
ಕೊಚ್ಚಿ(ಏ.12): ಮನೆ, ಕಚೇರಿ ಮುಂತಾದ ಮುಚ್ಚಿದ ವಾತಾವರಣದಲ್ಲಿ ಗಾಳಿಯಲ್ಲಿರುವ ಕೊರೋನಾ ವೈರಸ್‌ಗಳನ್ನು ನಾಶಪಡಿಸುವ ಯಂತ್ರವೊಂದನ್ನು ಕೇರಳದ ಸ್ಟಾರ್ಟಪ್ ಕಂಪನಿಯೊಂದು ತಯಾರಿಸಿದೆ. ‘ವೂಲ್‌್ಫ ಮಾಸ್ಕ್’ ಹೆಸರಿನ ಯಂತ್ರ ಇದಾಗಿದ್ದು, ಕೊರೋನಾ ವೈರಸ್‌ಗಳಿಂದ ಶೇ.99ರಷ್ಟು ರಕ್ಷಣೆ ನೀಡುತ್ತದೆ ಎಂದು ಹೇಳಲಾಗಿದೆ.
ತ್ರಿವೇಂದ್ರಂನಲ್ಲಿರುವ ಆಲಬೌಟ್ ಇನ್ನೋವೇಷನ್ಸ್ ಪ್ರೈ.ಲಿ. ಎಂಬ ಕಂಪನಿ ಈ ಯಂತ್ರ ತಯಾರಿಸಿದೆ. ಇದು ಐಸಿಎಂಆರ್‌ನಿಂದ ಮಾನ್ಯತೆ ಪಡೆದ ಪ್ರಯೋಗಾಲಯವಾಗಿದ್ದು, ತನ್ನ ಯಂತ್ರವನ್ನು ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ ಸಂಸ್ಥೆಯಲ್ಲಿ ಪ್ರಯೋಗಕ್ಕೊಳಪಡಿಸಿ ದಕ್ಷತೆಯ ಪ್ರಮಾಣ ಪತ್ರ ಪಡೆದಿದೆ. ಈ ಯಂತ್ರವನ್ನು ಚಾಲು ಮಾಡಿದ ನಂತರ 15 ನಿಮಿಷಗಳಲ್ಲಿ ಸುತ್ತಲಿನ 1000 ಚದರಡಿ ಪ್ರದೇಶದಲ್ಲಿ ವಾತಾವರಣದಲ್ಲಿ ಹರಡಿರಬಹುದಾದ ಕೊರೋನಾ ವೈರಸ್‌ಗಳನ್ನು ಕೊಲ್ಲುತ್ತದೆ. ನೆಗೆಟಿವ್ ಅಯಾನ್‌ಗಳನ್ನು ಬಳಸಿ ಇದು ಕೆಲಸ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
360 ಡಿಗ್ರಿ ರಕ್ಷಣೆ ನೀಡುವ ಈ ಯಂತ್ರವನ್ನು ಮನೆ, ಕಚೇರಿ, ಬ್ಯಾಂಕ್, ಶಾಲೆ, ಆಸ್ಪತ್ರೆ, ಪ್ರಯೋಗಾಲಯ, ಸಭಾಂಗಣ, ಹೋಟೆಲ್ ಮುಂತಾದ ಕಡೆ ಇಡೀ ದಿನ ಚಾಲು ಇರಿಸಬಹುದು. ಯಾವುದೇ ರಿಪೇರಿ, ಬಿಡಿಭಾಗ ಬದಲಾವಣೆಯಿಲ್ಲದೆ ಸತತ 60,000 ತಾಸು, ಅಂದರೆ ಒಂಭತ್ತು ವರ್ಷಗಳ ಕಾಲ ಇದು ಕೆಲಸ ಮಾಡುತ್ತದೆ. ಜರ್ಮನ್ ತಂತ್ರಜ್ಞಾನದಿಂದ ಯಂತ್ರ ತಯಾರಿಸಲಾಗಿದ್ದು, ಜರ್ಮನಿ, ಜಪಾನ್ ಮುಂತಾದ ಕಡೆ ಇಂತಹ ಯಂತ್ರಗಳನ್ನು ವೈರಸ್ ನಾಶಕ್ಕೆ ಸರ್ವೇಸಾಮಾನ್ಯವಾಗಿ ಬಳಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ