ನಾನು ಹೋಗಲೇ? ಪರ್ಮಿಷನ್ ಕೇಳಿದ ಮಾವುತನಿಗೆ ಗಜರಾಜನ ಪ್ರೀತಿಯ ಉತ್ತರ!

Published : Jun 06, 2020, 05:52 PM ISTUpdated : Jun 06, 2020, 05:54 PM IST
ನಾನು ಹೋಗಲೇ? ಪರ್ಮಿಷನ್ ಕೇಳಿದ ಮಾವುತನಿಗೆ ಗಜರಾಜನ ಪ್ರೀತಿಯ ಉತ್ತರ!

ಸಾರಾಂಶ

ಸ್ಪೋಟಕ ತಿಂದು ಸಾವನ್ನಪ್ಪಿದ ಗರ್ಭಿಣಿ ಆನೆ| ಮನುಕುಲವನ್ನೇ ತಲೆತಗ್ಗಿಸುವಂತೆ ಮಾಡಿದ ಘಟನೆ ಬೆನ್ನಲ್ಲೇ ವೈರಲ್ ಆಗುತ್ತಿದೆ ಆನೆಗಳು ಮನುಷ್ಯರಿಗೆ ತೋರುತ್ತಿರುವ ಪ್ರೀತಿ, ಕಾಳಜಿಯ ವಿಡಿಯೋಗಳು| ಮಾವುತನನ್ನು ಪ್ರೀತಿಯಿಂದ ಮನೆಗೆ ಕಳುಹಿಸಿಕೊಟ್ಟ ಗಜರಾಜ

ತಿರುವನಂತಪುರಂ(ಜೂ. 06): ಕಳೆದ ಕೆಲ ದಿನಗಳ ಹಿಂದೆ ಗರ್ಭಿಣಿ ಆನೆಯೊಂದು ಸ್ಪೋಟಕ ತುಂಬಿದ ಹಣ್ಣು ತಿಂದು ನರಳಾಡುತ್ತಾ ಪ್ರಾಣ ಬಿಟ್ಟ ಘಟನೆ ಇಡೀ ದೇಶವನ್ನೇ ದಂಗಾಗಿಸಿತ್ತು. ಘಟನೆ ಬೆನ್ನಲ್ಲೇ ಮನುಷ್ಯತ್ವ ಸತ್ತು ಹೋಗಿದೆ ಎಂಬ ಕೂಗು, ಬೇಜಾರಿನ ಮಾತು ಕೇಳಿ ಬಂದಿತ್ತು. ಹೀಗಿರುವಾಗಲೇ ಆನೆಗಳು ಮನುಷ್ಯರಿಗೆ ತೋರಿಸುವ ಪ್ರೀತಿಯ ವಿಡಿಯೋಗಳು ವೈರಲ್ ಆಗಲಾರಂಭಿಸಿದ್ದವು ಹಾಗೂ ಮನುಷ್ಯರು ಪ್ರಾಣಿಗಳ ಪ್ರೀತಿಗೆ ಅರ್ಹರಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಸದ್ಯ ಮಾವುತನೊಬ್ಬ ತನ್ನ ಆನೆ ಬಳಿ ಮಾತನಾಡುತ್ತಾ ಪ್ರೀತಿಯಿಂದ ನಾನು ಹೋಗಲೇ ಎಂದು ಕೇಳಿದಾಗ, ಆ ಆನೆ ಅಷ್ಟೇ ಪ್ರೀತಿಯಿಂದ ತನ್ನ ಮಾಲೀಕನಿಗೆ ಉತ್ತರಿಸುವ ವಿಡಿಯೋ ವೈರಲ್ ಆಗಿದೆ.

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!

ಚಿತ್ತೂಕುರುವಿ ಎಂಬ ಖಾತೆಯಿಂದ ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿ 'ಕೇರಳದದ ಒಂದು ಮಂದಿರದಲ್ಲಿ ಮಾವುತ ತನ್ನ ಆನೆ ಬಳಿ ಮನೆಗೆ ಹೋಗಲು ಪರ್ಮೀಷನ್ ಕೇಳುತ್ತಾರೆ. ಹೀಗಿರುವಾಗ ಆನೆಯ ಹಾವಭಾವ ನೋಡಿ. ಅದ್ಭುತ' ಎಂದು ಬರೆದಿದ್ದಾರೆ.

ಈ ವಿಡಿಯೋ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಮಾವುತ ನಾನು ಮನೆಗೆ ಹೋಗಲೇ ಎಂದು ಹಲವಾರು ಬಾರಿ ಆಣೆ ಬಳಿ ಪ್ರಶ್ನಿಸುತ್ತಾರೆ. ಹೀಗಿರುವಾಗ ಆನೆ ತನ್ನದೇ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಾ ತಲೆ ಅಲ್ಲಾಡಿಸಿ ಹೋಗಿ ಎಂದು ಹೇಳುತ್ತದೆ. ಹೀಗಿರುವಾಗ ಮಾವುತ ಇನ್ನೇನು ಹೊರಡಲು ಹೆಜ್ಜೆ ಇರಿಸುತ್ತಿದ್ದಂತೆಯೇ ಆತನ ಬಳಿ ಸರಿದು ಅಪ್ಪಿಕೊಳ್ಳುವಂತೆ ನಿಲ್ಲುತ್ತಾ, ಪ್ರೀತಿ ಮಾಡುತ್ತದೆ.

ನೀರಿನಲ್ಲಿ ಮುಳುಗುತ್ತಿದ್ದವನನ್ನು ಕಾಪಾಡಿದ ಆನೆ, ಮಾನವ ಇದಕ್ಕೆ ಅರ್ಹನೇ?

ಗರ್ಭಿಣಿ ಆನೆ ದುರಂತ ಬಳಿಕ ಇಂತಹ ಹಲವಾರು ವಿಡಿಯೋಗಳು ವೈರಲ್ ಆಗಲಾರಂಭಿಸಿವೆ. ಎರಡು ದಿನಗಳ ಹಿಂದಷ್ಟೇ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಮರಿ ಆನೆಯೊಂದು ನದಿಗಿಳಿದು ರಕ್ಷಿಸಿದ ವಿಡಿಯೋ ಭಾರೀ ವೈರಲ್ ಆಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ