ತಿರುಪತಿ ದೇವಸ್ಥಾನದ ಮಾಜಿ ಅರ್ಚಕ ಕೊರೋನಾ ವೈರಸ್‌ಗೆ ಬಲಿ!

By Suvarna NewsFirst Published Jul 20, 2020, 8:00 PM IST
Highlights

ಕೊರೋನಾ ವೈರಸ್ ಯಾರನ್ನೂ ಬಿಡದೆ ಹಿಂಬಾಲಿಸುತ್ತಿದೆ. ರಾಜಕಾರಣಿಗಳು, ಸೆಲೆಬ್ರೆಟಿಗಳು ಇದೀಗ ದೇವಸ್ಥಾನದ ಅರ್ಚಕರಿಗೂ ಕೊರೋನಾ ಸಂಕಷ್ಟ ತರುತ್ತಿದೆ. ಕೊರೋನಾ ವೈರಸ್‌ಗೆ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾಜಿ ಅರ್ಚತೃಕರು ಬಲಿಯಾಗಿದ್ದಾರೆ.

ತಿರುಪತಿ(ಜು.20): ಆಂಧ್ರ ಪ್ರದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದೀಗ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾಜಿ ಅರ್ಚಕ ಶ್ರೀನಿವಾಸ ದೀಕ್ಷಿತುಲು ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. 73 ವರ್ಷದ ಅರ್ಚಕರಲ್ಲಿ ಕೊರೋನಾ ರೋಗ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ಅವರನ್ನು ಶ್ರೀ ವೆಂಕಟೇಶ್ವರ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಜುಲೈ 16 ರಂದು ಅರ್ಚಕ ಶ್ರೀನಿವಾಸ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಶ್ರೀನಿವಾಸ ಜುಲೈ 19ರ ಬೆಳಗ್ಗೆ ನಿಧನರಾಗಿದ್ದಾರೆ. ದಶಕಗಳ ಕಾಲ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಶ್ರೀನಿವಾಸ ಕಳೆದೊಂದು ವರ್ಷದಿಂದ ವಿಶ್ರಾಂತಿಗೆ ಜಾರಿದ್ದರು. 

ಶ್ರೀನಿವಾಸ ಅವರ ನಿಧನಕ್ಕೆ ತಿರುಪತಿ ದೇವಸ್ಥಾನ ಟ್ರಸ್ಟ್(TTD) ಸಂತಾಪ ಸೂಚಿಸಿದೆ. ತಿರುಪತಿ ದೇವಸ್ಥಾನದಲ್ಲಿ ಇದುವರಗೆ 140  ಮಂದಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ ಎಂದು TTD ಮುಖ್ಯಸ್ಥ ಸುಬ್ಬಾ ರೆಡ್ಡಿ ಹೇಳಿದ್ದಾರೆ. ಹೀಗಾಗಿ ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಭಂಧಿಸಬೇಕು ಅನ್ನೋ ಕೂಗು ಕೇಳಿ ಬಂದಿದೆ.

click me!