'ನಾನು ನಂದಿನಿ ತಿರುಪತಿಗೆ ಬರ್ತೀನಿ..' ಎಂದ ಕೆಎಂಎಫ್‌, ನೋ ವೇ ಚಾನ್ಸೇ ಇಲ್ಲ ಎಂದ ತಿಮ್ಮಪ್ಪ!

By Sathish Kumar KH  |  First Published Dec 6, 2023, 11:53 AM IST

ಕರ್ನಾಟಕ ಹಾಲು ಒಕ್ಕೂಟದ ನಂದಿನಿ ತುಪ್ಪ ದುಬಾರಿಯಾಗಿದೆ ಎಂದು ಲಡ್ಡು ತಯಾರಿಕೆಗೆ ತೆಗೆದುಕೊಳ್ಳಲ್ಲ ಎಂದು ಟಿಟಿಡಿ ಆಡಳಿತ ಮಂಡಳಿ ತಿರಸ್ಕರಿಸಿದೆ.


ಬೆಂಗಳೂರು (ಡಿ.06): ಕರ್ನಾಟಕ ಸರ್ಕಾರದ ಶ್ರೀಮಂತ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ತುಪ್ಪವನ್ನು ತಿರುಪತಿ ತಿಮ್ಮಪ್ಪನ ಪ್ರಸಾದವಾದ ಲಡ್ಡು ತಯಾರಿಕೆಗೆ ಕಳುಹಿಸಲಾಗುತ್ತಿತ್ತು. ಆದರೆ, ಕಳೆದ ಬಾರಿ ಕೆಎಂಎಫ್‌ನಿಂದಲೇ ತುಪ್ಪ ಸರಬರಾಜು ಮಾಡಲು ಹಿಂದೇಟು ಹಾಕಿತ್ತು. ಈ ಬಾರಿ ನಂದಿನಿ ತುಪ್ಪವನ್ನು ತಿರುಪತಿ ತಿಮ್ಮಪ್ಪ ದೇವಸ್ಥಾನ ಆಡಳಿತ ಮಂಡಳಿಯಿಂದಲೇ ತಿರಸ್ಕಾರ ಮಾಡಲಾಗಿದೆ.

ದೇಶದಲ್ಲಿ ನಂದಿನಿ ತುಪ್ಪಕ್ಕಿರುವ ಮಾರುಕಟ್ಟೆ ಬೆಲೆಗಿಂತ ಅರ್ಧಕ್ಕರ್ಧ ಬೆಲೆಗೆ ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗೆ ತುಪ್ಪವನ್ನು ಕಳಿಸಲು ಸಾಧ್ಯವಿಲ್ಲ ಎಂದು ಕೆಎಂಎಫ್‌ನಿಂದ ತುಪ್ಪ ಸರಬರಾಜು ಮಾಡಿರಲಿಲ್ಲ. ಆದರೆ, ಕಳೆದ ಎರಡು ಬಾರಿಯಿಂದ ಟಿಟಿಡಿಯ ತುಪ್ಪದ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸಿದರೂ ನಂದಿನಿ ತುಪ್ಪದ ದರ ಹೆಚ್ಚಾಗಿದ್ದು, ಖರೀದಿ ಮಾಡಲು ಸಾಧ್ಯವಿಲ್ಲ ಎಂದು ತಿರುಪತಿ ತಿಮ್ಮಪ್ಪ ದೇವಸ್ಥಾನಂ ಆಡಳಿತ ಮಂಡಳಿ ತಿರಸ್ಕರಿಸಿದೆ. ಈ ಮೂಲಕ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಿಂದ ನಂದಿನಿ ತುಪ್ಪದ ಘಮ ಕಾಣೆಯಾಗಿದೆ.

Tap to resize

Latest Videos

ತಿಮ್ಮಪ್ಪನಿಗೆ ತುಪ್ಪ ಕೊಡ್ತೀವೆಂದು ತಿರುಪತಿಗೆ ಪತ್ರ ಬರೆದ ಕೆಎಂಎಫ್‌

ತಿರುಪತಿ ತಿಮ್ಮಪ್ಪನಿಗೆ ಬೇಡವಾಯ್ತಾ ನಂದಿನಿ ತುಪ್ಪ? ಅದೆಷ್ಟೇ ಕಸರತ್ತು ಮಾಡಿದ್ರೂ ನಂದಿನಿಯ ಬಾಯಿಗೆ ಬೀಳ್ತಿಲ್ಲ ತಿರುಪತಿ ಲಡ್ಡು. ಟೆಂಡರ್ ನಲ್ಲಿ ಟಿಟಿಡಿ ಕೇಳ್ತಿರೋ ಕಡಿಮೆ ದರಕ್ಕೆ ತುಪ್ಪ ಸರಬರಾಜು ಮಾಡಲ್ಲ ಎಂದು ಕೆಎಂಎಫ್ ಹೇಳಿತ್ತು. ಆದರೆ, ಈ ಬಾರಿ ಕಳೆದ ಬಾರಿಗಿಂತ ಕಡಿಮೆ ದರಕ್ಕೆ ನಂದಿನಿ ತುಪ್ಪವನ್ನು ಸರಬರಾಜು ಮಾಡುವುದಾಗಿ ಕೆಎಂಎಫ್‌ ಟಿಟಿಡಿ ಟೆಂಡರ್‌ನಲ್ಲಿ ಭಾಗವಹಿಸಿದ್ದರೂ ಅದಕ್ಕಿಂತ ಕಡಿಮೆ ದರದ ತುಪ್ಪವನ್ನು ಟಿಟಿಡಿ ಖರೀದಿ ಮಾಡಲು ಮುಂದಾಗಿದೆ. ಆದ್ದರಿಂದ ಕೆಎಂಎಫ್‌ಗೆ ಮತ್ತೆ ಹಿನ್ನಡೆ ಉಂಟಾಗಿದೆ.

ತಿರುಪತಿ ಮತ್ತು ಕೆಎಂಎಫ್ 50 ವರ್ಷದ ತುಪ್ಪದ ಸರಬರಾಜು ಸಂಬಂಧವನ್ನು ಹೊಂದಿದ್ದವು.ಆದರೆ, ಕಳೆದ ಬಾರಿಗಿಂತ ಕಡಿಮೆ ಬಿಡ್ ಮಾಡಿದ್ರೂ KMFಗೆ ಟಿಟಿಡಿ ತುಪ್ಪದ ಟೆಂಡರ್ ಸಿಗಲಿಲ್ಲ. ಕೆಎಂಎಫ್ ಅಧಿಕಾರಿಗಳು ಈ ಬಾರಿ ಟಿಟಿಡಿ ಟೆಂಡರ್ ಪಡೆಯಲು ಹರಸಾಹಸ ಪಟ್ಟಿದ್ದರು. ಕೆಎಂಎಫ್ ಟೆಂಡರ್ ನ ಎಲ್ಲ ಪ್ರಕ್ರಿಯೆಯಲ್ಲಿ ಪಾಸ್ ಆಗಿದ್ದರೂ, ದರ ವಿಚಾರವಾಗಿ ಅತ್ಯಂತ ಕನಿಷ್ಠ ಬಿಡ್ ಮಾಡಿದ ಕಂಪನಿಗೆ ಟೆಂಡರ್ ಸಿಕ್ಕಿದೆ. ಇತ್ತೀಚಿಗಷ್ಟೇ ಬೆಂಗಳೂರು ಕೆಎಂಎಫ್ ಯೂನಿಟ್ ಗೆ ಭೇಟಿ ನೀಡಿದ್ದ ಟಿಟಿಡಿ ತುಪ್ಪ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಕರ್ನಾಟಕದ ಕೆಎಂಎಫ್‌ ತುಪ್ಪಕ್ಕೆ ಪ್ರತಿ ಕೆ.ಜಿಗೆ 550 ರೂ. ದರ ನಿಗದಿಪಡಿಸಿ ಟಿಟಿಡಿ ಟೆಂಡರ್‌ನಲ್ಲಿ ತುಪ್ಪಕ್ಕೆ ಬಿಡ್ ಮಾಡಿತ್ತು. ಆದ್ರೆ ಬೇರೆ ಕಂಪನಿ ಇದಕ್ಕಿಂತ ಕಡಿಮೆ ದರ ನಿಗದಿ ಮಾಡಿ ಬಿಡ್‌ ಮಾಡಿತ್ತು.

ಹೋಳಿಗೆ ಮಾರಿ ಕೋಟ್ಯಧೀಶನಾದ ಕನ್ನಡಿಗ;ಹೋಟೆಲ್ ವೇಟರ್ ಆಗಿದ್ದಈತನೀಗ 18 ಕೋಟಿ ವಹಿವಾಟು ನಡೆಸೋ ಸಂಸ್ಥೆ ಒಡೆಯ

ಟಿಟಿಡಿ ಮಾಹಿತಿಯ ಪ್ರಕಾರ ಪ್ರತಿ ಕೆ.ಜಿ. ತುಪ್ಪಕ್ಕೆ ಕೇವಲ 370 ರೂ.ನಂತೆ ತುಪ್ಪ ಸರಬರಾಜು ಮಾಡುವುದಾಗಿ ಖಾಸಗಿ ಕಂಪನಿಯೊಂದು ಟೆಂಡರ್‌ಗೆ ಬಿಡ್‌ ಮಾಡಿತ್ತು. ಆದರೆ, ಇಷ್ಟು ಕಡಿಮೆ ಬಿಡ್ ಮಾಡಿದ್ರೆ ಕೆಎಂಎಫ್‌ಗೆ ಆರ್ಥಿಕ ನಷ್ಟ ಆಗುವ ಭೀತಿಯಿದೆ. ಜೊತೆಗೆ, ರಾಜ್ಯ ಸೇರಿದಂತೆ ದೇಶದ ವಿವಿಧೆಡೆ ನಂದಿನಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗಿರುವಾಗ, ಸಾಧ್ಯವಾದಷ್ಟು ಕಡಿಮೆ ಬೆಲೆಗೆ ನಾವು ತಿರುಪತಿಗೆ ಕೆಎಂಎಫ್ ತುಪ್ಪ ತಲುಪಿಸಲು ಪ್ರಯತ್ನಿಸಿದ್ದೇವೆ. ಆದರೂ ಟೆಂಡರ್ ನಮಗೆ ಸಿಕ್ಕಿಲ್ಲ ಎಂದು ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹೇಳಿದ್ದಾರೆ.

click me!