ತಂಪಾದ ಊಟಿಯಲ್ಲೂ ಬೆವರಿಳಿಸಿದ ಈ ಬಾರಿಯ ಬೇಸಗೆ: 1986ರ ನಂತರ ಗರಿಷ್ಠ ತಾಪಮಾನ

By Kannadaprabha NewsFirst Published May 1, 2024, 11:38 AM IST
Highlights

ಬಹುತೇಕ ಇಡೀ ದೇಶವನ್ನು ಆವರಿಸಿರುವ ಉಷ್ಣಹವೆ, ಇದೀಗ ಪ್ರವಾಸಿಗರ ಸ್ವರ್ಗ ಎನ್ನಿಸಿಕೊಂಡಿರುವ , ತಂಪು ಪ್ರದೇಶವಾದ ಶಿಖರಗಳ ರಾಣಿ ಎನಿಸಿರುವ ಉದಕಮಂಡಲ (ಊಟಿ)ವನ್ನೂ ಆವರಿಸಿಕೊಂಡಿದೆ. ಸೋಮವಾರ ಊಟಿಯಲ್ಲಿ 29 ಡಿಗ್ರಿ.ಸೆಂಟಿಗ್ರೇಡ್‌ನಷ್ಟು ಉಷ್ಣಾಂಶ ದಾಖಲಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಎನ್ನಿಸಿಕೊಂಡಿದೆ.

ಉದಕಮಂಡಲ: ಬಹುತೇಕ ಇಡೀ ದೇಶವನ್ನು ಆವರಿಸಿರುವ ಉಷ್ಣಹವೆ, ಇದೀಗ ಪ್ರವಾಸಿಗರ ಸ್ವರ್ಗ ಎನ್ನಿಸಿಕೊಂಡಿರುವ , ತಂಪು ಪ್ರದೇಶವಾದ ಶಿಖರಗಳ ರಾಣಿ ಎನಿಸಿರುವ ಉದಕಮಂಡಲ (ಊಟಿ)ವನ್ನೂ ಆವರಿಸಿಕೊಂಡಿದೆ. ಸೋಮವಾರ ಊಟಿಯಲ್ಲಿ 29 ಡಿಗ್ರಿ.ಸೆಂಟಿಗ್ರೇಡ್‌ನಷ್ಟು ಉಷ್ಣಾಂಶ ದಾಖಲಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಎನ್ನಿಸಿಕೊಂಡಿದೆ.

ಸೋಮವಾರ ದಾಖಲಾದ ಉಷ್ಣಾಂಶವು ಈ ಅವಧಿಯಲ್ಲಿ ದಾಖಲಾಗಿರುವ ಸಾಮಾನ್ಯ ಸರಾಸರಿ ತಾಪಮಾನಕ್ಕಿಂತ 5.4 ಡಿ.ಸೆ.ನಷ್ಟು ಹೆಚ್ಚಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 1986ರಲ್ಲಿ ಏ.29 ರಂದು ದಾಖಲಾಗಿದ್ದ 28.5 ಡಿಗ್ರಿ ಸೆಲ್ಸಿಯಸ್‌ ಇದುವರೆಗಿನ ಗರಿಷ್ಠ ತಾಪಮಾನವಾಗಿತ್ತು. ತಾಪಮಾನ ಹೆಚ್ಚಳದ ಹಿನ್ನೆಲೆ ತಮಿಳುನಾಡಿನ ಉತ್ತರ ಒಳನಾಡು ಪ್ರದೇಶಗಳಲ್ಲಿ ಹವಾಮಾನ ಇಲಾಖೆ ಉಷ್ಣ ಅಲೆಗಳ ಎಚ್ಚರಿಕೆ ನೀಡಿದ್ದು ಈ ಪ್ರದೇಶಗಳಲ್ಲಿ ಮೇ 3ರ ವರೆಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ಪಶ್ಚಿಮ ಬಂಗಾಳದ ಕಾಲೈಕುಂಡದಲ್ಲಿ 47.2 ಡಿಗ್ರಿ

ನವದೆಹಲಿ: ಬಿಸಿಲಿನ ಬೇಗೆಯಿಂದ ಸಮಸ್ತ ಭಾರತ ತತ್ತರಿಸುತ್ತಿದ್ದು, ಉಷ್ಣಹವೆಯು ಹಲವು ಪ್ರದೇಶಗಳಲ್ಲಿ ತಾಪಮಾನಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಸಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳದ ಕಾಲೈಕುಂಡದಲ್ಲಿ 47.2 ಡಿಗ್ರಿ, ಜಾರ್ಖಂಡ್‌ ಸಿಂಗ್‌ಭಮ್ ಜಿಲ್ಲೆಯಲ್ಲಿ ಗರಿಷ್ಠ 47.1 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ.

ಊಟಿ, ಕೊಡೈಕೆನಾಲ್‌ ಪ್ರವೇಶಕ್ಕೆ ಇ-ಪಾಸ್‌ ಕಡ್ಡಾಯ

ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಕೇರಳದ ಹಲವೆಡೆ ಮುಂದಿನ ಕೆಲವು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿದೆ.  ಬುಧವಾರ ಜಾರ್ಖಂಡ್‌ನ ಡುಮ್ಮಾದಲ್ಲಿ ಬಿಸಿಲಿನ ತಾಪ ತಡೆಯಲಾಗದೇ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ.  ಈ ಮಧ್ಯೆ ದೆಹಲಿಯಲ್ಲಿ ತಾಪಮಾನ ತುಸು ಕಡಿಮೆಯಾಗಿದ್ದು, 36.5 ಡಿಗ್ರಿಗೆ ಇಳಿದಿದೆ. 

ಪಾಲಕ್ಕಾಡ್‌ನಲ್ಲಿ ರಜೆ ಮುಂದುವರಿಕೆ: ಈ ನಡುವೆ ಕೇರಳದ ಪಾಲಕ್ಕಾಡ್‌ನಲ್ಲಿ ಮೇ.4ರವರೆಗೆ 41 ಡಿಗ್ರಿ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಮುಂದುವರಿಸಿದ್ದು ಕಾರ್ಯಕ್ರಮಗಳನ್ನು ಸಂಜೆ ಸಮಯದಲ್ಲಿ ಆಯೋಜಿಸುವಂತೆ ಕರೆ ನೀಡಿದೆ.

ಹೆಲೋ ಬೆಂಗಳೂರು… ಈ ವೀಕೆಂಡ್‌ಗೆ ಟ್ರಾವೆಲ್ ಮಾಡೋ ಪ್ಲ್ಯಾನ್ ಇದ್ರೆ… ಈ ತಾಣಗಳು ಬೆಸ್ಟ್

click me!