ಸಂಯೋಜಿತ ಸೇನಾ ಕಮಾಂಡ್ ಕನಸು ಶೀಘ್ರದಲ್ಲಿಯೇ ನನಸು

By Kannadaprabha News  |  First Published Jan 2, 2025, 8:20 AM IST

ರಕ್ಷಣಾ ಇಲಾಖೆಯು 2025ನ್ನು 'ಸೇನಾ ಸುಧಾರಣಾ ವರ್ಷ' ಎಂದು ಘೋಷಿಸಿದೆ. ಈ ವರ್ಷದಲ್ಲಿ ಸಂಯೋಜಿತ ಸೇನಾ ಕಮಾಂಡ್ ವ್ಯವಸ್ಥೆಯನ್ನು ಜಾರಿಗೆ ತರುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.


ನವದೆಹಲಿ: ಸೇನೆಯ 3 ವಿಭಾಗಗಳ ಸಾಮರ್ಥ ವನ್ನು ಒಗ್ಗೂಡಿಸಿ, ಯುದ್ಧ ಮತ್ತು ಇತರೆ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇಡುವ 'ಸಂಯೋಜಿತ ಸೇನಾ ಕಮಾಂಡ್' ವ್ಯವಸ್ಥೆಯ ಕನಸನ್ನು ಈ ವರ್ಷ ಜಾರಿಗೊಳಿಸುವ ವಿಶ್ವಾಸವನ್ನು ರಕ್ಷಣಾ ಇಲಾಖೆ ವ್ಯಕ್ತಪಡಿಸಿದೆ. ಸೇನೆಯ 3 ವಿಭಾಗಗಳ ನಡುವೆ ಸಹಕಾರ ವೃದ್ಧಿಸುವ ಹಾಗೂ ಸೇನೆಯ ತಂತ್ರಜ್ಞಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2025ನೇ ವರ್ಷವನ್ನು 'ಸೇನಾ ಸುಧಾರಣಾ ವರ್ಷ' ಎಂದು ರಕ್ಷಣಾ ಇಲಾಖೆ ಘೋಷಿಸಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಸೇನಾ ವ್ಯವಸ್ಥೆಯಲ್ಲಿ 9 ಸುಧಾರಣೆಗಳನ್ನು ತರಲು ನಿರ್ಧರಿಸಲಾಗಿದೆ.

ಇದರ ಭಾಗವಾಗಿ ಸಂಯೋಜಿತ ಸೇನಾ ಪಡೆ ಸ್ಥಾಪಿಸುವ ಬಗ್ಗೆ ಚರ್ಚಿಸಲಾಯಿತು. ಇದರ ಪ್ರಕಾರಪ್ರತಿಕಮಾಂಡ್‌ ಭೂಸೇನೆ, ವಾಯುಪಡೆ ಹಾಗೂನೌಕಾಪಡೆಯತುಕಡಿಗಳನ್ನು ಒಗ್ಗೂಡಿಸಿ, ಒಂದೇ ಘಟಕವಾಗಿ ನಿಯೋಜಿಸಲಾಗುವುದು. ಜತೆಗೆ, ಭಾರತೀಯ ಸಂಸ್ಕೃತಿ ಹಾಗೂ ವಿಚಾರಗಳ ಬಗ್ಗೆ ವಿಶ್ವಾಸ ವೃದ್ಧಿಸುವುದು, ಸ್ವದೇಶಿ ಸಾಮರ್ಥ ಗಳ ಮೂಲಕ ಜಾಗತಿಕ ಮಾನದಂಡಗಳನ್ನು ತಲು ಪುವುದು, ರಾಷ್ಟ್ರದ ಪರಿಸ್ಥಿತಿಗೆ ಹೊಂದುವ ಆಧುನಿಕ ಸೇನಾ ಅಭ್ಯಾಸಗಳ ಅಳವಡಿಕೆಯ ಕಡೆಗೂ ಗಮನ ಹರಿಸಲಾಗಿದೆ. ವ್ಯಾಪಾರವನ್ನು ಸರಳಗೊಳಿಸುವ ಮೂಲಕ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸುವುದೂ ಇದರ ಉದ್ದೇಶವಾಗಿದೆ.

Tap to resize

Latest Videos

ಇದನ್ನೂ ಓದಿ: ಹಿಮಾಚಲದ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿ ವಾಪಸಾತಿ ಅಭಿಯಾನ; ವಿದ್ಯುತ್ ಸಬ್ಸಿಡಿ ಕೈ ಬಿಟ್ಟ ಸಿಎಂ

click me!