
ತಿರುಮಲ: ವೆಂಕಟೇಶ್ವರ ದೇಗುಲಕ್ಕೆ ಬರುವ ಭಕ್ತರಿಗೆ ಕಾಡುತ್ತಿದ್ದ ಚಪ್ಪಲಿ ಸಮಸ್ಯೆಗೆ ದೇಗುಲ ಆಡಳಿತ (ಟಿಟಿಡಿ) ಪರಿಹಾರವೊಂದನ್ನು ಹುಡುಕಿದೆ. ಚಪ್ಪಲಿಗಳನ್ನು ಬಿಟ್ಟು ದರ್ಶನ ಮುಗಿಸಿ ಬಂದಾಗ, ಚಪ್ಪಲಿ ಎಲ್ಲಿದೆ ಎಂಬ ಗೊಂದಲಕ್ಕೆ ತೆರೆ ಎಳೆಯಲು ಕ್ಯುಆರ್‌ಕೋಡ್ ವ್ಯವಸ್ಥೆಯನ್ನು ಟಿಟಿಡಿ ಜಾರಿಗೆ ತಂದಿದೆ.
ಈ ವ್ಯವಸ್ಥೆಗೆ ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಚಾಲನೆ ನೀಡಿದ್ದಾರೆ.
ಭಕ್ತರು ಚಪ್ಪಲಿ ಸ್ಟ್ಯಾಂಡ್‌ನಲ್ಲಿ ಪಾದರಕ್ಷೆ ಬಿಟ್ಟ ಬಳಿಕ ಅವರಿಗೆ ಕ್ಯುಆರ್‌ಕೋಡ್ ಚೀಟಿ ವಿತರಿಸಲಾಗುತ್ತದೆ. ಅದರಲ್ಲಿ ಎಷ್ಟು ಜೊತೆ ಪಾದರಕ್ಷೆ, ಸ್ಟ್ಯಾಂಡ್, ರ್‍ಯಾಕ್, ಬಾಕ್ಸ್‌ಗಳ ಕುರಿತು ಮಾಹಿತಿ ಇರಲಿದೆ. ದರ್ಶನ ಮುಗಿಸಿ ಬಂದಾಗ ಚಪ್ಪಲಿ ಸ್ಟ್ಯಾಂಡ್‌ನಲ್ಲಿ ಕ್ಯುಆರ್‌ಕೋಡ್ ಸ್ಕ್ಯಾನ್ ಮಾಡಿದಾಗ, ಚಪ್ಪಲಿಯ ನಿರ್ದಿಷ್ಟ ಸ್ಥಳ ಗೊತ್ತಾಗಲಿದೆ. ಇದರಿಂದ ಜನರಲ್ಲಿ ನೂಕುನುಗ್ಗಲು, ಗೊಂದಲ ನಿವಾರಣೆಯಾಗಿದೆ.
ಈವರೆಗೆ ಶೇ.80ರಷ್ಟು ಜನರ ಚಪ್ಪಲಿ ಮಾತ್ರ ಸಿಗುತ್ತಿದ್ದವು. ಕ್ಯುಆರ್ ಕೋಡ್‌ನಿಂದಾಗಿ ಶೇ.99ರಷ್ಟು ಜನರ ಚಪ್ಪಲಿ ಸಿಗುತ್ತಿವೆ ಎಂದು ಟಿಟಿಡಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ