ಉಗ್ರ ದಾಳಿಯ ಆತಂಕ : ಅಯ್ಯಪ್ಪನ ಸನ್ನಿಧಾನಕ್ಕೆ ಟೈಟ್ ಸೆಕ್ಯೂರಿಟಿ

By Web DeskFirst Published Nov 12, 2019, 12:34 PM IST
Highlights

ಇನ್ನೇನು ಪವಿತ್ರ ಕ್ಷೇತ್ರ ಶಬರಿಮಲೆಯಲ್ಲಿ ವಾರ್ಷಿಕ ದರ್ಶನೋತ್ಸವ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಉಗ್ರರ ದಾಳಿಗಳಾಗಬಹುದಾದ ಆತಂಕ ಇದ್ದು, ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 

ಕೊಚ್ಚಿ [ನ.12]: ಶಬರಿಮಲೆಯಲ್ಲಿ ವಾರ್ಷಿಕ ದರ್ಶನೋತ್ಸವ ಇನ್ನೇನು ಆರಂಭವಾಗಲಿದ್ದು, ಈ ವೇಳೆ ಭದ್ರತೆಯನ್ನು ಇನ್ನಷ್ಟು ಟೈಟ್ ಮಾಡಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಇತ್ತೀಷೆಗಷ್ಟೇ ಅಟ್ಟಪಾಡಿಯಲ್ಲಿ ನಡೆದ ಮಾವೋವಾದಿಗಳ ಎನ್ ಕೌಂಟರ್ , ಅಯೋಧ್ಯೆ ತೀರ್ಪು, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಘಟನೆಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಭದ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. 

ಕೇರಳ ಡಿಜಿ & ಐಜಿಪಿ ಲೋಕನಾಥ್ ಬೆಹೆರಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಶಬರಿ ಮಲೆಯಲ್ಲಿ ವಾರ್ಷಿಕ ದರ್ಶನವು ಸಂಪೂರ್ಣ ಮುಕ್ತಾಯವಾಗುವವರೆಗೂ ಭದ್ರತೆ ಬಿಗಿಗೊಳಿಸಬೇಕೆಂದು ಆದೇಶ ನೀಡಿದ್ದಾರೆ.  ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆಗೂ ಸೂಚನೆ ನೀಡಿದ್ದಾರೆ. ಶಬರಿಮಲೆಯ ಭಕ್ತರ ದರ್ಶನೋತ್ಸವ ಸಂದರ್ಭದಲ್ಲಿ ಗುಪ್ತಚರ ಪಡೆಯನ್ನು ನಿಯೋಜಿಸುವ ಬಗ್ಗೆಯು ಸಭೆಯಲ್ಲಿ ನಿರ್ಧರಿಸಲಾಗಿದೆ.  

ವಾರ್ಷಿಕವಾಗಿ ಶಬರಿಮಲೆ ಅಯ್ಯಪ್ಪ ದೇಗುಲ ಬಾಗಿಲು ತೆರೆಯುವ ವೇಳೆ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಲಿದ್ದು,  ಉಗ್ರರ ಕಣ್ಣು ಈ ಸ್ಥಳದ ಮೇಲಿರುತ್ತದೆ. ಆದ್ದರಿಂದ ಸಣ್ಣ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ಲೋಕನಾಥ್ ಸೂಚನೆ ನೀಡಿದ್ದಾರೆ. 

ಶಬರಿಮಲೆ ಅಯ್ಯಪ್ಪ ಸನ್ನಿಧಿ ಪ್ರಸಾದಕ್ಕಿನ್ನು ಪೇಟೆಂಟ್‌!...

ಈಗಾಗಲೇ ಗುಪ್ತಚರ ಇಲಾಖೆಯೊಂದಿಗೆ ರಾಜ್ಯ ಪೊಲೀಸ್ ಇಲಾಖೆಯು ನಿರಂತರ ಸಂಪರ್ಕದಲ್ಲಿದ್ದು, ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗುತ್ತಿದೆ. ಇಲ್ಲಿನ ಭದ್ರತಾ ವ್ಯವಸ್ಥೆಯ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ. 

ಹೈದರಾಬಾದ್, ಶಬರಿಮಲೆ, ಲಕ್ನೋದಲ್ಲಿ ಎಲೆಕ್ಟ್ರಿಕ್ ಬಸ್ - ಬೆಂಗಳೂರಲ್ಲಿ ಯಾವಾಗ?...
 
ಶಬರಿಮಲೆಯಲ್ಲಿರುವ ಕೆಲಸಗಾರರು, ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೇ ಫೇಸಿಯಲ್ ರೆಕಗ್ನೈಸೇಶನ್ ವ್ಯವಸ್ಥೆ ಹಾಗೂ ರೋಬಸ್ಟ್ ಕ್ಯಾಮರಾ ಅಳವಡಿಸಲಾಗುತ್ತಿದೆ. ಪ್ರತಿಯೊಂದು ಕಾರ್ಯದ ಮೇಲೆಯೂ ಕೂಡ ಪೊಲೀಸರ ಹದ್ದಿನ ಕಣ್ಣಿಡಲಾಗುತ್ತದೆ.

click me!