ಗೆಳತಿ ಕರೆದಳೆಂದು ಮಧ್ಯರಾತ್ರಿ ಆಕೆಯ ಮನೆಗೆ ಹೋದ, ಬೆಳಗಾಗುವುದರೊಳಗೆ ಸಿಕ್ಕಿಬಿದ್ದು ಮದುವೆಯಾದ!

By Gowthami K  |  First Published Jan 12, 2025, 6:26 PM IST

ಬಿಹಾರದಲ್ಲಿ ಗೆಳತಿಯನ್ನು ಭೇಟಿಯಾಗಲು ಹೋದ ಗೆಳೆಯನಿಗೆ ಮಧ್ಯರಾತ್ರಿಯಲ್ಲಿ ಅನಿರೀಕ್ಷಿತ ಮದುವೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗೆಳತಿ ಕರೆದಳೆಂದು, ಮಧ್ಯರಾತ್ರಿಯಲ್ಲಿ ಗೆಳೆಯ ಬಂದನು. ಆದರೆ ಬೆಳಗ್ಗೆ ಆಗುವಾಗ ಆತನಿಗೆ ಮದುವೆಯಾಗಿದೆ.  ಇವರ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. 

ನಿಜಾಂಶವೇನೆಂದರೆ  ಪ್ರೇಮಿ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದ. ಆಗ ಗೆಳತಿಯ ಮನೆಯವರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದಾದ ನಂತರ ತಕ್ಷಣವೇ ಇಬ್ಬರಿಗೂ ಮದುವೆ ಮಾಡಿಸಿದ್ದರು. ಬಿಹಾರದ ನವಹಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ಬರಿಯಾಹಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Tap to resize

Latest Videos

ಹುಡ್ಗೀರು ಹಿಂಗೂ ಬೀಳ್ತಾರೆ, ಇನ್‌ಸ್ಟಾಗ್ರಾಂ ಪೋಸ್ಟ್ ಹಾಕುವ ಮುನ್ನ ಗಮನವಿರಲಿ

ಬರಿಯಾಹಿ ಗ್ರಾಮದಲ್ಲಿ ರಾತ್ರಿಯ ಕತ್ತಲಲ್ಲಿ ಪ್ರೇಮಿಯೊಬ್ಬ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದ. ಇದನ್ನು ತಿಳಿದ ಗೆಳತಿಯ ಮನೆಯವರು ಆತನನ್ನು ಹಿಡಿದಿದ್ದಾರೆ. ಇದಾದ ನಂತರ ತಡ ಮಾಡದೆ ಇಬ್ಬರಿಗೂ ಮದುವೆ ಮಾಡಿದರು. ಇದಷ್ಟೇ ಅಲ್ಲ. ಮದುವೆ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯ ವಿಧಿ ವಿಧಾನಗಳು ಕೂಡ ವಿಡಿಯೋದಲ್ಲಿ ಗೋಚರಿಸುತ್ತವೆ.

ಗೆಳೆಯ ಮತ್ತು ಗೆಳತಿ ಯಾದವ ಸಮುದಾಯಕ್ಕೆ ಸೇರಿದವರಾಗಿದ್ದು, ಇಬ್ಬರೂ ಒಂದೇ ಗ್ರಾಮದವರು. ಇಬ್ಬರ ನಡುವೆ ಬಹಳ ದಿನಗಳಿಂದ ಪ್ರೇಮವಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಮದುವೆ ಇನ್ನೂ ದೃಢಪಟ್ಟಿಲ್ಲ. ಸದ್ಯ ವೈರಲ್ ವಿಡಿಯೋ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಹಳ್ಳಿಯಲ್ಲಿ ಜನರು ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತಾರೆ.

ಗಂಡ ಹೆಂಡತಿ ಮಧ್ಯೆ ಜಗಳವೇ ಆಗಬಾರದೆಂದರೆ ಇಷ್ಟು ಮಾಡಿ ಸಾಕು!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ-ವೀಡಿಯೋದಲ್ಲಿ, ಒಬ್ಬ ಹುಡುಗ ಮತ್ತು ಹುಡುಗಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಹುಡುಗ ಧೋತಿ ಮತ್ತು ಟವೆಲ್ ಧರಿಸಿದ್ದಾನೆ. ಅದೇ ಸಮಯದಲ್ಲಿ, ಹುಡುಗಿ ಕೆಂಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾಳೆ. ವಧು, ವರ ಮತ್ತು ಅವರ ಕುಟುಂಬ ಸದಸ್ಯರು ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ವಿಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. 

click me!