
ಮುಂಬೈ(ಜು.14): ಕರ್ನಾಟಕದಿಂದ ಸಾಗಿಸಲಾಗಿದ್ದ ಸುಮಾರು 26 ಕೋಟಿ ರು.ಮೌಲ್ಯದ 27 ಕೆಜಿಯಷ್ಟುತಿಮಿಂಗಲದ ವಾಂತಿ (ಆ್ಯಂಬರ್ಗಿಸ್) ಯನ್ನು ಮಹಾರಾಷ್ಟ್ರದ ಠಾಣೆ ಅರಣ್ಯ ವಿಭಾಗದ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಕರ್ನಾಟಕ ಮೂಲದ ಓರ್ವ ಸೇರಿದಂತೆ 5 ಜನರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ವಿವಿಧ ಕಾಯ್ದೆಯಡಿ ಕೇಸು ದಾಖಲಿಸಿಕೊಳ್ಳಲಾಗಿದೆ.
ಸ್ಪಮ್‌ರ್ ವೇಲ್ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ. ಇವು ತಮ್ಮ ದೇಶದಲ್ಲಿ ಸೇರಿಕೊಂಡ ಬೇಡದ ವಸ್ತುಗಳನ್ನು ಹೊರಹಾಕುವ ವೇಳೆ ಅಂಟಿನಂಥ ವಸ್ತುವನ್ನೂ ಹೊರಹಾಕುತ್ತದೆ. ಇದನ್ನೇ ತಿಮಿಂಗಿಲ ವಾಂತಿ ಎನ್ನಲಾಗುತ್ತದೆ. ಇದನ್ನು ಸುಗಂಧ ದ್ರವ್ಯ ತಯಾರಿಸಲು ಬಳಸಲಾಗುತ್ತದೆ. ಇದು ಬಲು ದುಬಾರಿ. ಆದರೆ ಇದರ ಸಂಗ್ರಹ, ಮಾರಾಟ ಭಾರತದಲ್ಲಿ ಶಿಕ್ಷಾರ್ಹ ಅಪರಾಧ.
ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳ ತಂಡ ಇತ್ತೀಚೆಗೆ ತಂಡವೊಂದರ ಮೇಲೆ ದಾಳಿ ನಡೆಸಿ ಅವರಿಂದ 27 ಕೆಜಿ ತಿಮಿಂಗಲ ವಾಂತಿ ವಶಪಡಿಸಿಕೊಂಡಿದೆ. ವಿಚಾರಣೆ ವೇಳೆ ಇದನ್ನು ಕರ್ನಾಟಕದಿಂದ ತರಲಾಗಿತ್ತು ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ಹೆಚ್ಚಿನ ವಿಚಾರಣೆಗಾಗಿ ತಂಡವೊಂದನ್ನು ಕರ್ನಾಟಕಕ್ಕೆ ಕಳುಹಿಸಿಕೊಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ