ಕೇರಳದಲ್ಲಿ ಹೆಸರಿಗೆ ಮಾತ್ರ ಆನೆಗಳಿಗೆ ವಿಶೇಷ ಸ್ಥಾನ. ಅಸಲಿ ಕತೆ ಬೇರೆ ಇದೆ. ಕಾರಣ ಪ್ರತಿ ವರ್ಷ ಕೇರಳದಲ್ಲಿ ಹಿಂಸೆ ನೀಡಿ ಸರಾಸರಿ 600ನೇ ಆನೆಗಳ ಹತ್ಯೆಯಾಗುತ್ತಿದೆ. ಈ ಕುರಿತು ಸ್ಫೋಟಕ ಮಾಹಿತಿಯನ್ನು ಬಿಜೆಪಿ ಸಂಸದೆ, ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಬಿಚ್ಚಿಟ್ಟಿದ್ದಾರೆ.
ನವದೆಹಲಿ(ಜೂ.06): ಗರ್ಭಿಣಿ ಆನೆ ಹತ್ಯೆ ಪ್ರಕರಣದ ಬಳಿಕ ಕೇರಳ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಕೇರಳದಲ್ಲಿ ಪ್ರಾಣಿ ಹಿಂಸೆ ಹೆಚ್ಚಾಗುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದೆ, ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇಷ್ಟೇ ಅಲ್ಲ ಬರಿ ಹೇಳಿಕೆ ನೀಡಿ ಯಾವುದೇ ಕ್ರಮ ಕೈಗೊಳ್ಳದ ಕೇರಳ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮಾನವೀಯತೆ ಮರೆತ ಮಾನವರೆ, ನನ್ನ ಶಾಪ ನಿಮ್ಮನ್ನು ತಟ್ಟದೆ ಬಿಡದು!
undefined
ಕೇರಳದಲ್ಲಿ ಪ್ರತಿ ವರ್ಷ ಹಿಂಸೆ ನೀಡಿ ಸರಾಸರಿ 600 ಆನೆಗಳನ್ನು ಹತ್ಯೆ ಮಾಡಲಾಗುತ್ತಿದೆ. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೆ ಇಂತಹ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ ಎಂದು ಮೇನಕಾ ಗಾಂಧಿ ಹೇಳಿದ್ದಾರೆ. ಮೇನಕಾ ಗಾಂಧಿ ಪ್ರತಿ ವಾರ ವಿವಿದ ರಾಜ್ಯಗಳ ಆರಣ್ಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ವರದಿ ತರಿಸಿಕೊಳ್ಳುತ್ತಾರೆ. ಹೀಗೆ ಕಳೆದ ತಿಂಗಳು ಕೇರಳದಲ್ಲಿ ನಡೆದ ಆನೆ ಹಿಂಸೆ ಪ್ರಕರಣಕ್ಕೆ ಕೇರಳ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದ್ದಾರೆ.
ಆನೆ ಕೊಂದ ದುರುಳರ ವಿರುದ್ಧ ಕೇರಳ MP ರಾಹುಲ್ ಮೌನ; ಕಿಡಿ ಕಾರಿದ ಮೇನಕಾ ಗಾಂಧಿ!.
ದೇವಸ್ಥಾನದ ಆವರಣದಲ್ಲಿ ಆನೆಯ ಕಾಲುಗಳನ್ನು ಕಟ್ಟಿಹಾಕಿ ತೀವ್ರ ಹಿಂಸೆ ನೀಡಿದ ಘಟನೆ ವರದಿಯಾಗಿತ್ತು. ಈ ಕುರಿತು ಅರಣ್ಯಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಮೇನಕಾ ಗಾಂಧಿ ಸೂಚಿಸಿದ್ದರು. ಆದರೆ ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ ಸಂಪೂರ್ಣ ವರದಿಯೇ ಬಂದಿಲ್ಲ. ಕೇರಳ ಸರ್ಕಾರ ಪ್ರಾಣಿಗಳ ಹಿಂಸೆ ಹಾಗೂ ಅದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಮೇನಕಾ ಗಾಂಧಿ ಆರೋಪಿಸಿದ್ದಾರೆ.
ಉದ್ದೇಶ ಪೂರ್ವಕ ಕೊಲೆಗೆ ಸಮ; ಗರ್ಭಿಣಿ ಆನೆ ಕೊಂದ ಘಟನೆ ಖಂಡಿಸಿದ ರತನ್ ಟಾಟಾ!
ಕೇರಳದಲ್ಲಿ ಖಾಸಗಿ ವ್ಯಕ್ತಿಗಳು ತಮ್ಮ ಸ್ಟೇಟಸ್‌ಗಾಗಿ ಆನೆಗಳನ್ನು ಸಾಕುತ್ತಿದ್ದಾರೆ. ಜೊತೆಗೆ ಅಷ್ಟೇ ಹಿಂಸೆ ನೀಡುತ್ತಿದ್ದಾರೆ. ದೇವಸ್ಥಾನದಲ್ಲಿ ಆನೆಗಳ ಹಿಂಸೆ ನಡೆಯುತ್ತಿದೆ. ಇದರ ಕುರಿತು ಇದುವರೆಗೆ ಕೇರಳ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ಕಾರಣದಿಂದ ಗರ್ಭಿಣಿ ಆನೆಯ ಹತ್ಯೆಯಾಗಿದೆ. ದೇಶದಲ್ಲೆಡೆ ಆಕ್ರೋಶ ಕೇಳಿ ಬಂದ ಕಾರಣ ಕಣ್ಣೊರೆಸುವ ತಂತ್ರ ಮಾಡಲಿದೆ ಎಂದು ಮೇನಕ ಗಾಂಧಿ ಹೇಳಿದ್ದಾರೆ.