
ದಳಪತಿ ಪಟ್ಟಾಭಿಷೇಕದ ಅಸಲಿ 'ಕಿಂಗ್ ಮೇಕರ್' ಯಾರು ಗೊತ್ತಾ? ತಮಿಳುನಾಡಿನಲ್ಲಿ ಸ್ಟಾಲಿನ್ ಕೋಟೆ ಧೂಳೀಪಟ ಮಾಡಿದ 'ಸೈಲೆಂಟ್ ಚಾಣಕ್ಯ'ನ ಮ್ಯಾಜಿಕ್!
ಬೆಳ್ಳಿಪರದೆಯ ಮೇಲೆ 'ಬಾಕ್ಸ್ ಆಫೀಸ್ ಸುಲ್ತಾನ್' ಆಗಿ ಮೆರೆಯುತ್ತಿದ್ದ ದಳಪತಿ ವಿಜಯ್ (Thalapathy Vijay), ಈಗ ತಮಿಳುನಾಡಿನ ರಾಜಕೀಯ ಅಖಾಡದಲ್ಲೂ ರಿಯಲ್ 'ವಿಜಯ' ಪತಾಕೆ ಹಾರಿಸಿದ್ದಾರೆ. ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದೈತ್ಯ ಮರಗಳ ನೆರಳಿನಲ್ಲಿದ್ದ ತಮಿಳು ರಾಜಕಾರಣಕ್ಕೆ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ ಕೊಡಲಿ ಪೆಟ್ಟು ನೀಡಿದೆ. ಆದರೆ, ವಿಜಯ್ ಅವರ ಈ ಐತಿಹಾಸಿಕ ಗೆಲುವಿನ ಹಿಂದೆ ಸಿನಿಮಾ ನಿರ್ದೇಶಕರಿಗಿಂತಲೂ ಪವರ್‌ಫುಲ್ ಆದ ಒಬ್ಬ 'ಪೊಲಿಟಿಕಲ್ ಡೈರೆಕ್ಟರ್' ಕೆಲಸ ಮಾಡಿದ್ದಾರೆ. ಅವರೇ ಚುನಾವಣಾ ತಂತ್ರಜ್ಞ ಜಾನ್ ಆರೋಕಿಯಾಸಾಮಿ!
ಯಾರು ಈ ಜಾನ್? ವಿಜಯ್ ಕೈಹಿಡಿದಿದ್ದೇಕೆ?
ಚುನಾವಣೆಗೂ ಮುನ್ನ ದಳಪತಿ ವಿಜಯ್ ಮುಂದೆ ಹತ್ತಾರು ಆಫರ್ ಇತ್ತು. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು ಮತ್ತು ಆಂಧ್ರದ ಪವನ್ ಕಲ್ಯಾಣ್ ವಿಜಯ್ ಅವರನ್ನು ತಮ್ಮ ಮೈತ್ರಿಕೂಟಕ್ಕೆ ಎಳೆದುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ, ಜಾನ್ ಆರೋಕಿಯಾಸಾಮಿ (John Arokiasamy) ಎಂಬ ಈ ಚಾಣಕ್ಯ ಮಾತ್ರ ವಿಜಯ್ ಕಿವಿಯಲ್ಲಿ ಒಂದು ಮಂತ್ರ ಜಪಿಸಿದ್ದರು – "ಯಾವುದೇ ಕಾರಣಕ್ಕೂ ಮೈತ್ರಿ ಬೇಡ, ನಾವೇ ಒಂಟಿ ಸಲಗನಾಗಿ ನುಗ್ಗೋಣ!". ತಮಿಳುನಾಡಿನ ದ್ರಾವಿಡ ಮಣ್ಣಿನ ಗುಣವನ್ನರಿತಿದ್ದ ಜಾನ್, ವಿಜಯ್ ಅವರನ್ನು ಸ್ವತಂತ್ರವಾಗಿ ಕಣಕ್ಕಿಳಿಸಿ ಡಿಎಂಕೆ ವಿರೋಧಿ ಮತಗಳು ಚದುರದಂತೆ ನೋಡಿಕೊಂಡರು. ಇಂದು ಫಲಿತಾಂಶ ಬಂದಾಗ ಜಾನ್ ಅವರ ಈ 'ಬೋಲ್ಡ್ ಸ್ಟೆಪ್' ಅಕ್ಷರಶಃ ವರ್ಕ್ ಆಗಿದೆ!
ಸಾಮಾನ್ಯವಾಗಿ ಹೊಸ ಪಕ್ಷಗಳು ಎಲ್ಲರನ್ನೂ ಟೀಕಿಸುತ್ತಾ ಗೊಂದಲ ಸೃಷ್ಟಿಸಿಕೊಳ್ಳುತ್ತವೆ. ಆದರೆ ಜಾನ್ ಇಲ್ಲಿ ಒಂದು ಮಾಸ್ಟರ್ ಪ್ಲಾನ್ ಹೆಣೆದಿದ್ದರು. ಅವರು ವಿಜಯ್ ಅವರಿಗೆ ನೀಡಿದ ಸಲಹೆ ಒಂದೇ – "ನಮ್ಮ ನೇರ ಯುದ್ಧ ಸ್ಟಾಲಿನ್ ಜೊತೆ ಮಾತ್ರ!". ಉದಯನಿಧಿ ಸ್ಟಾಲಿನ್ ಅಥವಾ ಇನ್ಯಾವುದೋ ನಾಯಕರನ್ನು ಟೀಕಿಸದೆ, ಇಡೀ ಚುನಾವಣೆಯನ್ನು "ಸ್ಟಾಲಿನ್ ವರ್ಸಸ್ ವಿಜಯ್" ಎಂಬ ದ್ವಂದ್ವ ಕಾಳಗವನ್ನಾಗಿ ಪರಿವರ್ತಿಸಿದರು. ಇದರಿಂದ ಮತದಾರರಲ್ಲಿ "ಡಿಎಂಕೆಗೆ ಪರ್ಯಾಯ ವಿಜಯ್ ಮಾತ್ರ" ಎಂಬ ಭಾವನೆ ಬಲವಾಗಿ ಬಿತ್ತಲ್ಪಟ್ಟಿತು.
ಫ್ಯಾನ್ಸ್ ಮಾತ್ರವಲ್ಲ, ಫ್ಯಾಮಿಲಿಗಳೂ ಫಿದಾ!
ವಿಜಯ್ ಕೇವಲ ಸಿನಿ ಪ್ರೇಮಿಗಳನ್ನು ನಂಬಿ ಮೈದಾನಕ್ಕೆ ಇಳಿಯಲಿಲ್ಲ. ಜಾನ್ ಅವರ ತಂತ್ರಗಾರಿಕೆಯಂತೆ ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳಾ ಮತದಾರರನ್ನು ಸೆಳೆಯಲು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ವಿಜಯ್ ಪೆರಿಯಾರ್ ದಿಡಲ್‌ಗೆ ಭೇಟಿ ನೀಡಿದ್ದು ಸುಮ್ಮನೆ ಅಲ್ಲ, ಅದು ಜಾತ್ಯತೀತ ಮತಗಳನ್ನು ಸೆಳೆಯಲು ಜಾನ್ ಹೆಣೆದಿದ್ದ ಚಕ್ರವ್ಯೂಹದ ಭಾಗವಾಗಿತ್ತು! ಅಂದುಕೊಂಡಂತೆ ಮಹಿಳೆಯರು ಮತ್ತು ಯುವಜನತೆ ವಿಜಯ್ ಕೈ ಹಿಡಿದಿದ್ದಾರೆ.
ವಿಶೇಷವೆಂದರೆ, ಈ ಜಾನ್ ಆರೋಕಿಯಾಸಾಮಿ ಸ್ಯಾಂಡಲ್‌ವುಡ್ ಮತ್ತು ಕರ್ನಾಟಕ ರಾಜಕಾರಣಕ್ಕೂ ಚಿರಪರಿಚಿತ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇವರೇ ಸಲಹೆಗಾರರಾಗಿದ್ದರು. ಕಾರ್ಪೊರೇಟ್ ಜಗತ್ತಿನಿಂದ ರಾಜಕೀಯಕ್ಕೆ ಕಾಲಿಟ್ಟ ಜಾನ್, ಇಂದು ದಕ್ಷಿಣ ಭಾರತದ ಅತಿ ದೊಡ್ಡ ಚುನಾವಣಾ ತಂತ್ರಜ್ಞನಾಗಿ ಹೊರಹೊಮ್ಮಿದ್ದಾರೆ.
ಇಂದು ಗೂಗಲ್‌ನಲ್ಲಿ ವಿಜಯ್ ಹೆಸರಿಗಿಂತ ಹೆಚ್ಚಾಗಿ ಜಾನ್ ಆರೋಕಿಯಾಸಾಮಿ ಬಗ್ಗೆ ಜನ ಹುಡುಕಾಡುತ್ತಿದ್ದಾರೆ. ಸಿನಿಮಾ ಪರದೆಯ ಮೇಲೆ ನೂರಾರು ವಿಲನ್‌ಗಳನ್ನು ಒದ್ದೋಡಿಸುತ್ತಿದ್ದ ದಳಪತಿಯನ್ನು, ರಾಜಕೀಯದಲ್ಲಿ ಒಬ್ಬ ರಿಯಲ್ ಹೀರೊ ಆಗಿ ರೂಪಿಸಿದ ಶ್ರೇಯ ಈ 'ಪೊಲಿಟಿಕಲ್ ಮಾಸ್ಟರ್‌ಮೈಂಡ್'ಗೆ ಸಲ್ಲುತ್ತದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ