ದೇವಸ್ಥಾನ, ಮಸೀದಿಯಲ್ಲಿ ಮುಂಜಾನೆ ಭಕ್ತಿಗೀತೆ ಬದಲು ಕೊರೋನಾ ಜಾಗೃತಿ!

By Suvarna NewsFirst Published May 19, 2021, 11:06 AM IST
Highlights

* ಕೊರೋನಾ ಸೋಂಕು ನಿಯಂತ್ರಣ ಮತ್ತು ಲಸಿಕೆ ಜಾಗೃತಿ ಬಗ್ಗೆ ಮೊಬೈಲ್‌ ಕಾಲರ್‌ಟ್ಯೂನ್‌ 

 * ಕೇರಳದ ಕಾಸರಗೋಡಿನ ತಿರುತಿ ಗ್ರಾಮದ ಭಗವತಿ ದೇಗುಲದಲ್ಲಿ ಮುಂಜಾನೆ ಭಕ್ತಿಗೀತೆ ಬದಲು, ಕೊರೋನಾ ಜಾಗೃತಿಯ ಸಂದೇಶ 

 * ಬೆಳಗಿನ ಜಾವ 4 ಗಂಟೆ ಮತ್ತು ಸಂಜೆ 5 ಗಂಟೆಗೆ ಕೋವಿಡ್‌ ಜಾಗೃತಿ ಸಂದೇಶ

ಕಾಸರಗೋಡು(ಮೇ.19): ಕೊರೋನಾ ಸೋಂಕು ನಿಯಂತ್ರಣ ಮತ್ತು ಲಸಿಕೆ ಜಾಗೃತಿ ಬಗ್ಗೆ ಮೊಬೈಲ್‌ ಕಾಲರ್‌ಟ್ಯೂನ್‌ ಗೊತ್ತು. ಆದರೆ ಕೇರಳದ ಕಾಸರಗೋಡಿನ ತಿರುತಿ ಗ್ರಾಮದ ಭಗವತಿ ದೇಗುಲದಲ್ಲಿ ಮುಂಜಾನೆ ಭಕ್ತಿಗೀತೆ ಬದಲು, ಕೊರೋನಾ ಜಾಗೃತಿಯ ಸಂದೇಶ ಪ್ರಸಾರ ಮಾಡಲಾಗುತ್ತಿದೆ.

ದೇವಸ್ಥಾನದ ಮೈಕ್‌ ಮೂಲಕ ಬೆಳಗಿನ ಜಾವ 4 ಗಂಟೆ ಮತ್ತು ಸಂಜೆ 5 ಗಂಟೆಗೆ ಕೋವಿಡ್‌ ಜಾಗೃತಿ ಸಂದೇಶ ಭಿತ್ತರಿಸಲಾಗುತ್ತಿದೆ. ಈ ಮಾಹಿತಿಯನ್ನು ಸ್ಥಳೀಯ ತಿಯಾ ಸಮುದಾಯ ಮತ್ತು ಮುಸ್ಲಿಮರು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಸಂದೇಶ 2 ಕಿ.ಮೀ ವಾಪ್ತಿಯಲ್ಲಿ ಕೇಳಲ್ಪಡುತ್ತಿದೆ.

ಜೊತೆಗೆ ತಿರುತಿಯ ಜುಮ್ಮಾ ಮಸೀದಿಯಲ್ಲೂ ಬೆಳಗ್ಗೆ ಮತ್ತು ಸಂಜೆಯ ಪ್ರಾರ್ಥನೆ ಬದಲು ಕೊರೋನಾ ಜಾಗೃತಿ ಸಂದೇಶ ಭಿತ್ತರಿಸಲು ನಿರ್ಧರಿಸಲಾಗುತ್ತಿದೆ.

"

ಏನೆಲ್ಲಾ ಸಂದೇಶ ಪ್ರಸಾರ?

ತೀರಾ ಅಗತ್ಯವಿಲ್ಲದೆ ಅಕ್ಕಪಕ್ಕದವರ ಮನೆಗಳಿಗೆ ಹೋಗಬೇಡಿ. ಹುಟ್ಟುಹಬ್ಬದ ಪಾರ್ಟಿ ಸೇರಿ ಇನ್ನಿತರ ಯಾವುದೇ ಪಾರ್ಟಿಗಳಿಗೆ ನಿಮ್ಮ ಮಕ್ಕಳನ್ನು ಇತರರ ಮನೆಗೆ ಕಳಿಸಬೇಡಿ. ಎಲ್ಲರೂ ಸಹ ಮಾಸ್ಕ್‌ಗಳನ್ನು ಸರಿಯಾಗಿ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಪಾಲಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಉಗಿಯಬೇಡಿ. ಇದು ನಮ್ಮ ಸಾಮಾಜಿಕ ಜವಾಬ್ದಾರಿ. ಕೊರೋನಾ ಬಗ್ಗೆ ನಮ್ಮಲ್ಲಿ ಜಾಗೃತಿಯಿರಬೇಕೇ ಹೊರತು ಭೀತಿಯಲ್ಲ ಎಂದು ಈ ಸಂದೇಶದಲ್ಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!