ಪಂಜಾಬ್(ಜು.12): ದಿ ಗ್ರೇಟ್ ಖಲಿ ಎಂದೇ ಜನಪ್ರಿಯರಾಗಿರುವ WWE ಚಾಂಪಿಯನ್ ಖಲಿ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ರಸ್ಲರ್ ಖಲಿ ಟೋಲ್ ಗೇಟ್ ಬಳಿ ಬಂದಾಗ ಟೋಲ್ ಸಿಬ್ಬಂದಿ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ದಿ ಗ್ರೇಟ್ ಖಲಿ ಕಾರಿನೊಳಗೆ ನುಗ್ಗಿದ ಟೋಲ್ ಸಿಬ್ಬಂದಿ ಸೆಲ್ಫಿ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ರೊಚ್ಚಿಗೆದ್ದ ಖಲಿ, ಸಿಬ್ಬಂದಿ ಕಪಾಳಕ್ಕೆ ಭಾರಿಸಿದ್ದಾರೆ. ಇದರಿಂದ ಟೋಲ್ ಬಳಿ ಹೈಡ್ರಾಮವೇ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಕ್ಷಣ ರಸ್ತೆಯಲ್ಲಿರುವುದನ್ನು ಮರೆತ ಖಲಿ, ರಸ್ಲಿಂಗ್ ರಿಂಗ್ ರೋಷಾವೇಷ ತೋರಿದ್ದಾರೆ. ಸೆಲ್ಫಿ ಕೇಳಿದ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಖಲಿ, ಬಳಿಕ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಖಲಿ, ಕಾರಿನಿಂದ ಇಳಿದು ಬಂದು ಮತ್ತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸ್, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ ಈ ವಿವಾದ ಇದೀಗ ಭಾರಿ ಸದ್ದು ಮಾಡುತ್ತಿದೆ.
ಪಂಜಾಬ್‌ನ ಲಾಡೋವಲ್ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದೆ. ದಿಲೀಪ್ ರಾಣಾ ಅಲಿಯಾಸ್ ದಿ ಗ್ರೇಟ್ ಖಲಿ ನಡೆ ಕುರಿತು ಪರ ವಿರೋಧಗಳು ವ್ಯಕ್ತವಾಗಿದೆ. ಕರ್ನಲ್‌ನಿಂದ ಜಲಂಧರ್‌ಗೆ ತೆರಳುತ್ತಿದ್ದ ಖಲಿ ಲಾಡೋವಲ್ ಟೋಲ್ ಪ್ಲಾಜಾ ಪ್ರವೇಶಿಸುತ್ತಿದ್ದಂತೆ ಸಿಬ್ಬಂದಿಗಳು ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಖಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಿಬ್ಬಂದಿಗಳು, ಖಲಿ ಪ್ರಯಾಣಕ್ಕೆ ಟೋಲ್ ಕಾರಣಗಳನ್ನು ನೀಡಿ ಅಡ್ಡಿಪಡಿಸಿದ್ದಾರೆ ಎಂದು ಸ್ವತಃ ಖಲಿ ಆರೋಪಿಸಿದ್ದಾರೆ. ತನ್ನ ಬಳಿ ಐಡಿ ಕಾರ್ಡ್ ಸೇರಿದಂತೆ ಇತರ ದಾಖಲೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಟೋಲ್ ಸಿಬ್ಬಂದಿಗಳು ತನ್ನ ಜೊತೆ ಅಗೌರವವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
Punjab Elections: 'ದಿ ಗ್ರೇಟ್ ಖಲಿ' ಬಿಜೆಪಿಗೆ: ಕೃಷಿ ಕಾನೂನು ವಿರೋಧಿಸಿದ್ದ ರಾಣಾರಿಂದ ಮೋದಿ ಹೊಗಳಿಕೆ!
ಇತ್ತ ಟೋಲ್ ಸಿಬ್ಬಂದಿ ಆರೋಪ ವ್ಯತಿರಿಕ್ತವಾಗಿದೆ. ದಿ ಗ್ರೇಟ್ ಖಲಿ ಬಳಿ ಸೆಲ್ಫಿ ತೆಗೆಯಲು ಹೋಗಿದ್ದು ನಿಜ. ನಾವು ಸೆಲ್ಫಿ ತೆಗೆಯಲು ಖಲಿ ನಿರಾಕರಿಸಿದ್ದಾರೆ. ಇದೇ ವೇಳೆ ಏಕಾಏಕಿ ರೊಚ್ಚಿಗೆದ್ದ ಖಲಿ ಕಪಾಳಕ್ಕೆ ಭಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಖಲಿ ಜೊತೆ ಅಗೌರವವಾಗಿ ನಡೆದುಕೊಂಡಿರುವುದೇ ಈ ರದ್ದಾಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಖಲಿ ವಾಹನ ಮುಂದೆ ಸಾಗದಂತೆ ಬ್ಯಾರಿಕೇಡ್‌ಗಳನ್ನು ಹಾಕಿ ನಿರ್ಬಂಧಿಸಲಾಗಿತ್ತು. ಇದರಿಂದ ಖಲಿ ಸಿಟ್ಟಿಗೆದ್ದಿದ್ದಾರೆ. ಟೋಲ್ ಪ್ಲಾಜಾಗೆ ಪಾವತಿ ಮಾಡಿ ಮುಂದೆ ಸಾಗುತ್ತಿರುವಾಗ ನನ್ನನ್ನು ತಡೆಯುವ ಅಧಿಕಾರ ಯಾರಿಗಿದೆ. ಕಾನೂನು ಪ್ರಕಾರ ಎಲ್ಲಾ ನಿಯಮ ಪಾಲಿಸಿ ಮುಂದೆ ಸಾಗುತ್ತಿದ್ದೇನೆ ಎಂದು ಖಲಿ ಆರೋಪಿಸಿದ್ದಾರೆ ಪೊಲೀಸರು ಮಧ್ಯಪ್ರವೇಶಿಸಿ ಟೋಲ್ ಸಿಬ್ಬಂದಿ ಹಾಗೂ ಖಲಿ ಸಮಾಧಾನ ಪಡಿಸಿದ್ದಾರೆ. ಇಬ್ಬರು ತಮ್ಮ ತಮ್ಮ ದೂರುಗಳನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
;
ಕಾರಿನಿಂದ ಹೊರಬಂದು ನೇರವಾಗಿ ಟೋಲ್ ಸಿಬ್ಬಂದಿ ಬಳಿ ತೆರಳಿದ ಖಲಿಯನ್ನು ಟೋಲ್ ಸಿಬ್ಬಂದಿಗಳು ನಿಂದಿಸುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಕೋತಿ ಎಂದು ಖಲಿಯನ್ನು ಕರೆದಿದ್ದಾರೆ. ಇದು ಖಲಿಯನ್ನು ಮತ್ತಷ್ಟು ಕೆರಳಿಸಿದೆ.
ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ದಿ ಗ್ರೇಟ್ ಖಲಿ ಜಾಲಿ ರೈಡ್!
WWE ರಸ್ಲಿಂಗ್ ಚಾಂಪಿಯನ್ ಕೆಲ ವರ್ಷಗಳ ಹಿಂದೆ ಭಾರತಕ್ಕೆ ಮರಳಿ ಜಲಂಧರ್‌ನಲ್ಲಿ ತಮ್ಮದೇ ಕಾಂಟಿನೆಂಟಲ್ ರಸ್ಲಿಂಗ್ ಅಕಾಡೆಮಿ ನಡೆಸುತ್ತಿದ್ದಾರೆ. ಈ ಅಕಾಡೆಮಿಯಲ್ಲಿ ಯುವ ರಸ್ಲರ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಹೆಚ್ಚಾಗಿ ವಿವಾದಗಳಿಂದ ದೂರ ಇರುವ ಖಲಿ, ಇದೀಗ ಹೊಸ ವಿವಾದ ಸುತ್ತಿಕೊಂಡಿದೆ.