ನೂತನ ಸಂಸತ್‌ ಭವನದ ಮೊದಲ ಚಳಿಗಾಲದ ಅಧಿವೇಶ ಅಂತ್ಯ

By Kannadaprabha News  |  First Published Dec 22, 2023, 7:26 AM IST

ಸಾಕಷ್ಟು ಐತಿಹಾಸಿಕ ಮಸೂದೆಗಳಿಗೆ ಅಂಗೀಕಾರ ಹಾಗೂ ಸಾಕಷ್ಟು ಗಲಭೆಗೆ ಕಾರಣವಾದ ಸಂಸತ್ತಿನ ಚಳಿಗಾಲದ ಅಧಿವೇಶನ ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಅಂತ್ಯವಾಗಿದೆ.


ನವದೆಹಲಿ: ಸಾಕಷ್ಟು ಐತಿಹಾಸಿಕ ಮಸೂದೆಗಳಿಗೆ ಅಂಗೀಕಾರ ಹಾಗೂ ಸಾಕಷ್ಟು ಗಲಭೆಗೆ ಕಾರಣವಾದ ಸಂಸತ್ತಿನ ಚಳಿಗಾಲದ ಅಧಿವೇಶನ ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಅಂತ್ಯವಾಗಿದೆ.

ಲೋಕಸಭೆ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾಗಿ ಸ್ಪೀಕರ್‌ ಓಂ ಬಿರ್ಲಾ ಘೋಷಿಸಿದರೆ, ಅಪರಾಧ ಮಸೂದೆಯ ಅಂಗೀಕಾರದ ಬಳಿಕ ರಾಜ್ಯಸಭೆಯನ್ನೂ ಮುಂದೂಡಲಾಯಿತು. ಈ ಅಧಿವೇಶನಲ್ಲಿ ಅಪರಾಧ ಮಸೂದೆ, ಟೆಲಿಕಮ್ಯುನಿಕೇಶನ್ ಮಸೂದೆ, ಚುನಾವಣಾ ಆಯುಕ್ತರ ನೇಮಕ ಸೇರಿದಂತೆ 18 ಐತಿಹಾಸಿಕ ಮಸೂದೆಗಳು ಈ ಅಧಿವೇಶನದಲ್ಲಿ ಅಂಗೀಕಾರ ಪಡೆದುಕೊಂಡವು. ಇದಲ್ಲದೇ ಭದ್ರತಾ ಲೋಪ, 146 ಸಂಸದರ ಅಮಾನತು, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಜಾ ಸೇರಿದಂತೆ ಹಲವು ಘಟನೆಗಳಿಗೂ ಸಾಕ್ಷಿಯಾಯಿತು.

Tap to resize

Latest Videos

ಭದ್ರತಾ ಲೋಪ:

ಡಿ.13 ರಂದು ಲೋಕಸಭೆಯಲ್ಲಿ ಸಂದರ್ಶಕರ ಸೋಗಿನಲ್ಲಿ ಬಂದಿದ್ದ ವ್ಯಕ್ತಿಗಳು ಸಂಸದರತ್ತ ಸ್ಮೋಕ್‌ ಬಾಂಬ್‌ ಸಿಡಿಸಿದ ಭಾರೀ ಭದ್ರತಾ ಲೋಪ ಜರುಗಿತು. ಅದಾದ ಬಳಿಕ ಸ್ಪೀಕರ್‌ ಮತ್ತು ವಿಪಕ್ಷಗಳು ಹಾಗೂ ವಿಪಕ್ಷಗಳು ಹಾಗೂ ಸರ್ಕಾರದ ನಡುವೆ ಸಂಸತ್ತಿನಲ್ಲಿ ಭಾರೀ ವಾಗ್ಯುದ್ಧಗಳು ನಡೆದವು. ಈ ವೇಳೆ ಅಶಿಸ್ತಿನ ನಡವಳಿಕೆ ಆರೋಪದಡಿ ಹಲವು ಸಂಸದರನ್ನು ಸ್ಪೀಕರ್‌ ಅಮಾನತುಗೊಳಿಸಿದರು.

ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಮಸೂದೆ ಪಾಸ್‌

ಸ್ಪೀಕರ್‌, ಇತರ ನಾಯಕರ ಭೇಟಿಯಾದ ಮೋದಿ:

ಈ ನಡುವೆ ಗುರುವಾರ ಚಳಿಗಾಲದ ಲೋಕಸಭೆ ಅಧಿವೇಶನ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾಡಿಕೆಯಂತೆ ಸ್ಪೀಕರ್‌ ಓಂ ಬಿರ್ಲಾ ಹಾಗೂ ಇತರ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಲೋಕಸಭೆಯ ಕಲಾಪದಲ್ಲಿ ತಮ್ಮ ಪಾತ್ರಕ್ಕಾಗಿ ಅವರು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ಎನ್ನಲಾಗಿದೆ.

ಮೋದಿ ಪಿಕ್‌ ಪಾಕೆಟರ್‌: ರಾಹುಲ್‌ ಹೇಳಿಕೆ ವಿರುದ್ಧ ಕ್ರಮಕ್ಕೆ 8 ವಾರದ ಗಡುವು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಮಾಡಿದ್ದ ‘ಪಿಕ್‌ ಪಾಕೆಟರ್‌’ ಹೇಳಿಕೆಗೆ ಸಂಬಂಧಿಸಿದಂತೆ 8 ವಾರಗಳೊಳಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ. ರಾಹುಲ್‌ ವಿರುದ್ಧ ಕ್ರಮ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಇಂತಹ ಹೇಳಿಕೆ ಸಮಂಜಸವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಕುರಿತಾಗಿ ಚುನಾವಣಾ ಆಯೋಗ ನೋಟಿಸ್‌ ನೀಡಿದ್ದರೂ ಸಹ ರಾಹುಲ್‌ ಗಾಂಧಿ ಯಾವುದೇ ಉತ್ತರ ನೀಡಿಲ್ಲ ಎಂಬುದನ್ನು ಗಮನಿಸಿರುವ ಕೋರ್ಟ್‌, ರಾಹುಲ್‌ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕು, ಗರಿಷ್ಠ 8 ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದೆ.

ಸಿಬಿಐ ತನಿಖೆಗೆ 10 ರಾಜ್ಯಗಳ ಒಪ್ಪಿಗೆ ಸ್ಥಗಿತ: ಕೇಂದ್ರ

click me!