
ಚೆನ್ನೈ[ನ.20]: ನೀವು ಚೆನ್ನೈ ರೈಲು ನಿಲ್ದಾಣಕ್ಕೆ ಬಂದು ನಿಯಮಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ ನಾಯಿಯೊಂದು ನಿಮಗೆ ನಿಯಮಗಳ ಬಗ್ಗೆ ‘ಬೊಗಳಿ’ ಪಾಠ ಮಾಡುತ್ತದೆ.
ಇಲ್ಲಿನ ಪಾಕ್ ಟೌನ್ ರೈಲ್ವೆ ನಿಲ್ದಾಣದಲ್ಲಿ ಮಾಲೀಕರಿಂದ ದೂರವಾದ ನಾಯಿಯೊಂದು ದಿನನಿತ್ಯ ನಿಲ್ದಾಣಕ್ಕೆ ಬಂದು ಪೊಲೀಸ್ ಗಾರ್ಡ್‌ನಂತೆ ಕಾವಲು ಕಾಯುತ್ತಿದೆ. ನಿಯಮ ಬಾಹಿರವಾಗಿ ರೈಲು ಕಂಬಿಗಳನ್ನು ದಾಟುವಾಗ, ರೈಲಿನ ಬಾಗಿಲಲ್ಲಿ ನಿಂತರೆ. ಚಲಿಸುವ ರೈಲು ಹತ್ತಿದರೆ ಅದು ಬೊಗಳಲು ಶುರು ಮಾಡುತ್ತದೆ.
ಲಭ್ಯವಾದ ಮಾಹಿತಿ ಅನ್ವಯ ಈ ನಾಯಿ ಮಾಲೀಕ ಕಳೆದ ಎರಡು ವರ್ಷಗಳ ಹಿಂದೆ ಇದನ್ನು ಪಾರ್ಕ್ ಟೌನ್‌ನಲ್ಲಿ ಬಿಟ್ಟು ಹೋಗಿದ್ದರು. ಇದಾದ ಬಳಿಕ ಈ ನಾಯಿ ಇಲ್ಲಿ ಜನರಿಗೆ ಎಚ್ಚರಿಕೆ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದೆ.
ಇಲ್ಲಿನ ಭದ್ರತಾ ಸಿಬ್ಬಂದಿ ಜತೆ ಈ ನಾಯಿಯೂ ಗಸ್ತು ತಿರುಗುತ್ತದಂತೆ. ಇದು ಸಾರ್ವಜನಿಕರಿಗೆ ತೊಂದರೆ ನೀಡುವುದಿಲ್ಲ ಎಂಬುದು ಪ್ರಯಾಣಿಕರ ಮೆಚ್ಚುಗೆ. ಈ ನಾಯಿಯ ಉಚಿತ ಸೇವೆಯಿಂದ ಭದ್ರತಾ ಸಿಬ್ಬಂದಿಗೆ ಕೆಲಸ ಕಡಿಮೆ ಇದೆ ಎನ್ನಬಹುದು.
ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಶ್ವಾನ
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸ್ಥಳೀಯ ವ್ಯಕ್ತಿಯೊಬ್ಬರು 'ಚಲಿಸುವ ರೈಲಿನಲ್ಲಿ ಓಡಿ ಬಂದು ಹತ್ತಲು ಹಾಗೂ ಇಳಿಯಲು ಯತ್ನಿಸುವವರಿಗೆ ಈ ನಾಯಿ ಬೊಗಳುತ್ತದೆ. ಈ ನಾಯಿಗೆ ಜನರಿಗೆ ಯಾವುದು ಒಳ್ಳೆಯದು ಹಾಗೂ ಕೆಟ್ಟದೆಂದು ತಿಳಿದಿದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ