ತಮಿಳುನಾಡಿನಲ್ಲಿ ಕೊರೋನಾ ದೇವಿ ದೇವಸ್ಥಾನ ನಿರ್ಮಾಣ!

By Suvarna NewsFirst Published May 20, 2021, 12:06 PM IST
Highlights

* ತಮಿಳುನಾಡಿನ ಕೊಯ್ಮತ್ತೂರಿನಲ್ಲಿ ಕೊರೋನಾ ವೈರಸ್‌ನಿಂದ ಜನರ ರಕ್ಷಣೆಗೆ ಕೊರೋನಾ ದೇವಿ

* ಕೊರೋನಾ ದೇವಿ ದೇವಾಲಯ ಸ್ಥಾಪನೆ

* ಕಾಮಾಚಿಪುರಿ ಅಧೀನಂ ಪೀಠ ಕೊರೋನಾ ದೇವಿಗೆ ಮೀಸಲಾದ ದೇವಾಲಯ

ಕೊಯ್ಮತ್ತೂರು(ಮೇ.20): ತಮಿಳುನಾಡಿನ ಕೊಯ್ಮತ್ತೂರಿನಲ್ಲಿ ಕೊರೋನಾ ವೈರಸ್‌ನಿಂದ ಜನರ ರಕ್ಷಣೆಗೆ ಕೊರೋನಾ ದೇವಿ ದೇವಾಲಯವೊಂದನ್ನು ಸ್ಥಾಪಿಸಲಾಗಿದೆ. ಕಾಮಾಚಿಪುರಿ ಅಧೀನಂ ಪೀಠ ಕೊರೋನಾ ದೇವಿಗೆ ಮೀಸಲಾದ ದೇವಾಲಯವನ್ನು ನಿರ್ಮಿಸಿದ್ದು, ಅರ್ಚಕರನ್ನೂ ನೇಮಿಸಿದೆ.

ಈ ದೇವಾಲಯದಲ್ಲಿ 48 ದಿನಗಳ ಕಾಲ ವಿಶೇಷ ಪ್ರಾರ್ಥನೆ ಹಾಗೂ ಪೂಜೆಗಳು ನಡೆಯಲಿವೆ. ಜೊತೆ ಮಹಾ ಯಾಗವನ್ನು ಆಯೋಜಿಸಲಾಗುವುದು ಎಂದು ಅಧೀನಂನ ಮುಖ್ಯಸ್ಥ ಶಿವಲಿಂಗೇಶ್ವರ್‌ ಹೇಳಿದ್ದಾರೆ.

ತಮಿಳುನಾಡಿನಲ್ಲಿ ರೋಗ ಹಾಗೂ ಸಾಂಕ್ರಾಮಿಕದ ಸಂದರ್ಭದಲ್ಲಿ ದೇವಿಯ ಆರಾದನೆಗೆ ದೇವಸ್ಥಾನಗಳನ್ನು ನಿರ್ಮಿಸುವುದು ಹೊಸದೇನಲ್ಲ.

ಈ ಮುನ್ನ ಪ್ಲೇಗ್‌ ಮಹಾಮಾರಿ ಕಾಣಿಸಿಕೊಂಡ ಸಂದರ್ಭದಲ್ಲಿ ಕೊಯ್ಮತ್ತೂರಿನಲ್ಲಿ ಪ್ಲೇಗ್‌ ಮಾರಿಯಮ್ಮ ದೇವಾಲಯವನ್ನು ನಿರ್ಮಿಸಲಾಗಿತ್ತು. ಸಾಂಕ್ರಾಮಿಕದ ಸಂದರ್ಭದಲ್ಲಿ ದೇವಿ ನಮ್ಮನ್ನು ರಕ್ಷಿಸುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!