ಷಾಂಶ್ ತಂದೆ ರಾಜೇಶ್ ಸಾಹು ಛೋಲಾದ ಶಿವ ನಗರ ಕಾಲೋನಿಯ ನಿವಾಸಿಯಾಗಿದ್ದು, ಉದ್ಯಮಿ ಎಂದು ತನಿಖಾಧಿಕಾರಿ ಎಎಸ್‌ಐ ಸುಖ್‌ಬೀರ್ ಯಾದವ್ ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ರಾಜೇಶ್ ಅವರ ಸೋದರಳಿಯನ ನಿಶ್ಚಿತಾರ್ಥ ಸಮಾರಂಭವು ಜನವರಿ 20 ರಂದು ನಿಶಾತ್‌ಪುರದ ಮ್ಯಾರೇಜ್‌ ಗಾರ್ಡನ್‌ನಲ್ಲಿ ನಡೆಯಿತು. ಎರಡೂ ಕುಟುಂಬಗಳು ಊಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಅಕ್ಷಾಂಶ್ ಅಡುಗೆ ಮನೆ ಇದ್ದ ಪ್ರದೇಶಕ್ಕೆ ಹೋಗಿದ್ದ.

ಇನ್ನು ಅಡುಗೆ ಮನೆಯಲ್ಲಿ ಬಾಣಸಿಗರು ಆಗತಾನೆ ಒಲೆಯ ಮೇಲಿಂದ ದೊಡ್ಡ ಕುದಿಯುವ ಎಣ್ಣೆಯ ಬಾಣಲೆಯನ್ನು ಎತ್ತಿ ನೆಲದ ಮೇಲೆ ಇರಿಸಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ವೇದಿಕೆಯನ್ನು ಅಕ್ಷಾಂಶ್ ಏರಿದ್ದ. ಆದರೆ, ವೇದಿಕೆಯ ಮೇಲೆ ಎಣ್ಣೆ ಬಿದ್ದಿದ್ದರಿಂದ ಆ ಪ್ರದೇಶ ಜಾರುತ್ತಿತ್ತು. ಅಡುಗೆ ಮನೆಯಲ್ಲಿ ಏನಾಗುತ್ತಿದೆ ಎಂದು ನೋಡುವ ಹಂತದಲ್ಲಿ ಕಾಲು ಜಾರಿ ಕುದಿಯುವ ಎಣ್ಣೆ ಪಾತ್ರಯಲ್ಲಿ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಅಡುಗೆ ಮನೆಯಲ್ಲಿ ಇದ್ದವರು ಹೊರಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶ ಎಂದೂ ಮರೆಯದ ರೈಲು ದುರಂತವಿದು, ಬಿಹಾರದಲ್ಲಿ ಟ್ರೇನ್‌ ಉರುಳಿಬಿದ್ದಾಗ ಸಾವು ಕಂಡಿದ್ದು 800 ಮಂದಿ!

ಕುಟುಂಬವು ಅಕ್ಷಂಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ನಂತರ ಅವರನ್ನು ಚುನಾಭಟ್ಟಿಯ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಅಲ್ಲಿಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

Chikkamagaluru: ಅಪ್ಪ ಸತ್ತ ಸೂತಕವಾಗಿದ್ದರೂ ಮಗಳಿಗೆ ತಿಳಿಸದೆ ಮದುವೆ ಮಾಡಿಸಿದ ಕುಟುಂಬ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್