Latest Videos

ರಾಮ ಮಂದಿರ ಸ್ಫೋಟಿಸುವ ಬೆದರಿಕೆ, ಜೈಶ್ ಇ ಮೊಹಮ್ಮದ್ ಉಗ್ರರ ಆಡಿಯೋ ಬೆನಲ್ಲೇ ಹೈ ಅಲರ್ಟ್!

By Chethan KumarFirst Published Jun 14, 2024, 7:59 PM IST
Highlights

ಆಯೋಧ್ಯೆಯ ಭವ್ಯ ರಾಮ ಮಂದಿರ ಸ್ಫೋಟಿಸುವುದಾಗಿ ಜೈಶ್ ಇ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಆಡಿಯೋ ಬೆದರಿಕೆ ಹಾಕಿದೆ. 2001ರ ದಾಳಿಯಂತೆ ಮಹಾ ಸ್ಫೋಟ ನಡೆಸುವುದಾಗಿ ಈ ಆಡಿಯೋದಲ್ಲಿ ಬೆದರಿಕೆ ಹಾಕಲಾಗಿದೆ. ಇತ್ತ ಆಯೋಧ್ಯೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 

ಆಯೋಧ್ಯೆ(ಜೂ.14) ಭವ್ಯ ರಾಮ ಮಂದಿರ ಪ್ರಾಣಪ್ರತಿಷ್ಠೆ ಬಳಿಕ ಭಕ್ತರು ಬಾಲರಾಮನ ದರ್ಶನ್ ಪಡೆದು ಪುನೀತರಾಗುತ್ತಿದ್ದಾರೆ. ಶತ ಶತ ಮಾನಗಳ ಕನಸು ನನಸಾದ ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಹಲವು ಬೆದರಿಕೆಗಳೂ ಬಂದಿದೆ. ಇದೀಗ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಆಡಿಯೋ ಮೂಲಕ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದೆ. 2001ರಲ್ಲಿ ಜೈಶ್ ಇ ಮೊಹಮ್ಮದ್ ನಡೆಸಿದ ದಾಳಿಗಿಂತ ಭೀಕರ ದಾಳಿ ನಡೆಸಲಾಗುತ್ತದೆ ಎಂದು ಉಗ್ರರು ಬೆದರಿಕೆ ಹಾಕಿದ್ದಾರೆ.

ರಾಮ ಮಂದಿರ ಪ್ರಾಣಪ್ರತಿಷ್ಠೆ ವೇಳೆ ಕೆಲ ಪಾಕಿಸ್ತಾನದ ಮೂಲಕ ಭಯೋತ್ಪಾದಕ ಸಂಘಟನೆಗಳು ರಾಮ ಮಂದಿರ ಸ್ಫೋಟಿಸುವುದಾಗಿ, ದಾಳಿ ನಡೆಸುವುದಾಗಿ ಬೆದರಿಕೆ ಹಾಕಿತ್ತು. ಮಸೀದಿ ಮೇಲೆ ರಾಮ ಮಂದಿರ ಕಟ್ಟಲಾಗಿದೆ. ಅಲ್ಪಸಂಖ್ಯಾತರ ವಿರುದ್ದ ಹಿಂದೂಗಳು ದಬ್ಬಾಳಿಕೆ ನಡೆಸಲಾಗುತ್ತಿದೆ ಎಂಬ ಭಯೋತ್ಪಾದಕರ ಹೇಳಿಕೆಗಳು ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಜೈಶ್ ಇ ಮೊಹಮ್ಮದ್ ಆಡಿಯೋ ಬೆದರಿಕೆ ಮೂಲಕ ಮತ್ತೊಂದು ಸಂದೇಶ ರವಾನಿಸಿದೆ.

ರಾಮನ ಬಳಿಕ ಈಗ ಸೀತಾ ಮಂದಿರ ನಿರ್ಮಾಣ: ಅಮಿತ್‌ ಶಾ

ಕಾಶ್ಮೀರದಲ್ಲಿ ನಡೆದ ಸತತ ಉಗ್ರ ದಾಳಿ ಬೆನ್ನಲ್ಲೇ ಇದೀಗ ರಾಮ ಮಂದಿರ ಸ್ಫೋಟ ಬೆದರಿಕೆ ಭಾರಿ ಆತಂಕ ಸೃಷ್ಟಿಸಿದೆ. ಈ ಆಡಿಯೋ ಬಹಿರಂಗವಾದ ಬೆನ್ನಲ್ಲೇ ಆಯೋಧ್ಯೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರಾಮ ಮಂದಿರ ಆವರಣ ಪ್ರವೇಶಿಸುವ ಮುನ್ನ ತಪಾಸಣೆ, ಪರೀಶೀಲನೆ ಬಿಗಿಗೊಳಿಸಲಾಗಿದೆ. ಆಯೋಧ್ಯೆಗೆ ಆಗಮಿಸುವ ಹಾಗೂ ಹೊರ ಹೋಗುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಭದ್ರತಾ ಪಡೆಗಳು ಆಡಿಯೋ ಕುರಿತು ತನಿಖೆ ಆರಂಭಿಸಿದೆ. 

ಲಷ್ಕರ್ ಇ ತೈಬಾ ಹಾಗೂ ದಿ ರೆಸೆಸ್ಟೆಂಟ್ ಫ್ರಂಟ್ ಉಗ್ರ ಸಂಘಟನೆ ಭಯೋತ್ಪಾದಕ ಫರ್ಹತುಲ್ಹ ಈಗಾಗಲೇ ರಾಮ ಮಂದಿರ ಸ್ಫೋಟಿಸುವ ಬೆದರಿಕೆ ಹಾಕಿದ್ದ. ರಾಮ ಮಂದಿರ ಪ್ರಾಣಪ್ರತಿಷ್ಠೆ ಬೆನ್ನಲ್ಲೇ ಫರ್ಹತುಲ್ಹ ವಿಡಿಯೋ ಸಂದೇಶ ಕಳುಹಿಸಿದ್ದ. ಡಿಕ್ಲರೇಶನ್ ಆಫ್ ವಾರ್ ಅನ್ನೋ ಈ ವಿಡಿಯೋ ಸಂದೇಶದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ದ ಜಿಹಾದಿ ಯುದ್ಧ ಘೋಷಣೆ ಮಾಡಿದ್ದ. ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೂ, ನೂಪರ್ ಶರ್ಮಾ, ನವೀನ್ ಕುಮಾರ್ ಜಿಂದಾಲ್ ಸೇರಿದಂತೆ ಕೆಲ ಬಿಜೆಪಿ ಹಾಗೂ ಹಿಂದುತ್ವ ನಾಯಕರಿಗೂ ಬೆದರಿಕೆ ಹಾಕಿದ್ದ. ಇಷ್ಟೇ ಅಲ್ಲ ಕಾಶ್ಮೀರದಿಂದಲೇ ದಾಳಿ ಶುರುವಾಗುವುದಾಗಿ ಸೂಚಿಸಿದ್ದ.

ಇದೇ ವಿಡಿಯೋ ಸಂದೇಶದಲ್ಲಿ ಭಾರತದ ಹಲವು ನಗರಗಳಲ್ಲಿ ನಮ್ಮ ಸದಸ್ಯರು ನಡೆಸಿದ ಯೋಜನೆಗೆ ಮೋದಿ ಸರ್ಕಾರ ಅಡ್ಡಗಾಲು ಹಾಕಿದೆ. ಇದಕ್ಕೆ ಪ್ರತೀಕಾರ ದೊಡ್ಡದಾಗಿ ತೀರಿಸುವುದಾಗಿ ಹೇಳಿದ್ದ. ಇದೀಗ ಫರ್ಹತುಲ್ಹ ಹಳೇ ಬೆದರಿಕೆ ಪ್ರಕಾರ,ಕಾಶ್ಮೀರದಲ್ಲಿ ಸತತ ಉಗ್ರರ ದಾಳಿಯಾಗಿದೆ. ಇದೀಗ ಜೈಶ್ ಇ ಮೊಹಮ್ಮದ್ ಸಂಘಟನೆಯ ರಾಮ ಮಂದಿರ ದಾಳಿ ಬೆದರಿಕೆ ಹಾಕಲಾಗಿದೆ. ಜೈಶ್ ಇ ಮೊಹಮ್ಮದ್ ಆಡಿಯೋ ಸಂದೇಶವನ್ನು ಭದ್ರತಾ ಪಡೆಗಳು ಗಂಭೀರವಾಗಿ ಪರಿಗಣಿಸಿದೆ.

'ಕೆಲಸಕ್ಕೆ ಬಾರದ ಮಂದಿರ ಕಟ್ಟಿದ್ದಾರೆ..' ಎಂದ ಇಂಡಿಯಾ ಮೈತ್ರಿ ಪಕ್ಷದ ಕಾರ್ಯದರ್ಶಿ, ಬಿಜೆಪಿ ತಿರುಗೇಟು!
 

click me!