* ಉತ್ತರ ಪ್ರದೇಶದಲ್ಲೊಂದು ಮಾದರಿ ಮದುವೆ, ಹದಿನೇಳು ನಿಮಿಷದಲ್ಲಿ ಸಂಪನ್ನ
* ವ್ಯರ್ಥ ಖರ್ಚು, ಆಡಂಬರ ಬೇಡ ಎಂಬ ಸಂದೇಶ ನೀಡಿದ ವರ
* ರಾಮಾಯಣ ಪುಸ್ತಕವನ್ನು ವರದಕ್ಷಿಣೆಯಾಗಿ ಪಡೆದುಕೊಂಡ
* ಸೋಶಿಯಲ್ ಮೀಡಿಯಾದಲ್ಲಿ ಮದುವೆಗೆ ಜೈಕಾರ
ಲಕ್ನೋ(ಮೇ 17) ಮದುವೆ ಹೆಸರಿನಲ್ಲಿ ವ್ಯರ್ಥ ಖರ್ಚು ಮಾಡಬಾರದು ಎಂಬುದನ್ನು ಮನಗಂಡ ಯುವಕನೊಬ್ಬ ಅತ್ಯಂತ ಸರಳ ಮದುವೆ ಆಗಿದ್ದಾನೆ. ಹದಿನೇಳು ನಿಮಿಷದಲ್ಲಿ ಮದುವೆ ಆಗಿ ಮುಗಿಸಿದ್ದಾನೆ.
ಉತ್ತರ ಪ್ರದೇಶದ ಶಹಜನಾಪುರದಲ್ಲಿ ಇಂಥದ್ದೊಂದು ವಿಶೇಷ ಮದುವೆ ನಡೆದಿದೆ. ಪುಷ್ಪೇಂದ್ರ ದುಬೆ ಹೆಸರಿನ ವರ ಪ್ರೀತಿ ತಿವಾರಿ ಹೆಸರಿನ ಯುವತಿಯನ್ನು ಮದುವೆಯಾಗಿದ್ದಾರೆ. ಮದುವೆಗೆ ದಿಬ್ಬಣವಾಗಲಿ, ಅಲಂಕಾರವಾಗಲೀ ಇರಲೇ ಇಲ್ಲ. ಕಾಳಿ ದೇವಸ್ಥಾನವನ್ನು ಏಳು ಸುತ್ತು ಸುತ್ತಿ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದಾರೆ.
undefined
ಕೋಲಾರ; ಅಕ್ಕ-ತಂಗಿ ಇಬ್ಬರನ್ನೂ ಮದುವೆಯಾಗಿದ್ದವ ಪೊಲೀಸರ ಅತಿಥಿ
ವರದಕ್ಷಿಣೆಯನ್ನು ವಿಶೇಷವಾಗಿ ತೆಗೆದುಕೊಳ್ಳಲಾಗಿದೆ! ವರದಕ್ಷಿಣೆ ಕೊಡಲೇ ಬೇಕು ಎಂದಾದರೆ ರಾಮಾಯಣ ಪುಸ್ತಕ ಕೊಡಿ ಎಂದು ಕೇಳಿ ಪಡೆದುಕೊಂಡಿದ್ದಾರೆ. ನನ್ನ ಹಾಗೆ ಯುವಕರು ಸರಳವಾಗಿ ಮದುವೆಯಾಗಬೇಕು . ವ್ಯರ್ಥ ಖರ್ಚು ಮತ್ತು ಆಡಂಬರವನ್ನು ತೊರೆಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಹದಿನೇಳು ನಿಮಿಷದಲ್ಲಿ ಮುಗಿದ ಮದುವೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಉತ್ತಮ ಅಭಿಪ್ರಾಯ ಕೊಟ್ಟಿದ್ದಾರೆ. ಇದೊಂದು ಮಾದರಿ ಮದುವೆ ಎಂದು ಕೊಂಡಾಡಿದ್ದಾರೆ.