ಹಿಂದೂ ಧರ್ಮವಿಲ್ಲ, ಎಲ್ಲ ಸಮಸ್ಯೆಗಳಿಗೆ ಬ್ರಾಹ್ಮಣವಾದ ಕಾರಣ: ಎಸ್‌ಪಿ ಮುಖಂಡ

Published : Aug 29, 2023, 08:46 AM ISTUpdated : Aug 29, 2023, 08:57 AM IST
ಹಿಂದೂ ಧರ್ಮವಿಲ್ಲ, ಎಲ್ಲ ಸಮಸ್ಯೆಗಳಿಗೆ ಬ್ರಾಹ್ಮಣವಾದ ಕಾರಣ: ಎಸ್‌ಪಿ ಮುಖಂಡ

ಸಾರಾಂಶ

ಇತ್ತೀಚೆಗೆ ರಾಮಚರಿತ ಮಾನಸ ನಿಷೇಧಕ್ಕೆ ಆಗ್ರಹಿಸಿದ್ದ ಎಸ್‌ಪಿ ಮುಖಂಡ ಸ್ವಾಮಿ ಪ್ರಸಾದ್‌ ಮೌರ‍್ಯ, ಈಗ ‘ಹಿಂದೂ ಧರ್ಮ ಎಂಬುದೇ ಇಲ್ಲ. ಇಂದಿನ ಎಲ್ಲ ಸಮಸ್ಯೆಗಳಿಗೂ ಬ್ರಾಹ್ಮಣವಾದ ಕಾರಣ’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. 

ಲಖನೌ: ಇತ್ತೀಚೆಗೆ ರಾಮಚರಿತ ಮಾನಸ ನಿಷೇಧಕ್ಕೆ ಆಗ್ರಹಿಸಿದ್ದ ಎಸ್‌ಪಿ ಮುಖಂಡ ಸ್ವಾಮಿ ಪ್ರಸಾದ್‌ ಮೌರ್ಯ, ಈಗ ‘ಹಿಂದೂ ಧರ್ಮ ಎಂಬುದೇ ಇಲ್ಲ. ಇಂದಿನ ಎಲ್ಲ ಸಮಸ್ಯೆಗಳಿಗೂ ಬ್ರಾಹ್ಮಣವಾದ ಕಾರಣ’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.  ಸಭೆಯೊಂದರಲ್ಲಿ ಮಾತನಾಡಿದ ಅವರು, 'ಹಿಂದೂ ಧರ್ಮ ಎಂಬುದೇ ಇಲ್ಲ. ಬ್ರಾಹ್ಮಣ ಧರ್ಮವನ್ನೇ ಹಿಂದೂ ಧರ್ಮ ಎಂದು ಕರೆಯಲಾಗುತ್ತದೆ. ದಲಿತರನ್ನು, ಆದಿವಾಸಿಗಳನ್ನು ಹಾಗೂ ಹಿಂದುಳಿದವರನ್ನು ಸಿಲುಕಿಸಲು ಸಂಚು ನಡೆದಿದೆ. ನಿಜವಾಗಿಯೂ ಹಿಂದೂ ಧರ್ಮ ಇತ್ತೆಂದರೆ ಇಂದು ದಲಿತರು, ಹಿಂದುಳಿದವರು ಹಾಗೂ ಆದಿವಾಸಿಗಳಿಗೆ ಗೌರವ ಸಿಗುತ್ತಿತ್ತು ಎಂದರು.

ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ, ಉತ್ತರಾಖಂಡದಲ್ಲಿರುವ ಬದರಿನಾಥ ಸೇರಿದಂತೆ ದೇಶದ ಹಲವು ದೇಗುಲಗಳು ಈ ಹಿಂದೆ ಬೌದ್ಧ ಮಂದಿರಗಳಾಗಿದ್ದವು. ಅವುಗಳನ್ನು ಒಡೆದು ಹಿಂದೂ ದೇಗುಲ ನಿರ್ಮಾಣ ಮಾಡಲಾಯಿತು. ಗ್ಯಾನವಾಪಿ ಮಸೀದಿ ರೀತಿಯಲ್ಲೇ ಈ ದೇಗುಲಗಳನ್ನೂ ಸಮೀಕ್ಷೆಗೆ ಒಳಪಡಿಸಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ (Swami Prasad Maurya) ವಿವಾದಿತ ಹೇಳಿಕೆ ನೀಡಿದ್ದರು. 

 ಉತ್ತರಪ್ರದೇಶದ ಮಾಜಿ ಸಚಿವರೂ ಆಗಿರುವ ಮೌರ್ಯ, ‘8ನೇ ಶತಮಾನದವರೆಗೂ ಬದರಿನಾಥವು ಬೌದ್ಧ ಮಂದಿರವಾಗಿತ್ತು. ಹೀಗಾಗಿ ಯಾವ್ಯಾವ ಬೌದ್ಧ ಮಂದಿರಗಳನ್ನು ಒಡೆದು ದೇಗುಲ ನಿರ್ಮಿಸಲಾಗಿದೆಯೋ ಅದರ ಹಿನ್ನೆಲೆ ತಿಳಿಯಲು ಅವುಗಳನ್ನೂ ಗ್ಯಾನವಾಪಿ (Ganavapi Masjid) ಮಾದರಿ ಸಮೀಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದ್ದರು. ಮೌರ್ಯ ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು.

ನೂತನ ಸಂಸತ್‌ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ: ಬ್ರಾಹ್ಮಣತ್ವ ಸ್ಥಾಪನೆಗೆ ಬಿಜೆಪಿ ಯತ್ನ ಎಂದ ಎಸ್‌ಪಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?