
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಶ್ವದಲ್ಲೇ ಅತ್ಯಂತ ಮಾಲಿನ್ಯ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಲ್ಲದೇ ಇದೇ ಮಾಲಿನ್ಯ ಪರಿಸ್ಥಿತಿ ಮುಂದುವರೆದರೆ ಇಲ್ಲಿ ವಾಸಿಸುವ ಜನ 11.9 ವರ್ಷದಷ್ಟುಆಯುಷ್ಯ ಕಳೆದುಕೊಳ್ಳಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ‘ದ ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್’ ಸಂಸ್ಥೆ ಈ ವರದಿಯನ್ನು ಬಿಡುಗಡೆ ಮಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಮಾಲಿನ್ಯ ಮಟ್ಟಕ್ಕಿಂತ ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ಭಾರತದ 130 ಕೋಟಿ ಜನ ವಾಸಿಸುತ್ತಿದ್ದಾರೆ. ಅಲ್ಲದೇ ಶೇ.67.4ರಷ್ಟುಜನ ಭಾರತ ಸರ್ಕಾರ ನಿಗದಿ ಪಡಿಸಿರುವ ಮಾಲಿನ್ಯ ಮಟ್ಟಕ್ಕಿಂತ ಹೆಚ್ಚು ಮಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ದೇಶದ ಜನ ಒಟ್ಟಾರೆ ಆಯುಷ್ಯ 5.3 ವರ್ಷಗಳಷ್ಟುಕಡಿಮೆಯಾಗಲಿದೆ ಎಂದು ತಿಳಿಸಿದೆ.
ಅತಿ ಹೆಚ್ಚು ಮಾಲಿನ್ಯ ನಗರದ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ವಾಸಿಸುತ್ತಿರುವ 1.8 ಕೋಟಿ ಜನರ ಆಯುಷ್ಯ 11.9 ವರ್ಷ ಕಡಿಮೆಯಾಗಿದೆ. ಉಳಿದಂತೆ ಪಂಜಾಬ್‌ನ (Punjab) ಪಠಾಣ್‌ಕೋಟ್ 2ನೇ ಸ್ಥಾನದಲ್ಲಿದ್ದು, ಇಲ್ಲಿ 3.1 ವರ್ಷ ಆಯುಷ್ಯ ಕಡಿಮೆಯಾಗಿದೆ. ಇನ್ನು ರಾಜ್ಯಗಳ ಪಟ್ಟಿಯಲ್ಲೂ ದೆಹಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಉತ್ತರ ಪ್ರದೇಶ (Uttar Pradesh) 2ನೇ ಸ್ಥಾನದಲ್ಲಿದೆ. ಇಲ್ಲಿನ ಜನ 8.8 ವರ್ಷ ಆಯುಷ್ಯ ಕಳೆದುಕೊಳ್ಳಲಿದ್ದಾರೆ. ಹರ್ಯಾಣ (Haryana) 3ನೇ ಸ್ಥಾನದಲ್ಲಿದ್ದು, ಇಲ್ಲಿನವರ ಆಯುಷ್ಯ 8.3 ವರ್ಷ ಕಡಿಮೆಯಾಗಲಿದೆ. ಬಿಹಾರ 4ನೇ ಸ್ಥಾನದಲ್ಲಿದ್ದು, ಇವರ ಆಯುಷ್ಯ 8 ವರ್ಷ ಕಡಿಮೆಯಾಗಲಿದೆ. ಪಂಜಾಬ್ 5ನೇ ಸ್ಥಾನದಲ್ಲಿದ್ದು, ಇಲ್ಲಿ ವಾಸಿಸುವವರ ಆಯುಷ್ಯ 6.4 ವರ್ಷಗಳಷ್ಟುಕುಸಿತವಾಗಲಿದೆ.
ಬುಧವಾರ ನೋ ಹಾರ್ನ್ ಡೇ, ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರ ವಿಶೇಷ ಆಂದೋಲನ!
ಬಾಂಗ್ಲಾದೇಶ (Bangladesh), ಭಾರತ, ಪಾಕಿಸ್ತಾನ, ಚೀನಾ(China), ನೈಜೀರಿಯಾ ಮತ್ತು ಇಂಡೋನೇಷಿಯಾ ಈ 6 ದೇಶಗಳಲ್ಲಿನ ಆಯುಷ್ಯ ಕುಸಿತ ಪ್ರಮಾಣ ಇಡೀ ಜಗತ್ತಿನ ಸರಾಸರಿಯ ಮೇಲೆ ಪರಿಣಾಮ ಬೀರುತ್ತಿದೆ. ಇಲ್ಲಿರುವ ಜನ ಸರಾಸರಿ 6 ವರ್ಷಕ್ಕಿಂತಲೂ ಹೆಚ್ಚು ವರ್ಷ ಆಯುಷ್ಯ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕನ್ನಡಿಗರ ಆಯುಷ್ಯ 2.4 ವರ್ಷ ಕುಸಿತ
ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಮಾಲಿನ್ಯ ಪ್ರಮಾಣಕ್ಕಿಂತ ಕರ್ನಾಟಕದಲ್ಲಿ (Karnataka)ಮಾಲಿನ್ಯ ಪ್ರಮಾಣ ಹೆಚ್ಚಿದ್ದು, ಕರ್ನಾಟಕದಲ್ಲಿ ವಾಸಿಸುತ್ತಿರುವವರು ಸರಾಸರಿ 2.4 ವರ್ಷಗಳ ಆಯುಷ್ಯ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ಭಾರತ ನಿಗದಿ ಪಡಿಸಿರುವ ಮಾಲಿನ್ಯ ಮಟ್ಟಕ್ಕಿಂತ ಕರ್ನಾಟಕದ ಪ್ರಮಾಣ ಕಡಿಮೆ ಇದ್ದು, ಯಾವುದೇ ಸಮಸ್ಯೆ ಇಲ್ಲ ಎಂದೂ ಹೇಳಲಾಗಿದೆ.
ವಿಶ್ವದ 20 ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 15 ನಗರಗಳಿಗೆ ಸ್ಥಾನ!
ರಾಜ್ಯಗಳು ಕಳೆದುಕೊಂಡ ಆಯುಷ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ