ನನಗೆ ರಾಮಮಂದಿರ ಟ್ರಸ್ಟಿ ಆಗಬೇಕು ಎಂಬ ಇಚ್ಛೆ ಇಲ್ಲ. ನನಗೆ ಅದು ಬೇಡ. ಆದರೆ ಮಂದಿರ ಸೂಕ್ತ ರೀತಿಯಲ್ಲಿ ನಿರ್ಮಾಣ ಆಗಬೇಕೆಂಬುದಷ್ಟೇ ನಮ್ಮ ಇಚ್ಛೆ. ಭೂಮಿ ಪೂಜೆಯನ್ನು ಸೂಕ್ತ ಸಮಯದಲ್ಲಿ ಮಾಡಬೇಕು. ಆದರೆ ಭೂಮಿಪೂಜೆಯನ್ನೇ ಈಗ ‘ಅಶುಭ ಗಳಿಗೆ’ಯಲ್ಲಿ ಮಾಡುತ್ತಿದ್ದಾರೆ ಎಂದು ಬದರಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಆರೋಪಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜು.24): ಅಯೋಧ್ಯೆ ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಆಗಸ್ಟ್ 5ರ ಮುಹೂರ್ತವನ್ನು ನಿಗದಿಪಡಿಸಿರುವುದನ್ನು ಬದರಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಆಕ್ಷೇಪಿಸಿದ್ದಾರೆ. ಇದೊಂದು ‘ಅಶುಭ ಘಳಿಗೆ’ ಎಂದು ಅವರು ಟೀಕಿಸಿದ್ದಾರೆ.
ಬುಧವಾರ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ನನಗೆ ರಾಮಮಂದಿರ ಟ್ರಸ್ಟಿ ಆಗಬೇಕು ಎಂಬ ಇಚ್ಛೆ ಇಲ್ಲ. ನನಗೆ ಅದು ಬೇಡ. ಆದರೆ ಮಂದಿರ ಸೂಕ್ತ ರೀತಿಯಲ್ಲಿ ನಿರ್ಮಾಣ ಆಗಬೇಕೆಂಬುದಷ್ಟೇ ನಮ್ಮ ಇಚ್ಛೆ. ಭೂಮಿ ಪೂಜೆಯನ್ನು ಸೂಕ್ತ ಸಮಯದಲ್ಲಿ ಮಾಡಬೇಕು. ಆದರೆ ಭೂಮಿಪೂಜೆಯನ್ನೇ ಈಗ ‘ಅಶುಭ ಗಳಿಗೆ’ಯಲ್ಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಮೋದಿಯಿಂದಲೇ ಆ.5ಕ್ಕೆ ಮಂದಿರಕ್ಕೆ ಭೂಮಿಪೂಜೆ ಶುಭಾರಂಭ!
ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಪೂಜೆ ನೆರವೇರಿಸಲು ಈಗ ಏರ್ಪಾಡುಗಳು ನಡೆಯುತ್ತಿವೆ. ಮೋದಿ ರಾಮ ಮಂದಿರಕ್ಕೆ ಗುದ್ದಲಿಪೂಜೆ ಮಾಡುವುದಕ್ಕೆ ವಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಪ್ರಧಾನಿಯೊಬ್ಬರು ಒಂದು ಧರ್ಮದ ದೇವಸ್ಥಾನಕ್ಕೆ ಅಡಿಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.