ಈ ಗುಹೆಯ ಗರ್ಭದೊಳಗೆ ಅಡಗಿದೆ ಜಗತ್ತಿನ ಅಂತ್ಯದ ರಹಸ್ಯ, ಕೇಳಿದ್ರೆ ಅಚ್ಚರಿಯಾಗುತ್ತೆ!

By Suvarna NewsFirst Published Nov 16, 2021, 2:38 PM IST
Highlights

* ದೇಶದಲ್ಲಿವೆ ಹಲವು ನಿಗೂಢ ರಹಸ್ಯ

* ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯಲ್ಲಿರುವ ಪಾತಾಳ ಭುವನೇಶ್ವರ ದೇವಸ್ಥಾನದಲ್ಲಿದೆ ನಿಗೂಢ ಗುಹೆ

* ಗುಹೆಯಲ್ಲಿ ಅಡಗಿದೆ ಪ್ರಪಂಚದ ಅಂತ್ಯದ ರಹಸ್ಯ

ಡೆಹ್ರಾಡೂನ್(ನ.16): ನಮ್ಮ ದೇಶದಲ್ಲಿ ಅನೇಕ ದೇವಾಲಯಗಳಿವೆ, ಗುಹೆಗಳೂ (caves) ಬಹಳಷ್ಟಿವೆ. ಇವುಗಳಲ್ಲಿ ಕೆಲವು ನಿಗೂಢ ಮತ್ತು ಕೆಲವು ಅದ್ಭುತ. ಆದರೆ ಯಾರಿಗೂ ತಿಳಿಯದ ಗುಹೆಯ ಕೆಲ ಮಾಹಿತಿ ಇಲ್ಲಿದೆ. ಈ ಗುಹೆಯು ಉತ್ತರಾಖಂಡದ ಪಿಥೋರಗಢ್ (Pithoragarh, Uttarakhand) ಜಿಲ್ಲೆಯಲ್ಲಿರುವ ಪಾತಾಳ ಭುವನೇಶ್ವರ (Patal Bhuvaneshwar) ದೇವಸ್ಥಾನದಲ್ಲಿದೆ. ಹಿಂದೂ ಪುರಾಣಗಳಲ್ಲಿಯೂ ಈ ಕುರಿತಾದ ಮಾಹಿತಿ ಇದೆ. ಈ ಗುಹೆಯಲ್ಲಿ ಪ್ರಪಂಚದ ಅಂತ್ಯದ ರಹಸ್ಯ ಅಡಗಿದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ತಿಳಿದುಕೊಳ್ಳಲು ಅನೇಕ ಜನರು ಈ ಗುಹೆಗೆ ಹೋದರು, ಆದರೆ ಅದರ ಬಗ್ಗೆ ಏನನ್ನೂ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ನಾವು ಈ ಗುಹೆಗೆ ಸಂಬಂಧಿಸಿದ ಕೆಲವು ಪ್ರಮುಖ ವಿಚಾರಗಳ ಮಾಹಿತಿ ಇಲ್ಲಿದೆ ನೋಡಿ.

ಈ ದೇವಾಲಯವು ಸಮುದ್ರ ಮಟ್ಟದಿಂದ 90 ಅಡಿ ಆಳದಲ್ಲಿದೆ

ಈ ಗುಹೆಯ ಆಳ ಸಮುದ್ರ ಮಟ್ಟದಿಂದ (Sea Level) 90 ಅಡಿ ಆಳದಲ್ಲಿದೆ. ಇದರಿಂದಾಗಿ ಈ ಗುಹೆಯನ್ನು ಪ್ರವೇಶಿಸಲು ನೀವು ತುಂಬಾ ತೆಳುವಾದ ಮತ್ತು ಕಿರಿದಾದ ಮಾರ್ಗದ ಮೂಲಕ ಹೋಗಬೇಕಾಗುತ್ತದೆ. ಇದರಲ್ಲಿ ಒಂದು ಬಾರಿಗೆ ಒಬ್ಬರೇ ಹೋಗಬಹುದು. ಇದರ ನಂತರ, ನೀವು ನಿಧಾನವಾಗಿ ಗುಹೆಯೊಳಗೆ ಹೋಗಲು ಪ್ರಾರಂಭಿಸಿದಾಗ, ಬೆಳಕು ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಕೆಲವು ಮಾರ್ಗಗಳಲ್ಲಿ ಆಮ್ಲಜನಕವೂ ಕಡಿಮೆ ಇರುತ್ತದೆ. ಆದರೆ ಅದರ ಒಳಗಿನ ನೋಟವನ್ನು ನೋಡಿದರೆ ನಿಮಗೂ ಆಶ್ಚರ್ಯವಾಗುತ್ತದೆ. ಏಕೆಂದರೆ ಇದರಲ್ಲಿ ನೀವು ಆನೆಯ ಕಲಾಕೃತಿಯಂತಹ ಬಂಡೆಗಳು, ಸರ್ಪ, ಹಾವಿನ ಕಲಾಕೃತಿಯೂ ಇಲ್ಲಿವೆ. ಸರ್ಪಗಳ ರಾಜ, ಆಧಿಶೇಷ ಪ್ರಪಂಚದ ಭಾರವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡಿದ್ದಾನೆ ಎಂಬ ನಂಬಿಕೆ ಇದೆ.

ದೇವಾಲಯಕ್ಕಿದೆ ನಾಲ್ಕು ದ್ವಾರ

ಈ ದೇವಾಲಯದಲ್ಲಿ ನಾಲ್ಕು ದ್ವಾರಗಳಿವೆ. ಪುರಾಣಗಳ ಪ್ರಕಾರ, ಇವುಗಳಲ್ಲಿ ಒಂದು ರಂದ್ವಾರ, ಇನ್ನೊಂದು ಪಾಪದ್ವಾರ, ಮೂರನೆಯದು ಧರ್ಮದ್ವಾರ ಮತ್ತು ನಾಲ್ಕನೆಯದು ಮೋಕ್ಷದ್ವಾರ. ರಾವಣ (Ravan) ಸತ್ತಾಗ ಇಲ್ಲಿರುವ ಪಾಪದ್ವಾರದ ಬಾಗಿಲು ಮುಚ್ಚಿಕೊಂಡಿತ್ತು ಎಂದು ಹೇಳಲಾಗುತ್ತದೆ. ಈಗ ಅದರಲ್ಲಿ ಒಂದು ಬಾಗಿಲು ಮಾತ್ರ ತೆರೆದಿದೆ, ಆ ಮೋಕ್ಷದ್ವಾರದಲ್ಲಿ ಶಿವನು ನೆಲೆಸಿದ್ದಾನೆ. ಎಲ್ಲ ದೇವ-ದೇವತೆಗಳು ಈಗಲೂ ಅಲ್ಲಿಗೆ ಬಂದು ಆತನನ್ನು ಪೂಜಿಸುತ್ತಾರೆಂಬ ನಂಬಿಕೆ ಇದೆ.

ಸೂರ್ಯ ವಂಶದ ರಾಜನು ಈ ಗುಹೆಯನ್ನು ಕಂಡುಹಿಡಿದನು

ಈ ಗುಹೆಯನ್ನು ರಾಜ ಋತುಪರ್ಣ ಕಂಡುಹಿಡಿದನೆಂದು ಹೇಳಲಾಗುತ್ತದೆ. ಇದಾದ ನಂತರ ಪಾಂಡವರು ಇಲ್ಲಿ ಶಿವನನ್ನು ಪೂಜಿಸಿದರು. ಆದರೆ ಇಂದಿನ ಕಾಲದಲ್ಲಿ ಇಲ್ಲಿಗೆ ಬರುವುದು ಕಡಿಮೆ. ಕೆಲವರು ಭೇಟಿ ಮಾಡಲು ಬರುತ್ತಾರೆ ಮತ್ತು ಕೆಲವರು ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬ ರಹಸ್ಯವನ್ನು ತಿಳಿದುಕೊಳ್ಳುತ್ತಾರೆ. ನೀವೂ ಈ ರಹಸ್ಯವನ್ನು ತಿಳಿದುಕೊಳ್ಳಲು ಬಯಸಿದರೆ, ಖಂಡಿತವಾಗಿ ಒಮ್ಮೆ ಉತ್ತರಾಖಂಡದ ಪಾತಾಳ ಭುವನೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ನೀವು ಶಿವನ ದರ್ಶನವನ್ನು ಪಡೆಯಬಹುದು.

click me!